ಧರ್ಮಸ್ಥಳ ಅನನ್ಯಾ ಭಟ್ ಕೇಸ್, ರಿಪ್ಪನ್​ಪೇಟೆಯಲ್ಲಿದ್ರಾ ಸುಜಾತಾ ಭಟ್! ನಿಜವೇನು?

ajjimane ganesh

Dharmasthala Ananya Bhat Case Link to Shivamogga : ಶಿವಮೊಗ್ಗ, dharmasthala latest news, malenadutoday : ಧರ್ಮಸ್ಥಳ ಅನನ್ಯ ಭಟ್​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ, ಧರ್ಮಸ್ಥಳದ ಬಳಿ  ಹರಿಯುವ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತ ಅಸಂಖ್ಯಾತಂ ಶವಗಳನ್ನು ಹೂತಿದ್ದೇನೆ ಎಂದು ಹೇಳಿರುವ ಅನಾಮಿಕನ ವಿಚಾರವಾಗಿ ಎಸ್​ಐಟಿ ಈಗಾಗಲೇ ತೀವ್ರವಾಗಿ ಶೋಧ ನಡೆಸುತ್ತಿದೆ. ಇದರ ನಡುವೆ ಸುಜಾತಾ ಭಟ್​ ಎಂಬವರು ತಮ್ಮ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು, ಆ ಸಂದರ್ಭದಲ್ಲಿ ಆಕೆಯ ಪರವಾಗಿ ದೂರು ಕೊಡಲು ಹೋಗಿದ್ದಾಗ ಯಾರು ಸಹ ದೂರು ತೆಗೆದುಕೊಂಡಿಲ್ಲ.

ಆಕೆಯನ್ನು ಪತ್ತೆ ಮಾಡಿಕೊಡಿ ಎಂದು ಎಸ್​ಐಟಿ ಅಹವಾಲು ಸಲ್ಲಿಸಿದ್ದರು. ಈ ನಡುವೆ ಸುಜಾತಾ ಭಟ್​ರವರಿಗೆ ಅನನ್ಯಾ ಭಟ್ ಎಂಬ ಮಗಳು ಇರುವುದೇ ಅನುಮಾನ ಎಂಬ ಮಾತು ಕೇಳಿಬಂದಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸುರ್ವಣ ನ್ಯೂಸ್​ ನಿನ್ನೆ ದಿನ ಸುಜಾತಾ ಭಟ್​ರವರ ಅಕ್ಕನ ಗಂಡ ಮಲಾಬಲೇಶ್ವರ ಎಂಬವರನ್ನು ಸಂದರ್ಶನ ಮಾಡಿತ್ತು. ಈ ಸಂದರ್ಶನದಲ್ಲಿ ಮಹಾಬಲೇಶ್ವರ ಭಟ್​ ರವರು ಸುಜಾತಾ ಭಟ್​ರವರಿಗೆ ಅನನ್ಯ ಭಟ್ ಎಂಬ ಮಗಳಿದ್ದಳು ಎಂಬುದು ಶುದ್ಧ ಸುಳ್ಳು ಎಂದಿದ್ಧಾರೆ. 1983 ರಲ್ಲಿ ಆಕೆಗೆ ಮದುವೆಯಾಗಿರಲಿಲ್ಲ. ಆನಂತರ ಅನನ್ಯ ಭಟ್ ಎಂಬ ಮಗಳಿರುವ ಬಗ್ಗೆ ಯಾವೊಂದು ಸಣ್ಣ ಮಾಹಿತಿಯು ತಮ್ಮ ಕುಟುಂಬಸ್ಥರಿಗೆ ಇಲ್ಲ ಎಂದಿದ್ದಾರೆ. ಅಲ್ಲದೆ ಇದರ ಜೊತೆಯಲ್ಲಿ  ಸುಜಾತಾ ಭಟ್​ರವರ ನಿಗೂಢತೆಯ ಬಗ್ಗೆ ಮಾತನಾಡಿರುವ ಮಹಾಬಲೇಶ್ವರ್​ ಅವರು ಉಡುಪಿ ಮಂಗಳೂರು ಎಂದು ಸುತ್ತುತ್ತಿದ್ದರು. ಅಲ್ಲದೆ 2003 ರಲ್ಲಿ ಬಂದು ತಾವು ರಿಪ್ಪನ್​ಪೇಟೆ ಯಲ್ಲಿ ಒಬ್ಬರ ಜೊತೆಗೆ ಮದುವೆಯಾಗಿರುವುದಾಗಿ ಹೇಳಿದ್ದು, ಆಗಲೂ ತಮಗೆ ಮಕ್ಕಳಿರುವ ಬಗ್ಗೆ ಹೇಳಿಲ್ಲ ಎಂದಿದ್ಧಾರೆ. ಅಲ್ಲದೆ ತಮ್ಮನ್ನ ಮದುವೆಯಾದವರ ಸಂಬಂಧಿಕರು ಆಸ್ತಿ ಮಾಡಲು ಬಿಡುತ್ತಿಲ್ಲ ಎಂದು ಹೇಳಿದ್ದರು ಎಂಬುದಾಗಿ ತಿಳಿಸಿದ್ದಾರೆ. 

- Advertisement -

Dharmasthala Ananya Bhat Case Link to Shivamogga Dharmasthala Ananya Bhat case, Sujatha Bhat, Ripponpete, Shivamogga news, Nayi Prabhakar, Ananya Bhat missing, Postman News investigation, shocking facts, case update.

ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ

ಮಾಧ್ಯಮದ ಈ ಸಂದರ್ಶನದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆಯಲ್ಲಿರುವ ಫೋಸ್ಟ್ ಮ್ಯಾನ್​ ನ್ಯೂಸ್​ ಕನ್ನಡ ಹಾಗೂ ನಮ್ಮ ಪತ್ರಕರ್ತ ಸಹೋದ್ಯೋಗಿ ರಫಿ ರಿಪ್ಪನ್​ಪೇಟೆ, ಸುಜಾತಾ ಭಟ್ ವಾಸವಿದ್ದರು ಎನ್ನಲಾದ ಸ್ಥಳಕ್ಕೆ ತೆರಳಿ ಸುದ್ದಿ ವಿವರಿಸಿದ್ದಾರೆ. ಅಲ್ಲದೆ ಈ ಸಂಬಂಧ ಸ್ಥಳೀಯರನ್ನು ಮಾತನಾಡಿಸಿ ಅವರಿಂದಲೂ ಮಾಹಿತಿ ಪಡೆದಿದ್ದಾರೆ.

ಸುಜಾತಾ ಭಟ್ ರವರ ಮಗಳು ಅ​ನನ್ಯಾಭಟ್​

ರಫಿಯವರ ವರದಿಯಂತೆ,  ರಿಪ್ಪನ್‌ಪೇಟೆಯಲ್ಲಿ ವಾಸವಾಗಿದ್ದ ಅವಧಿಯಲ್ಲಿ ಸುಜಾತಾ ಭಟ್ ಅವರಿಗೆ ಮಕ್ಕಳಿದ್ದ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇಲ್ಲ . ಸ್ಥಳಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಪ್ರಕಾರ,  ಸುಜಾತಾ ಭಟ್ ಅವರು ಪ್ರಭಾಕರ್ ಬಾಳಿಗ ಎಂಬ ವ್ಯಕ್ತಿಯೊಂದಿಗೆ ವಾಸವಾಗಿದ್ದು, ಅವರನ್ನು ಮದುವೆಯಾಗಿರುವ ಬಗ್ಗೆಯು ಸ್ಪಷ್ಟ ಮಾಹಿತಿಯಿಲ್ಲ. ಗೊತ್ತಿರುವವರ ಪ್ರಕಾರ, ಸುಜಾತಾ ಭಟ್ ಹಾಗೂ ಪ್ರಬಾಕರ್​ ರವರು ಲೀವಿಂಗ್ ಟುಗೇದರ್​ನಲ್ಲಿದ್ದರು ಎನ್ನಲಾಗುತ್ತದೆ. ಆದರೆ ಆ ಸಂದರ್ಭದಲ್ಲಿ ಅವರಿಗೆ ಮಗಳಿದ್ದ ಬಗ್ಗೆ ಒಂದು ಮಾಹಿತಿ ತಮಗಿಲ್ಲ ಎನ್ನುತ್ತಾರೆ ಈ ಕುಟುಂಬದ ಬಗ್ಗೆ ತಿಳಿದವರು. 

ರಿಪ್ಪನ್​ ಪೇಟೆಯ ಸ್ಥಳೀಯರ ಮಾಹಿತಿ

ರಿಪ್ಪನ್‌ಪೇಟೆಯ ಪ್ರಭಾಕರ್ ಬಾಳಿಗ ಅವರನ್ನು ‘ನಾಯಿ ಪ್ರಭಾಕರ್’ ಎನುತ್ತಿದ್ದರು. ಏಕೆಂದರೆ, ಅವರು ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿದ್ದರು ಎನ್ನಲಾಗಿದೆ. ಒಂದು ಸಮಯದಲ್ಲಿ ಇವರ ಮನೆಯಲ್ಲಿ 40ಕ್ಕೂ ಹೆಚ್ಚು ನಾಯಿಗಳಿದ್ದವು. ಆ ಬಗ್ಗೆ  2005ರಲ್ಲಿ ಈ ಬಗ್ಗೆ ಪತ್ರಿಕೆಯಲ್ಲಿ ಲೇಖನವೂ ಪ್ರಕಟವಾಗಿತ್ತಷ್ಟೆ ಅಲ್ಲದೆ, ಆಗ  ನಾಯಿಗಳೇ ನಮ್ಮ ಮಕ್ಕಳು ಎಂಬುದಾಗಿ ಅವರು ಹೇಳಿಕೊಂಡಿದ್ದರಂತೆ. 

Dharmasthala Ananya Bhat case, Sujatha Bhat, Ripponpete, Shivamogga news, Nayi Prabhakar, Ananya Bhat missing, Postman News investigation, shocking facts, case update.

Dharmasthala Ananya Bhat Case Link to Shivamogga ಧಮಸ್ಥಳದ ಪ್ರಕರಣ

ಇನ್ನೂ ಇದೇ ವಿಚಾರದಲ್ಲಿ ರಫಿಯವರು ಸ್ಥಳೀಯರನ್ನು ಮಾತನಾಡಿಸಿದ್ದಾರೆ. ಸುಜಾತಾ ಭಟ್ 2007 ರಲ್ಲಿ ಪ್ರಭಾಕರ್​ರವರನ್ನು ತೊರೆದು ಬೆಂಗಳೂರಿಗೆ ಹೋಗಿದ್ದರು. ಆನಂತರ ಪ್ರಭಾಕರ್​ ರವರು ಸಾವನ್ನಪ್ಪಿದರು. ತದನಂತರ ಆಸ್ತಿಯನ್ನು ಪ್ರಭಾಕರ್​ರವರ ಮೊದಲ ಪತ್ನಿಯ ಕಡೆಯವರು ಕ್ರಯಕ್ಕೆ ಕೊಟ್ಟಿದ್ದರು ಎಂಬುದು ಸ್ಥಳೀಯರ ಅಭಿಪ್ರಾಯ. 

ಪ್ರಭಾಕರ್​ ಭಟ್​ರವರನ್ನು ಹತ್ತಿರದಿಂದ ಬಲ್ಲ ಮೂವರನ್ನು ಈ ಬಗ್ಗೆ ಸಂದರ್ಶನ ಮಾಡಲಾಗಿದ್ದು, ಈ ಸಂದರ್ಶನದಲ್ಲಿ ಮೂವರು ಸಹ ಅನನ್ಯಾ ಭಟ್ ಎಂಬ ಮಗಳು ಸುಜಾತಾ ಭಟ್​ರವರಿಗೆ ಇರುವುದೇ ಅನುಮಾನ ಎಂದಿದ್ದಾರೆ. ಹಾಗೊಂದು ವೇಳೆ ಅವರಿಗೆ ಮಗಳಿದ್ದಿದ್ದರೇ, ಅವರನ್ನು ಶಾಲೆಗೆ ಸೇರಿಸಿದ ದಾಖಲೆಗಳಾದರೂ ಇರಬೇಕಲ್ಲವೆ ಎನ್ನುತ್ತಾರೆ. ಅಲ್ಲದೆ ರಿಪ್ಪನ್​ ಪೇಟೆಯಲ್ಲಿ ಅವರಿದ್ದಷ್ಟು ದಿನ ಮಕ್ಕಳಿರುವುದು ನಮಗೆ ಗೊತ್ತಾಗಬೇಕಲ್ಲವೆ ಎನ್ನುವುದು ಸ್ಥಳೀಯರ ಪ್ರಶ್ನೆ.  

Dharmasthala Ananya Bhat Case Link to Shivamogga

Dharmasthala Ananya Bhat case, Sujatha Bhat, Ripponpete, Shivamogga news, Nayi Prabhakar, Ananya Bhat missing, Postman News investigation, shocking facts, case update.

Dharmasthala Ananya Bhat case, Sujatha Bhat, Ripponpete, Shivamogga news, Nayi Prabhakar, Ananya Bhat missing, Postman News investigation, shocking facts, case update.

Dharmasthala Ananya Bhat Case Link to Shivamogga

Share This Article