ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ವ್ಯಾಪಕವಾಗಿರುವ ಡಿಜಿಟಲ್ ಅರೆಸ್ಟ್ ವಂಚನಾ ಜಾಲಕ್ಕೆ ಶಿವಮೊಗ್ಗದ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಬರೋಬ್ಬರಿ 51 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಲುಕ್ ಅಲ್ಲಿ ಅವ್ನು ಹೀರೋ, ಕಿಕ್ ಅಲ್ಲಿ ಇದ್ರೆ ಫುಲ್ ಅನ್ ಟೆರರ್’: ಹೇಗಿದೆ ದರ್ಶನ್ ಅಭಿನಯದ ಡೆವಿಲ್ ಟ್ರೈಲರ್?
Digital Arrest Shivamogga ಹೇಗಾಯ್ತು ಘಟನೆ
ಶಿವಮೊಗ್ಗದ ದೂರುದಾರರೊಬ್ಬರಿಗೆ ಅಪರಿಚಿತ ಫೋನ್ ನಂಬರ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿಗಳು ತಾವೇ ಮುಂಬೈ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ನಟಿಸಿದ್ದಾರೆ. ವಂಚಕರು ನಂತರ ದೂರುದಾರರಿಗೆ ಯಾರೋ ಅಪರಿಚಿತರು ನಿಮ್ಮ ವೈಯಕ್ತಿಕ ದಾಖಲಾತಿಗಳನ್ನು ಬಳಸಿ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದಾರೆ. ಪಿಎಫ್‌ಐ (PFI) ಸಂಘಟನೆಯವರು ಆ ಖಾತೆಗೆ 2 ಕೋಟಿ ಹಣವನ್ನು ಜಮಾ ಮಾಡಿದ್ದು, ಅದರಿಂದ ನೀವು 20 ಲಕ್ಷ ಕಮಿಷನ್ ಪಡೆದಿದ್ದೀರಿ. ಈ ಕಾರಣಕ್ಕೆ ನಿಮ್ಮ ಮೇಲೆ ಮುಂಬೈ ಕ್ರೈಂ ಬ್ರಾಂಚ್‌ನಲ್ಲಿ ಕೇಸ್ ದಾಖಲಾಗಿದೆ ಎಂದು ಬೆದರಿಸಿದ್ದಾರೆ.
ಹಾಗೆಯೇ ವಂಚಕರು ದೂರುದಾರರಿಗೆ ನಕಲಿ ಅರೆಸ್ಟ್ ವಾರೆಂಟ್ ಅನ್ನು ಕಳುಹಿಸಿದ್ದಾರೆ. ಅಲ್ಲದೆ, ದೂರುದಾರರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್‌ಬಿಐ (RBI) ಪರಿಶೀಲಿಸಬೇಕು ಎಂದು ಸುಳ್ಳು ಹೇಳಿದ್ದಾರೆ. ಇದರ ನಂತರ, ವಂಚಕರು ಮೋಸದಿಂದ ದುರುದಾರರ ಬ್ಯಾಂಕ್ ಖಾತೆಯಿಂದ ನಿಖರವಾಗಿ 51,30,402 ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸಂತ್ರಸ್ತರು ಇದೀಗ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Digital Arrest Shivamogga Man Loses 51 Lakh


