ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಧರ್ಮಸ್ಥಳದ ಪ್ರಕರಣದಲ್ಲಿ ಬಹುಮುಖ್ಯ ವ್ಯಕ್ತಿಯಾಗಿದ್ದ ಚಿನ್ನಯ್ಯನ್ನ ಇದೀಗ ಯಾರಿಗೂ ಬೇಡದ ವ್ಯಕ್ತಿಯಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ, ಆತನಿಗೆ ಜಾಮೀನು ಸಿಕ್ಕರೂ ಸಹ ಯಾರೋಬ್ಬರು ಬೇಲ್ ಶೂರಿಟಿ ನೀಡದ ಕಾರಣಕ್ಕೆ, ಚಿನ್ನಯ್ಯ ಇನ್ನೂ ಸಹ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾನೆ.(Dharmasthala Burude Case Chinnayya Unable to Mobilize Surety, Remains in Shivamogga Jail) ಚಿನ್ನಯ್ಯನಿಗೆ ಬೇಲ್ ಕೊಡುವವರು ಯಾರು? ಎಂಬ ವಿಷಯದಲ್ಲಿ ಆರಂಭದಲ್ಲಿಯೇ ಹಲವು ಅನುಮಾನಗಳಿದ್ದರು. ಆತನನ್ನು ಬಳಕೆ, ದುರ್ಬಳಕೆ ಮಾಡಿಕೊಂಡವರು ಸಹ ಚಿನ್ನಯ್ಯನ ಪರವಾಗಿ ನಿಂತಿಲ್ಲ. ಮೇಲಾಗಿ ಸಾಮಾನ್ಯ ವ್ಯಕ್ತಿಯಾಗಿರುವ ಆತನ ಕುಟುಂಬಸ್ಥರಿಗೆ ಬೆಲ್ ಅಮೌಂಟ್ ತುಂಬುವ ಶಕ್ತಿಯಿಲ್ಲ. ಈ ಹಿನ್ನೆಲೆಯಲ್ಲಿ ಆತನಿಗೆ ಬೇಲ್ ಸಿಕ್ಕರೂ ಬಿಡುಗಡೆ ಸಾಧ್ಯ ಸಿಗುವುದು ಕಷ್ಟ ಎಂಬ ವಿಚಾರವಾಗಿ ಮಲೆನಾಡು ಟುಡೆ ಈ ಹಿಂದೆ ವರದಿ ಮಾಡಿತ್ತು. ಇದುವರೆಗೂ ಸೂಕ್ತ ಶೂರಿಟಿ ನೀಡಲು ಯಾರೊಬ್ಬರೂ ಮುಂದೆ ಬಾರದ ಕಾರಣ ಚಿನ್ನಯ್ಯ ಶಿವಮೊಗ್ಗದ ಜೈಲಿನಲ್ಲೇ ಉಳಿದಿದ್ದಾನೆ. ಆಗಸ್ಟ್ 23 ರಂದು ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಬಂಧಿತನಾಗಿದ್ದ ಚಿನ್ನಯ್ಯ, ಕಳೆದ ಮೂರು ತಿಂಗಳುಗಳಿನಿಂದಲೂ ಜೈಲಿನಲ್ಲಿಯೇ ಇದ್ದಾನೆ.

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ
Dharmasthala Burude Case Chinnayya Unable to Mobilize Surety, Remains in Shivamogga Jail
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನವೆಂಬರ್ 24 ರಂದು ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿತ್ತು. ಜೊತೆಯಲ್ಲಿಯೆ ಬೇಲ್ನ ಭಾಗವಾಗಿ ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತಕ್ಕೆ ಇಬ್ಬರು ಶೂರಿಟಿಗಳನ್ನು ಒದಗಿಸುವಂತೆ ಸೂಚಿಸಿತ್ತಷ್ಟೆ ಅಲ್ಲದೆ ಹಲವು ಷರತ್ತುಗಳನ್ನು ಪಾಲಿಸುವಂತೆ ನಿರ್ದೇಶಿಸಿತ್ತು. ಇದೀಗ ಕೋರ್ಟ್ ಆದೇಶ ಸಿಕ್ಕಿ 10 ದಿನವೇ ಆಗಿದೆ. ಆದಾಗ್ಯು ಚಿನ್ನಯ್ಯ ಬಿಡುಗಡೆಯಾಗಿಲ್ಲ.ಈ ಹಿಂದೆ ಚಿನ್ನಯ್ಯನನ್ನು ಭೀಮ ಎಂದು ಬಿಂಬಿಸಿ, ಆತನನ್ನು ಹೈಲೆಟ್ ಮಾಡಿದ್ದವರಲ್ಲಿ ಯಾರು ಚಿನ್ನಯ್ಯನತ್ತ ಸುಳಿದಿಲ್ಲ. ಇದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಎಸ್ಐಟಿಯಿಂದ ಚಿನ್ನಯ್ಯ ನ ವಿಚಾರಣೆ, ಕಾರಣ..?
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
