Dharmasthala case mask man interview ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದನ್ನು ತೋರಿಸುವುದಾಗಿ ಮುಂದೆ ಬಂದಿರುವ ಅನಾಮಿಕನನ್ನು ರಾಷ್ಟ್ರೀಯ ಸುದ್ದಿವಾಹಿನಿ ಇಂಡಿಯಾ ಟುಡೆ ಎಕ್ಸ್ ಕ್ಲೂಸಿವ್ ಇಂಟರ್ವ್ಯೂವ್ ನಡೆಸಿದೆ. ವಾಹಿನಿಯ ವರದಿಗಾರ ಸಗಾಯ್ ರಾಜ್ ಅನಾಮಿಕನ ಜೊತೆ ಸಂದರ್ಶನ ನಡೆಸಿದ್ದಾರೆ. ಆ ಸಂದರ್ಶನದಲ್ಲಿ ಅನಾಮಿಕ ಮಹತ್ವದ ಮಾಹಿತಿ ನೀಡಿದ್ದಾನೆ. ಅನಾಮಿಕನ ಮಾತು ವೈಯಕ್ತಿಕ ಅಭಿಪ್ರಾಯವೇ ಹೊರತು ವಾಹಿನಿಯದ್ದಲ್ಲ ಎಂದು ಇಂಡಿಯಾ ಟುಡೆ ಪ್ರಕಟಿಸಿದೆ
ವರದಿಗಾರ (ಸಗಾಯ್ ರಾಜ್): ಸರ್, ನೀವು ಮೊದಲು ಕಂಪ್ಲೇಂಟ್ ಕೊಟ್ಟಿದ್ದೀರಿ. ತಾವು 1994 ರಿಂದ 2014ರವರೆಗೆ ಕೆಲಸ ಮಾಡಿದ್ದೀರಿ. ನಿಮ್ಮ ಕಂಪ್ಲೇಂಟ್‌ನಲ್ಲಿ ಏನನ್ನು ಉಲ್ಲೇಖ ಮಾಡಿದ್ದೀರಿ?
Dharmasthala case ಅನಾಮಿಕ: ಕಂಪ್ಲೇಂಟ್‌ನಲ್ಲಿ ಡೆಡ್ ಬಾಡಿಗಳನ್ನು ತೆಗೆಯಬೇಕು ಎಂದು ಉಲ್ಲೇಖ ಮಾಡಿದ್ದೇನೆ. ಈಗ ತೆಗೆಯುತ್ತಾ ಇದ್ದೇವೆ. ಕೆಲವು ಜಾಗಗಳು ಮಿಸ್‌ಮ್ಯಾಚ್ ಆಗಿವೆ. ಅಂದರೆ, ನಾವು ಹಾಕಿರುವ ಜಾಗದಲ್ಲಿ ಈಗ ರಸ್ತೆ ಆಗಿರುವುದರಿಂದ ಆಗಿನ ಪರಿಸ್ಥಿತಿಗೂ ಈಗಿನದಕ್ಕೂ ವ್ಯತ್ಯಾಸವಾಗಿದೆ. ಆಗ ಹಳೆ ರೋಡ್ ಇತ್ತು. ಈಗ ಜೆಸಿಬಿ ಕೆಲಸದಿಂದ ಗುರುತು ಮಾಡಲು ಸಾಧ್ಯವಾಗಲಿಲ್ಲ. ಬಾಹುಬಲಿ ಬೆಟ್ಟದಲ್ಲಿ ಒಬ್ಬ ಕೇರಳ ಮಹಿಳೆಯನ್ನು ಹೂತಿದ್ದೆ. ಅಲ್ಲಿಯೂ ನೋಡಲಾಗಿ ಮಣ್ಣಿನ ಕೆಲಸ ನಡೆದಿದೆ. ಅಲ್ಲಿ ಇಡೀ ದಿನ ಹುಡುಕಿದರೂ ಸಹ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ನೇತ್ರಾವತಿ ಸ್ನಾನಘಟ್ಟದ ಬಳಿ ಎಪ್ಪತ್ತರಷ್ಟು ಡೆಡ್ ಬಾಡಿಗಳನ್ನು ಹಾಕಿದ್ದೇವೆ.

ಅಲ್ಲಿ ತುಂಬಾ ಮಣ್ಣು ತುಂಬಿಸಿರುವುದರಿಂದ ಮಣ್ಣು ತೆಗೆಯಲು ಆಗಲಿಲ್ಲ. ಸಾಕಷ್ಟು ಕೆಲಸ ಮಾಡಿದೆವು, ಆದರೂ ಮಣ್ಣಿನಿಂದ ನೀರು ಬರುತ್ತಿದೆ. ಡ್ರೋನ್ ಕ್ಯಾಮರಾ ತಂದು ಹಾಕಿದರೂ ಅದರಲ್ಲಿ ಸಹ ನೀರು ಕಾಣುವುದರಿಂದ ಕಾಣೆಯಾದದ್ದು (ಮಿಸ್ಸಿಂಗ್) ಏನೂ ಕಾಣಲಿಲ್ಲ. ಜೆಸಿಬಿಯಿಂದ ತೆಗೆಯುವಾಗ ಅಡಿಯಿಂದ ನೀರು ಬರುತ್ತಿತ್ತು. ಮಣ್ಣು ಜಾಸ್ತಿ ಹಾಕಿದ್ದರಿಂದ ಡೆಡ್ ಬಾಡಿಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಸುಮಾರು 2-3 ದಿನ ಅಲ್ಲಿ ಕೆಲಸ ಮಾಡಿದೆವು. ಏನು ಸಿಗಲಿಲ್ಲ. ಅದರ ನಂತರ ಸಾಕಷ್ಟು ಪ್ರಯತ್ನ ಮಾಡಿದೆವು. ಅಲ್ಲಿಂದ ಮತ್ತೊಂದು ಕಡೆ ಬಾಹುಬಲಿ ಬೆಟ್ಟದಲ್ಲಿ ಇನ್ನೊಂದು ಜಾಗ ಇದೆ. ಅದನ್ನು ಸಹ ನೋಡಿದೆವು. ಏನಾದರೂ ಆಗಿದೆಯೇ ಅಂತಾ ಗೊತ್ತಿಲ್ಲ. 1 ರಿಂದ 5 ಜಾಗಗಳು ಇನ್ನು ಬಾಕಿ ಇವೆ. ಅದನ್ನೆಲ್ಲಾ ತೆಗೆದರೆ ಗೊತ್ತಾಗುತ್ತದೆ.

ವರದಿಗಾರ: ನೀವು 20 ವರ್ಷ ಇಲ್ಲಿ ಕೆಲಸ ಮಾಡುತ್ತಿದ್ದಾಗ ನಿಮಗೆ ಯಾರು ಸಂದೇಶ ಕೊಡುತ್ತಿದ್ದರು? ಈ ತರಹ ನೀವು ಒಂದು ಶವವನ್ನು ಹೂತುಹಾಕಬೇಕು, ಈ ತರಹ ಮೃತದೇಹವನ್ನು ಬಚ್ಚಿಡಬೇಕು ಅಂತಾ? ಯಾವ್ಯಾವ ಜಾಗ ಅವರು ಹೇಳಿದಂತೆ ಶವ ಹೂತುಹಾಕುವ ಜಾಗವೇ? ಅರಣ್ಯ ಪ್ರದೇಶವೇ?
ಅನಾಮಿಕ: ನಾವು ಶವ ಹೂತುಹಾಕುವ ಜಾಗ ಅಂತಾ ಏನೂ ಇರಲಿಲ್ಲ. ಅಲ್ಲೇ ಅರಣ್ಯ ಪ್ರದೇಶದಲ್ಲೇ ನಾವೆಲ್ಲಾ ಹೂತುಹಾಕುತ್ತಾ ಇದ್ದದ್ದು. ಎಲ್ಲಿ ಶವ ಸಿಗುತ್ತೋ ಅಲ್ಲಿಯೇ ತಂದು ಮಣ್ಣು ಮಾಡುತ್ತಾ ಇದ್ದೆವು. ಮತ್ತೆ ಅಲ್ಲಿ ಮಣ್ಣು ಮಾಡಬೇಕಾದರೆ ನಾವು 4-5 ಮಂದಿ ಸೇರಿ ಮಣ್ಣು ಮಾಡುತ್ತಾ ಇದ್ದೆವು. ಮಣ್ಣು ಮಾಡಬೇಕಾದರೆ ಡೆಡ್ ಬಾಡಿ ಎಲ್ಲಿ ಇರುತ್ತಿತ್ತೋ ಅಲ್ಲಿ ಮಣ್ಣು ಮಾಡುತ್ತಿದ್ದೆವು. ಹಾಗೆ ತುಂಬಾ ಕಡೆ ಡೆಡ್ ಬಾಡಿ ಹಾಕಿದೆವು. ಆದರೆ ಈಗ 20 ವರ್ಷಗಳ ನಂತರ ನನಗೆ ಪಾಪಪ್ರಜ್ಞೆ ಕಾಡಿ ನಾನು ಬಂದಿದ್ದು. ಸರಿಯಾಗಿ ನಮಗೆ ನೆಮ್ಮದಿಯ ನಿದ್ದೆ ಇರಲಿಲ್ಲ. ಪಾಪಪ್ರಜ್ಞೆಗಾಗಿ ನಾನು ಬಂದಿದ್ದು.

Dharmasthala case mask man interview
ವರದಿಗಾರ: ನೀವು ಬಾಡಿ ಸಿಕ್ಕಿತು ಅಂತಾ ಹೇಳುತ್ತಿದ್ದೀರಲ್ಲ. ಇದು ಭಕ್ತಾದಿಗಳ ಶವವೇ? ಇಲ್ಲ, ಲೋಕಲ್ ಜನರ ಶವವೇ? ಅಲ್ಲಿ ಬಹಳಷ್ಟು ಮಂದಿ ಏನನ್ನು ಹೇಳುತ್ತಾರಂದ್ರೆ, ಇಲ್ಲಿಗೆ ಬಂದು ಬಹಳಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು, ಇಲ್ಲಿ ಸಾವನ್ನಪ್ಪಿದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯಿಂದ ಸಾಯಲಿಕ್ಕೆ ಬರುತ್ತಾರೆ ಅಂತಾ. ನಿಮ್ಮ ಹೇಳಿಕೆ ಪ್ರಕಾರ, ದೂರಿನಲ್ಲಿ ಹುಡುಗಿಯರ ಶವ ಸಿಕ್ಕಿತು, ಲೈಂಗಿಕ ಹಲ್ಲೆ ಮಾಡಿದ್ದಾರೆ, ಕೆಲವರನ್ನು ಅತ್ಯಾಚಾರ ಮಾಡಿದ್ದಾರೆ, ಇಲ್ಲಿ ಕೊಲೆ ಮಾಡಿ ಶವ ಹಾಕಿದ್ದಾರೆ ಅಂತಾ. ಈ ಬಗ್ಗೆ ನೀವು ಏನನ್ನು ಹೇಳುತ್ತೀರಾ? ನಿಮಗೆ ಶವ ಭಕ್ತಾದಿಗಳದ್ದಾ ಅಥವಾ ಲೋಕಲ್ ಜನರದ್ದಾ ಅಂತಾ ಹೇಗೆ ಗುರುತು ಹಿಡಿಯುತ್ತೀರಿ?
ಅನಾಮಿಕ: ಭಕ್ತಾದಿಗಳ ಶವ ಅಂತಾ ಗುರುತು ಹಿಡಿಯುವುದಕ್ಕೆ ಆಗುತ್ತಿರಲಿಲ್ಲ. ಲೋಕಲ್ ಜನರದ್ದು ಅಂತಾನೂ ಗುರುತು ಹಿಡಿಯಲು ಆಗುತ್ತಿರಲಿಲ್ಲ. ಒಟ್ಟಿನಲ್ಲಿ ಡೆಡ್ ಬಾಡಿಗಳು ಇರುತ್ತಿದ್ದವು. ಸ್ವಲ್ಪ ಗಾಯಗಳು, ಮಾರ್ಕ್‌ಗಳು ಅದು ಇದು ಇರುತ್ತಿದ್ದವು. ನೋಡುವಾಗಲೂ ಗೊತ್ತಾಗುತ್ತದೆ. ಮತ್ತೆ ಅದು ಹೆಚ್ಚಾಗಿ ಹೆಣ್ಣು ಮಕ್ಕಳ ಡೆಡ್ ಬಾಡಿ ಆಗಿರುವುದರಿಂದ ನಾವು ಬೇರೆ ಉಪಾಯವಿಲ್ಲದೆ ಮಣ್ಣು ಮಾಡಬೇಕಾಗುತ್ತದೆ. ಅವರು ಮಾಡಲು ಹೇಳುತ್ತಾರೆ. ಮಾಹಿತಿ ಕಚೇರಿಯಿಂದ ಹೇಳುತ್ತಾರೆ. ಮ್ಯಾನೇಜರ್ ಹೇಳಿದಂತೆ ಮಾಹಿತಿ ಕಚೇರಿಯಿಂದ ನಮಗೆ ಮಾಹಿತಿ ಬರುತ್ತಿತ್ತು.

Dharmasthala case ವರದಿಗಾರ: ನೀವು ಅತ್ಯಾಚಾರವಾಗಿದೆ ಅಂತಾ ಹುಡುಗಿಯ ಶವವನ್ನು ಹೇಗೆ ಐಡೆಂಟಿಫೈ ಮಾಡುತ್ತೀರಿ?
ಅನಾಮಿಕ: ನಾನಾಗಿ ಐಡೆಂಟಿಫೈ ಮಾಡಲಿಲ್ಲ. ನೋಡುವಾಗ ಕಣ್ಣಿಗೆ ಹಾಗೆ ಕಾಣುತ್ತದೆ. ಅದನ್ನು ಡಾಕ್ಟರ್ ಅವರೇ ಐಡೆಂಟಿಫೈ ಮಾಡಬೇಕು. ನಾನು ಮಾಡಲಿಕ್ಕೆ ಆಗಲ್ಲ.
ವರದಿಗಾರ: ಅವರೆಲ್ಲಾ ಚಿಕ್ಕ ಚಿಕ್ಕ ಹುಡುಗಿಯರಾ? ಹೇಗೆ?
ಅನಾಮಿಕ: ಎಲ್ಲಾ ಮಿಶ್ರ. 35 ವರ್ಷ ಆಗಿರಬಹುದು, 15 ವರ್ಷದವರು ಇರಬಹುದು, 40 ವರ್ಷದವರು ಇರಬಹುದು. ಎಲ್ಲಾ ಮಿಶ್ರ ಶವಗಳು ಸಿಗುತ್ತಿದ್ದವು.
Dharmasthala case mask man interview
ವರದಿಗಾರ: ನಿಮ್ಮನ್ನು ಹುಡುಕಿಕೊಂಡು ಯಾರಾದರೂ ಬಂದಿರುವುದನ್ನು ನೀವು ನೋಡಿದ್ದೀರಾ 20 ವರ್ಷದಲ್ಲಿ?
ಅನಾಮಿಕ: 20 ವರ್ಷದಲ್ಲಿ ಅಂದರೆ 2014ರವರೆಗೆ ನಾವು ಹೂತುಹಾಕಿದ್ದೇವೆ. ನಂತರ ಊರು ಬಿಟ್ಟು ಹೋದೆವು.
ವರದಿಗಾರ: ಮಣ್ಣು ಮಾಡುವಾಗ ಕುಟುಂಬದವರು ಯಾರಾದರೂ ಹುಡುಕಿಕೊಂಡು ಬರುತ್ತಿದ್ದರೇ?
ಅನಾಮಿಕ: ಪೇಪರ್‌ನಲ್ಲಿ ಯಾವುದೇ ಪ್ರಚಾರ ಇರುತ್ತಿರಲಿಲ್ಲ ಅಂತಾ ಕಾಣುತ್ತದೆ. ಹಾಗಿದ್ದರೆ ಹುಡುಕಿಕೊಂಡು ಬರುತ್ತಿದ್ದರು. ಯಾರೂ ಹುಡುಕಿಕೊಂಡು ಬಂದಂತೆ ಕಾಣುತ್ತಿಲ್ಲ. ಈಗ ಎಲ್ಲರೂ ಸೇರಿಕೊಂಡು ಬರುತ್ತಿದ್ದಾರೆ.
ವರದಿಗಾರ: ಸುಮಾರು ಎಷ್ಟು ಶವಗಳನ್ನು ತಾವು ಹೂತುಹಾಕಿದ್ದೀರಿ? ಸ್ಪಾಟ್ ನಂಬರ್ 1 ರಿಂದ 13ರವರೆಗೆ ಸ್ಪಾಟ್ ನಂಬರ್ 1 ರಲ್ಲಿ ಎಷ್ಟು ಮಾಡಿದ್ದೀರಾ? ನಿಮ್ಮ ಪ್ರಕಾರ ಯಾವುದು ಮುಖ್ಯವಾದ (ಇಂಪಾರ್ಟೆಂಟ್) ಜಾಗ?
ಅನಾಮಿಕ: ಮುಖ್ಯವಾದ ಜಾಗ, ಈಗ ತೆಗೆಯುತ್ತಿರುವ ಸ್ಪಾಟ್ ನಂಬರ್ 13ರಲ್ಲಿ 70-80 ಶವಗಳನ್ನು ಹಾಕಿದ್ದೇವೆ. ಅಲ್ಲಿ ಹಾಕಿದ್ದು ನಾವು ಜಾಸ್ತಿ ಶವಗಳನ್ನು. ಮತ್ತೆ ಎಲ್ಲಾ ಗುಡ್ಡದಲ್ಲಿ ಅಲ್ಲಿ ಇಲ್ಲಿ ಹಾಕಿದ್ದೇವೆ.
ವರದಿಗಾರ: ಸ್ಪಾಟ್ ನಂಬರ್ 6 ಮತ್ತು 11A ಯಲ್ಲಿ ಆ ಎರಡರಲ್ಲಿ ಮಾತ್ರ ಅಸ್ತಿಪಂಜರ ಸಿಕ್ಕಿದೆ, ಉಳಿದ ಕಡೆ ಸಿಕ್ಕಿಲ್ಲ. ಇವಾಗ ನಿಮ್ಮ ಮೇಲೆ ಬಹಳಷ್ಟು ಜನ ಸಂಶಯ ಪಡುತ್ತಿದ್ದಾರೆ. ಇದರ ಬಗ್ಗೆ ತಾವು ಏನನ್ನು ಹೇಳುತ್ತೀರಾ? ಬರೀ 2 ಜಾಗ ತೋರಿಸಿದ್ದೀರಿ, ಅದು ಕೂಡ ಗಂಡಸರ ಅಸ್ತಿಪಂಜರ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಏನನ್ನು ಹೇಳುತ್ತೀರಾ?
ಅನಾಮಿಕ: ಹೇಳುವವರು ಸಾವಿರ ಹೇಳುತ್ತಾರೆ. ನಾಲಿಗೆಯಲ್ಲಿ ಏನೂ ಇಲ್ಲ. ತಿಳಿದುಕೊಂಡು ಹೇಳಬೇಕು. ಮಾತನಾಡುವವರು ಹೇಗೆ ಬೇಕಾದರೂ ಹೇಳುತ್ತಾರೆ. ಅವರು ಎಷ್ಟು ಬೇಕಾದರೂ ಹೇಳಬಹುದು. ಕೇಳುವವರು ನಾವಿದ್ದೇವೆ. ಕೇಳುತ್ತಾ ಇದ್ದೇವೆ. ಒಂದು ವಿಷಯವೆಂದರೆ, ನಾವು ಇಷ್ಟು ವರ್ಷ ಕಳೆದು ಈಗ ಬಂದು ತೋರಿಸುತ್ತಿರುವುದೇ ದೊಡ್ಡ ವಿಷಯ. ಮಣ್ಣಿನ ಗುಣವೆಲ್ಲಾ ಬದಲಾಗಿದೆ. ಮತ್ತೆ ಗಿಡಮರ ಎಲ್ಲ ಬೆಳೆದಿದೆ. ಹಾಗಿದ್ದಾಗ ನಾನು ಹೇಗೆ ಗುರುತು ಹಿಡಿಯಲು ಸಾಧ್ಯ? ಯಂತ್ರದಿಂದಲೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಹಾಗಿದ್ದಾಗ ನಾನು ಮನುಷ್ಯ, ಆದರೂ ನಾನು ಪ್ರಯತ್ನಪಟ್ಟು ತೋರಿಸುತ್ತಿದ್ದೇನೆ. ನಾನು ಹೊರಗೆ ತೋರಿಸುವಾಗ ಆಚೀಚೆ ಆಗಬಹುದು. ಸ್ವಲ್ಪ ತೆಗೆಯುತ್ತಿದ್ದಾರೆ. ಅದರಲ್ಲಿ ಫಾರೆಸ್ಟ್ ಅಂತ ಎಲ್ಲ ಹೇಳುತ್ತಿದ್ದಾರೆ. ಮರಗಿಡ ಕಡಿಯಲು ರೇಂಜರ್, ಫಾರೆಸ್ಟರ್ ಅವರು ಕಡಿಯಬಾರದು ಎಂದು ಹೇಳುತ್ತಿದ್ದಾರೆ.
Dharmasthala case mask man interview
ವರದಿಗಾರ: ಆಗ ಈ ಪ್ರದೇಶ ಹೇಗಿತ್ತು ಸರ್?
ಅನಾಮಿಕ: ಆಗಿದ್ದ ಕಾಡಿಗೂ ಈಗಿರುವ ಕಾಡಿಗೂ ತುಂಬಾ ವ್ಯತ್ಯಾಸವಿದೆ. ಆಗ ಕಾಡು ಸ್ವಲ್ಪ ಇತ್ತು. ಈಗ ಎಲ್ಲಾ ಕಾಡು ಬೆಳೆದುಕೊಂಡಿದೆ. ಮತ್ತೆ ನನಗೆ ಗುರುತು ಸಿಗುತ್ತಿಲ್ಲ. ನೋಡುವಾಗ ಭೂಮಿ ಆಚೆ ಈಚೆ ಬದಲಾದಂತೆ ಕಾಣುತ್ತದೆ. ಬೇರು ಕಾಣುತ್ತಿದೆ. ಮರ ಜಗ್ಗಿದೆ. ಮಣ್ಣು ಕುಸಿದಿದೆ. ಮನೆಯ ಕೆಲಸ ನಡೆದಿದೆ. ಸ್ಪಾಟ್ ನಂಬರ್ 1 ರಿಂದ 5ರವರೆಗೆ ಮಣ್ಣು ಕುಸಿದಿದೆ ಅಂತಾ ಕಾಣುತ್ತಿದೆ. ಏನೂ ಅಂತಾ ಗೊತ್ತಾಗುತ್ತಿಲ್ಲ. ಅಲ್ಲಿ ಶವ ಇರೋದೆ ಸಂಶಯ. ಆದರೂ ಅಗೆದು ನೋಡಿದೆವು.
ವರದಿಗಾರ: ಆ ಸ್ಪಾಟ್‌ನಲ್ಲೇ ನೀವು ಶವ ಹಾಕಿದ್ದೀರಾ?
ಅನಾಮಿಕ: ಹೌದು ನಾನು ಅಲ್ಲೇ ಹಾಕಿದ್ದೇನೆ. ಸರಿಯಾಗಿ ತೋರಿಸಿರಲಿಲ್ಲ ಅಂದಿದ್ದರೆ, ಸ್ಪಾಟ್ ನಂಬರ್ 6ರಲ್ಲಿ ಬರುತ್ತಿರಲಿಲ್ಲ. ಈಗ ಬಂತು. ಮತ್ತೆ ನಾನು ಗುರುತು ಮಾಡಿದ ಜಾಗದಲ್ಲೇ ಬಂತಲ್ಲ. ಹಾಗೆ ನಾನು ಸರಿಯಾಗಿ ತೋರಿಸುತ್ತೇನೆ. ಅಲ್ಲಿ ಇಲ್ಲ ಅಂತಾ ಹೇಳಿದರೆ ನಾನೇನು ಮಾಡಲಿಕ್ಕೆ ಆಗೋದಿಲ್ಲ.
Dharmasthala case mask man interview
ವರದಿಗಾರ: ನೀವು ಶವ ಹೂತುಹಾಕುವಾಗ ನಿಮ್ಮನ್ನು ಹೊರತುಪಡಿಸಿ ಇನ್ನು ಉಳಿದವರು ಯಾರಾದರೂ ಇದ್ದರಾ?
ಅನಾಮಿಕ: ಇದ್ದರು, ನನ್ನ ಭಾವ, ಅಣ್ಣ ಸೇರಿದಂತೆ 5-6 ಮಂದಿ ಇದ್ದರು.
ವರದಿಗಾರ: ಶವ ಹೂಳುವಾಗ ಗ್ರಾಮ ಪಂಚಾಯಿತಿಯಿಂದ ಯಾರ್ಯಾರು ಇರುತ್ತಿದ್ದರು?
ಅನಾಮಿಕ: ಗ್ರಾಮ ಪಂಚಾಯಿತಿಯಿಂದ ಯಾರೂ ಇರುತ್ತಿರಲಿಲ್ಲ. ದೇವಸ್ಥಾನದ ವತಿಯಿಂದಲೇ ನಾವು ಹೂತುಹಾಕುತ್ತಿದ್ದೆವು.
ವರದಿಗಾರ: ಗ್ರಾಮ ಪಂಚಾಯಿತಿಯಿಂದ ಯಾರೂ ಬರುತ್ತಿಲ್ಲ ಅಂದ ಮೇಲೆ, ನಿಮಗೆ ಶವ ಹೂತುಹಾಕಲು ಹೇಳುತ್ತಿದ್ದವರು ಯಾರು? ಮಾಹಿತಿ ಕಚೇರಿಯವರಾ? ಅಥವಾ ಗ್ರಾಮ ಪಂಚಾಯಿತಿಯವರಾ?
ಅನಾಮಿಕ: ಗ್ರಾಮ ಪಂಚಾಯಿತಿಯಿಂದ ಯಾರೂ ಬರುತ್ತಿಲ್ಲ. ದೇವಸ್ಥಾನದ ವತಿಯಿಂದಲೇ ನಾವು ಹೂತುಹಾಕುತ್ತಿದ್ದೆವು.
ವರದಿಗಾರ: ಗ್ರಾಮ ಪಂಚಾಯಿತಿಯವರು ಏನಾದರೂ, ತಾವು ಎಷ್ಟು ಶವಗಳನ್ನು ಹೂತುಹಾಕಿದ್ದಾರೆ ಎಂಬ ಲೆಕ್ಕ ಇಟ್ಟಿದೆಯೇ? ಅಥವಾ ದೇವಸ್ಥಾನದವರು ಲೆಕ್ಕ ಇಟ್ಟಿದ್ದಾರಾ?
ಅನಾಮಿಕ: ಲೆಕ್ಕ ಯಾರು ಇಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ನಮಗೆ ದೇವಸ್ಥಾನದಿಂದ ಬಂದು ಹೇಳುತ್ತಿದ್ದರು, ನಾವು ಹೂತುಹಾಕುತ್ತಿದ್ದೆವು ಅಷ್ಟೆ.
ವರದಿಗಾರ: ನೀವು ಕೆಲಸ ಮಾಡಿದ್ದನ್ನೆಲ್ಲಾ ವರದಿ ಮಾಡುತ್ತಿದ್ದದ್ದು ದೇವಸ್ಥಾನಕ್ಕೆ? ಗ್ರಾಮ ಪಂಚಾಯಿತಿಗಾ?
ಅನಾಮಿಕ: ಹೌದು, ನಾವು ದೇವಸ್ಥಾನದ ಮಾಹಿತಿ ಕೇಂದ್ರಕ್ಕೆ ವರದಿ ಮಾಡುತ್ತಿದ್ದೆವು.
Dharmasthala case mask man interview
ವರದಿಗಾರ: ತಾವು ಅರಣ್ಯ ಪ್ರದೇಶದಲ್ಲಿ ಅಂತಾ ಹೇಳುತ್ತಿದ್ದೀರಿ. ಅದನ್ನು ಹೊರತುಪಡಿಸಿ ಬೇರೆ ಯಾವುದಾದರೂ ಸ್ಮಶಾನದಲ್ಲಿ ಹೂತಿದ್ದೀರಾ?
ಅನಾಮಿಕ: ನಾನು ಅರಣ್ಯ ಪ್ರದೇಶದಲ್ಲಿ ಮಾತ್ರ ಹೂತಿದ್ದು. ಸ್ಮಶಾನದಲ್ಲಿ ಹೂತಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಮಾಡುತ್ತಿದ್ದದ್ದು ನೇತ್ರಾವತಿ ನದಿ ಆಚೆ ಈಚೆ ಕಾಡಿನ ಸುತ್ತ ಏನಾದರೂ ಇದ್ದರೆ ಹೋಗುತ್ತಾ ಇದ್ದೆವು. ಸ್ಮಶಾನಕ್ಕೆ ನಾವು ಹೋಗುತ್ತಾ ಇರಲಿಲ್ಲ.
ವರದಿಗಾರ: ನೀವು ಹೋಗಿ 10-11 ವರ್ಷ ಆಯ್ತು, ಯಾಕೆ ಈಗ ವಾಪಸ್ಸು ಬಂದಿದ್ದೀರಾ?
ಅನಾಮಿಕ: ನನಗೆ ಒಂದು ತರಹ ಕನಸುಗಳು ಬೀಳುತ್ತಿದ್ದವು. ಇದನ್ನು ತೋರಿಸಲು ಬಂದವನು, ನಮಗೆ ಏನಾದರೂ ಸ್ವಲ್ಪ ಪುಣ್ಯ ಸಿಗಲಿ. ಮತ್ತೆ ಇಲ್ಲಿ ಸತ್ತವರಿಗೆ ಪಾಪ ಪರಿಹಾರವಾಗಲಿ, ಪೂಜೆ-ಪುನಸ್ಕಾರ ಯಾವುದು ಆಗಿಲ್ಲ. ಹೀಗಾಗಿ ನಾನು ಶವಗಳನ್ನು ತೋರಿಸಲು ಬಂದಿದ್ದು.
Dharmasthala case mask man interview

