MALENADUTODAY.COM |SHIVAMOGGA| #KANNADANEWSWEB
ಹಂದಿ ಅಣ್ಣಿ ಕೊಲೆ ಮಾಡಿದ ಇಬ್ಬರು ಆರೋಪಿಗಳು ಜಾಮೀನಿನ ಮೇಲೆ ರಿಲೀಸ್..ಹೆಬ್ಬಟ್ಟು ಮಂಜನ ಜಂಗಾಬಲ ಕುಸಿಯುವಂತೆ ಮಾಡಿದ್ದ ಈ ಮರ್ಡರ್ ಮತ್ತೊಂದು ಅಟ್ಯಾಕ್ ಗೆ ಮುನ್ನುಡಿ ಬರೆದ್ರೂ ಅಚ್ಚರಿಯಿಲ್ಲ ಎನ್ನುತ್ತಿದೆ ರೌಡಿ ಸಾಮ್ರಾಜ್ಯ ಈ ಶಿರ್ಷಿಕೆ ಅಡಿ ಮಲೆನಾಡು ಟುಡೆ ಇತ್ತಿಚ್ಚೆಗೆ ವರದಿ ಪ್ರಕಟಿಸಿತ್ತು. ಇದೀಗ ಈ ವಿಷಯ (15-03-23) ನಿಜವಾಗಿದೆ. ನಟೋರಿಯಸ್ ರೌಡಿ ಹೆಬ್ಬೆಟ್ಟು ಮಂಜನ ರೈಟ್ ಹ್ಯಾಂಡ್ ಹಂದಿ ಅಣ್ಣಿಯ ಕೊಲೆ ಮಾಡಿ ಜಾಮೀನು ಮೇಲೆ ಬಿಡುಗಡೆಗೊಂಡ ಇಬ್ಬರು ಆರೋಪಿಗಳ ಮೇಲೆ ಬರ್ಬರ ದಾಳಿ ನಡೆದಿದೆ.
ಕೋರ್ಟ್ ಡೇಟ್ ತಿಳಿದುಕೊಂಡು ಅಟ್ಯಾಕ್ ಮಾಡೋದು ಈಗಿನ ಸ್ಕೆಚ್
ಹೌದು ಕೊಲೆ ಮಾಡಿದ ಆರೋಪಿಗಳ ವಿರುದ್ಧ ದ್ವೇಷ ಪ್ರತಿಕಾರಕ್ಕಾಗಿ ಹೊಂಚು ಹಾಕುವ ದುಷ್ಕರ್ಮಿಗಳು, ಎದುರಾಳಿಗಳನ್ನು ತುಂಬಾ ಹುಡುಕುವ ಗೋಜಿಗೆ ಹೋಗುವುದಿಲ್ಲ. ಜಾಮೀನು ಪಡೆದು ಎಲ್ಲೊ ಒಂದು ಕಡೆ ಭೂಗತವಾಗುವ ಎದುರಾಳಿ, ಕೋರ್ಟ್ ಗೆ ಬರುವ ದಿನವನ್ನು ಹೊಂಚು ಹಾಕುವ ತಂಡ ಪಡೆದಿರುತ್ತೆ. ಆ ದಿನ ಎದುರಾಳಿ ಮಿಸ್ ಆಗದೆ ಕೋರ್ಟ್ ಗೆ ಹಾಜರಾಗಬೇಕಾಗುತ್ತದೆ. ಇದೇ ಸಮಯವನ್ನು ಬೆಳಿಗ್ಗೆ ಎದುರಾಳಿ ಮನೆಯಿಂದ ಹೊರಟು ಕೋರ್ಟ್ ಬರುವಾಗ ಇಲ್ಲವೇ ಕೋರ್ಟ್ ಮುಗಿಸಿಕೊಂಡು ವಾಪಸ್ಸು ಹೋಗುವಾಗ, ದುತ್ತನೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪ್ರತಿಕಾರ ತೀರಿಸಿಕೊಳ್ಳುತ್ತೆ ದುಷ್ಕರ್ಮಿಗಳ ತಂಡ.
ಹಂದಿ ಅಣ್ಣಿಯನ್ನು ಎದುರಾಳಿ ಕಾಡಾ ಕಾರ್ತಿ ತಂಡ ಸ್ಕೆಚ್ ಹಾಕಿದ್ದು ಇದೇ ರೀತಿ. 14-07-22 ರಂದು ಹಂದಿ ಅಣ್ಣಿ ಮೋಟಿ ವೆಂಕಟೇಶ್ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಶಿವಮೊಗ್ಗದ ಕೋರ್ಟ್ ಗೆ ಹಾಜರಾಗಲು ಹೊರಟಿದ್ದ. ಬೆಳಿಗ್ಗೆ 10.50 ಕ್ಕೆ ವಿನೋಬ ನಗರದ ಪೊಲೀಸ್ ಚೌಕಿಯ ಬಳಿ ಹಂದಿ ಅಣ್ಣಿ ಹೊಂಡಾ ಆಕ್ಟಿವಾ ದಲ್ಲಿ ಬರುವಾಗ ಕಾಡಾ ಕಾರ್ತಿ ಮತ್ತು ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು. ಹಂದಿ ಅಣ್ಣಿ ಕೊಲೆ ಪಾತಕ ಲೋಕದಲ್ಲಿ ಹೆಬ್ಬೆಟ್ ಮಂಜನಿಗೆ ದೊಡ್ಡ ಸೆಟ್ ಬ್ಯಾಕ್ ಎಂದು ಹೇಳಲಾಗಿತ್ತು. ನೆಚ್ಚಿನ ಬಂಟನ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಯಾರಾದ್ರೂ ಒಬ್ಬರೂ ಜೈಲಿನಿಂದ ಹೊರಬಂದ್ರೂ ಎತ್ತಿಬಿಡಬೇಕು ಎಂಬ ಆಲೋಚನೆ ಹಂದಿ ಅಣ್ಣಿ ಕಡೆಯ ಹುಡುಗರ ಸ್ಕೆಚ್ ಆಗಿತ್ತು.
ಕಾಡಾ ಕಾರ್ತಿ ವಿರುದ್ಧ ಮಚ್ಚು ಮಸೆಯುತ್ತಿದ್ದ ಹೆಬ್ಬೆಟ್ಟು ಮಂಜ ದೂರದಲ್ಲಿಯೇ ಕೂತು ಗೆಳೆಯನ ಕೊಲೆಗೆ ಈಗ ಪ್ರತಿಕಾರ ತೀರಿಸಿಕೊಂಡಿದ್ದಾನೆ ಎಂದು ಪಾತಕ ಲೋಕ ಮಾತಾಡಿಕೊಳ್ಳುತ್ತಿದೆ. ಹಂದಿ ಅಣ್ಣಿಯನ್ನು ಕಾಡಾ ಕಾರ್ತಿ ತಂಡ ಹೇಗೆ ಕೊಲೆಗೆ ಸ್ಕೆಚ್ ರೂಪಿಸಿತ್ತೋ ಅದೇ ರೀತಿ ಹೆಬ್ಬಟ್ಟು ಮಂಜನ ಶಿಷ್ಯ ವರ್ಗ ಜೈಲಿನಿಂದ ಬೇಲ್ ಮೇಲೆ ರಿಲೀಸ್ ಆಗಿದ್ದ ಮಧು ಮತ್ತು ಆಂಜನೇಯ ವಿರುದ್ಧ ಸ್ಕೆಚ್ ಹಾಕಿ ಸೇಡಿ ತೀರಿಸಿಕೊಂಡಿದೆ.
ನಿನ್ನೆ ಮಧು ಮತ್ತು ಆಂಜನೇಯ ಶಿವಮೊಗ್ಗ ಕೋರ್ಟ್ ಮುಗಿಸಿಕೊಂಡು ಬೈಕ್ ನಲ್ಲಿ ತಮ್ಮ ಊರಿಗೆ ವಾಪಸ್ಸು ಹೋಗುವಾಗ ಅಕ್ಷರ ಸಹ ಮೈ ಮರೆತಿದ್ದಾರೆ. ಸೇಡು ತೀರಿಸಿಕೊಳ್ಳಲು ಉದ್ದೇಶಿಸಿದ್ದ ತಂಡ ಇವರು ಕೋರ್ಟ್ ಗೆ ಬರುವ ದಿನ ತಿಳಿದುಕೊಂಡೇ ಮಹೂರ್ತ ಫಿಕ್ಸ್ ಮಾಡಿದೆ. ಅಂದುಕೊಂಡಂತೆ ಮಧು ಮತ್ತು ಆಂಜನೇಯ ಕೋರ್ಟ್ ಮುಗಿಸಿಕೊಂಡು ವಾಪಸ್ಸು ಹೋಗುವ ಸಂದರ್ಭದಲ್ಲಿ ಕೊಲೆಗೆ ಸೂಕ್ತ ಸ್ಥಳ ನೋಡಿದ್ದಾರೆ. ಆದರೆ ಚೀಲೂರು ದಾಟಿ ಗೋವಿನಕೋವಿಯವರೆಗೆ ಹಿಂಬದಿ ಸ್ಕಾರ್ಪಿಯೋದಲ್ಲಿ ಅಟ್ಯಾಕ್ ಮಾಡಿ ಬೈಕ್ ಬೀಳಿಸಿದ್ದಾರೆ. ನಂತರ ಮಚ್ಟಿನಿಂದ ಹಲ್ಲೆ ನಡೆಸಿದ ಪರಿಣಾಮ ಆಂಜನೇಯ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಗಂಭೀರ ಗಾಯಗೊಂಡ ಮಧು ನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
2018 ರಲ್ಲಿ ನಟೋರಿಯಸ್ ರೌಡಿ ಬಂಕ್ ಬಾಲು ನನ್ನು ಅಂಬು ಅಲಿಯಾಸ್ ಅನಿಲ್ ತಂಡ ಕೊಲೆ ಮಾಡಿತ್ತು. ಅಂದು ಬಂಕ್ ಬಾಲು ನನ್ನು ಹಗಲೆಲ್ಲಾ ಕಾದು ಹೊಂಚುಹಾಕಿ, ಈ ದುಷ್ಕರ್ಮಿಗಳ ತಂಡ ಸಂಜೆಯ ನಂತರ ಬಾಲುನನ್ನು ಹಾತಿ ನಗರದ ಬಳಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೈದಿತ್ತು, ಕೊಲೆಯಾದ ಬಂಕ್ ಬಾಲು ನೆಚ್ಚಿನ ಶಿಷ್ಯನೇ ಈ ಕಾಡು ಕಾರ್ತಿ.ಯಾಗಿದ್ದ. 2017 ರಲ್ಲಿ ಶಿವಮೊಗ್ಗದ ಸೀಗೆಹಟ್ಟಿಯ ರೌಡಿ ಶೀಟರ್ ಅಂಬು ಅಲಿಯಾಸ್ ಅನಿಲ್ ಎಂಬುವನ ಮನೆಗೆ ನುಗ್ಗಿ ಬಾಲು ಹಲ್ಲೆ ನಡೆಸಿದ್ದ.ಗನ್ ಪಾಯಿಂಟ್ ಇಟ್ಟು ಕೊಲೆ ಮಾಡುವುದಾಗಿ ಗುಡುಗಿದ್ದ.ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ರೀತಿ ಅನಿಲ್ ಸ್ನೇಹಿತ ದರ್ಶನ್ ಗೆ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ.ಇವರ ಜೊತೆ ಸ್ಪಾಟ್ ನಾಗನ ಕೊಲೆಯಲ್ಲಿ ಭಾಗಿಯಾಗಿದ್ದ ಪ್ರವೀಣ್ ಕೂಡ ಬಾಲು ವಿರುದ್ಧ ಕತ್ತಿ ಮಸಿಯುತ್ತಿದ್ದ. ಬಂಕ್ ಬಾಲುನನ್ನು ನಾವು ಮೊದಲು ಮುಗಿಸದಿದ್ದರೇ..ಆತನೇ ನಮಗೆ ಮಹೂರ್ತ ಫಿಕ್ಸ್ ಮಾಡ್ತಾನೆಂಬ ಕಾರಣಕ್ಕೆ ಇವರೆಲ್ಲಾ ಸೇರಿಕೊಂಡು ಬಾಲು ಕೊಲೆ ಮಾಡಿದ್ರು. ಇವರೆಲ್ಲರಿಗೂ ಬಾಲುನನ್ನು ಎತ್ತಲು ಸ್ಕೆಚ್ ಹಾಕಿಕೊಟ್ಟವನು ಹಂದಿ ಅಣ್ಣಿ ಎಂಬದು ರೌಡಿ ಸಾಮ್ರಾಜ್ಯದ ಮಾತು. ಹಂದಿ ಅಣ್ಣಿ ಅಣತಿಯಂತೆ ಅಂದು ಹಗಲ್ಲೆಲ್ಲಾ ಗ್ಯಾಂಗ್ ಹೊಂಚು ಹಾಕಿ ಬಂಕ್ ಬಾಲುನನ್ನು ಕೊಲೆ ಮಾಡಿದ್ರು. ಈ ಸಂದರ್ಭದಲ್ಲಿ ಬಾಲು ಜೊತೆಗಿದ್ದವನೇ ಕಾಡಾ ಕಾರ್ತಿ..
ಬಂಕ್ ಬಾಲುನ ಅಂತ್ಯ ಸಂಸ್ಕಾರದ ವೇಳೆ ಸಮಾದಿ ಮೇಲೆ ಆಣೆ ಮಾಡಿದ ಬಂಕ್ ಬಾಲು ಶಿಷ್ಯರು..ಅಣಾ ನಿನ್ನ ತೆಗೆದವರನ್ನು ನಾವು ಬಿಡೋದಿಲ್ಲ ಎಂದು ಶಪಥ ಮಾಡಿದ್ರು..ಅದರ ಮುಂದುವರೆದ ಭಾಗವಾಗಿ ಹಂದಿ ಅಣ್ಣಿ ಕೊಲೆಯಾದ..ಈ ಕೊಲೆಗೆ ಹಿಮ್ಮೇಳ ಬಾರಿಸಿದವರು ಯಾರು ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬರಲಿಲ್ಲ. ಆದ್ರೆ ನಾವು ಹಂದಿ ಅಣ್ಣಿಯನ್ನು ಕೊಲೆ ಮಾಡಿದೆವು ಎಂದು ಕಾಡಾ ಕಾರ್ತಿ ಟೀಂ ಪೊಲೀಸರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರಿಂದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿತ್ತು. ಈಗ ಹಂದಿ ಅಣ್ಣಿ ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬ ಕೊಲೆಯಾಗಿದ್ದಾನೆ.
READ |ಸೇಮ್ ಅಟ್ಯಾಕ್ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ
ಈ ಕೊಲೆಯ ಹೊಣೆ ಹೊರುವವರು ಯಾರು ಸಲಗ ಸಿನಿಮಾದಂತಾಗಿದೆ ಶಿವಮೊಗ್ಗದ ರೌಡಿ ಸಾಮ್ರಾಜ್ಯ
ಇತ್ತಿಚ್ಚಿನ ದ್ವೇಷ ಪ್ರತಿಕಾರದ ಕೊಲೆಗೆ ಹೊಸ ಸ್ವರೂಪ ನೀಡಿದ್ದಾರೆ ರೌಡಿಗಳು. ಬ್ಯಾಟು ಬೀಸಿ ಕೊಲೆ ಮಾಡುವ ಪಂಟರ್ ಗಳಿಗೆ ಬ್ಯಾಟ್ಸ್ ಮನ್ ಗಳು ಎನ್ನುತ್ತಾರೆ. ಇವರು ಕೊಲೆ ಮಾಡೋದು ನಂತ್ರ ಬೇರೆಡೆ ಗಾಯಬ್ ಆಗೋದು, ಆದ್ರೆ ಪೊಲೀಸ್ರಿಗೆ ಅಂದರ್ ಆಗೋರೇ ಬೇರೆ..ಅವರುಗಳೇ ನಾವೇ ಕೊಲೆ ಮಾಡಿದ್ದು ಅಂತಾ ಒಪ್ಪಿಕೊಳ್ತಾರೆ. ಆಂಜನೇಯ ಕೊಲೆ ಪ್ರಕರಣದಲ್ಲಿ ನಿಜವಾಗ್ಲೂ ಕೊಲೆ ಮಾಡಿದ ಆರೋಪಿಗಳು ಕೊಲೆ ಹೊಣೆ ಹೊರ್ತಾರಾ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಒಟ್ಟಿನಲ್ಲಿ ಶಿವಮೊಗ್ಗದ ರೌಡಿಸಂ ನಲ್ಲಿ ಕೊಲೆಗೆ ಪ್ರತಿಕಾರ ಎಂಬುದು ಮುಂದುವರೆದಿದ್ದು, ರೌಡಿ ವಲಯದಲ್ಲಿ ತಲ್ಲಣ ಉಂಟಾಗಿರುವುದಂತೂ ಸುಳ್ಳಲ್ಲ.
READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್ ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga handi anni murder,handi anni news,handi anni,handi anni murderers,handi anni murder case,handi anni murder acuused arrest,handi anni case,handi quilter,handi anni accused of murder,handhi anni is no more,anni dewani,rowdy sheeter #Crime, #Crimenews, #Davanagerenews, #Davanagerepolice, #Murder, #Murdernews, #Nyamathi, #Nyamathipolicestation, #Police, #Rowdy, #Rowdyattack, #Rowdysheeter, #Shimoga, #Shimogacrimenews, #Shimogarowdys, , #ಆರೋಪಿಗಳು, #ಕೊಲೆ, #ಗೋವಿನಕೋವಿ, #ಗೋವಿನಕೋವಿಗ್ರಾಮ, #ದಾವಣಗೆರೆ, #ನ್ಯಾಮತಿ, #ನ್ಯಾಮತಿತಾಲೂಕು, #ನ್ಯಾಮತಿಪೊಲೀಸ್, #ನ್ಯಾಮತಿಪೊಲೀಸ್_ಠಾಣೆ, #ಮರ್ಡರ್, #ರೌಡಿ, #ರೌಡಿಗಳಮೇಲೆದಾಳಿ, #ರೌಡಿಗಳು, #ರೌಡಿಹಂದಿಅಣ್ಣಿ, #ಹಂತಕರು
