ಬೆಂಗಳೂರು : ಕರ್ನಾಟಕದ ಡಿಜಿಪಿ (DGP) ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ಡಾ. ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ಬಿಡುಗಡೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸದರ ಸಂವಾದ! ಈಶ್ವರಪ್ಪನವರ ಆಕ್ರೋಶ! ಶಿವಮೊಗ್ಗ ಪತ್ರಿಕಾಭವನದಲ್ಲಿ? ಇವತ್ತಿನ ಇ-ಪೇಪರ್ ಓದಿ
ಸದ್ಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಮಚಂದ್ರರಾವ್ ಅವರು, ಕರ್ತವ್ಯದ ಸಮಯದಲ್ಲಿ ಮತ್ತು ಪೊಲೀಸ್ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಚೇರಿಗೆ ಭೇಟಿ ನೀಡುತ್ತಿದ್ದ ವಿವಿಧ ಮಹಿಳೆಯರೊಂದಿಗೆ ಅಪ್ಪಿಕೊಳ್ಳುವುದು ಮತ್ತು ಮುತ್ತು ಕೊಡುವುದು ಸೇರಿದಂತೆ ಇನ್ನಿತರೇ ನಡವಳಿಕೆಗಳು ಸೀಕ್ರೆಟ್ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.

ಷಡ್ಯಂತ್ರ ಎಂದ ರಾಮಚಂದ್ರರಾವ್
ಈ ಗಂಭೀರ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಡಿಜಿಪಿ ರಾಮಚಂದ್ರರಾವ್ ಅವರು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆ ದೃಶ್ಯದಲ್ಲಿರುವುದು ನಾನಲ್ಲ. ಇದು ನನ್ನನ್ನು ಗುರಿಯಾಗಿಸಿಕೊಂಡು ನಡೆಸಿರುವ ಷಡ್ಯಂತ್ರ. ನನ್ನ ಖ್ಯಾತಿಗೆ ಧಕ್ಕೆ ತರಲು ಪರಿಚಯಸ್ಥರೇ ಸೇರಿಕೊಂಡು ಈ ಕುತಂತ್ರ ಮಾಡಿದ್ದಾರೆ, ಎಂದು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ವಿಡಿಯೋಗಳು ಸುಮಾರು 10 ವರ್ಷಗಳಷ್ಟು ಹಳೆಯದ್ದು ಮತ್ತು ಬೆಳಗಾವಿಯಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದ್ದು ಎಂದು ತಿಳಿದುಬಂದಿದೆ. ಈಗ ಇದನ್ನು ಬಿಡುಗಡೆ ಮಾಡಿರುವುದು ದುರುದ್ದೇಶಪೂರ್ವಕ, ಎಂದು ಹೇಳಿರುವ ಅವರು ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಈ ಅಶ್ಲೀಲ ವಿಡಿಯೋ ಪ್ರಕರಣವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿದ್ದು, ಹಿರಿಯ ಅಧಿಕಾರಿಯ ಈ ನಡೆ ಬಗ್ಗೆ ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
DGP Ramachandra Rao Video Scandal viral

