ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

prathapa thirthahalli
Prathapa thirthahalli - content producer

ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರವು ನಾಳೆ, ಅಂದರೆ ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ದರ್ಶನ್ ಅವರ ಅನುಪಸ್ಥಿತಿಯಲ್ಲೂ ಅಭಿಮಾನಿಗಳು ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬೃಹತ್ ಗಾತ್ರದ ಕಟೌಟ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ಅಭಿಮಾನಿಗಳು ತಮ್ಮ ನಟನ ಮೇಲಿನ ಅಭಿಮಾನವನ್ನು ಪ್ರದರ್ಶಿಸುತ್ತಿದ್ದಾರೆ.

Devil movie Shivamogga Fans Celebrate 
Devil movie Shivamogga Fans Celebrate

2023 ರಲ್ಲಿ ಬಂದ ಕಾಟೇರ ಚಿತ್ರದ ನಂತರ ಸುಮಾರು ಎರಡು ವರ್ಷಗಳ ನಂತರ ದರ್ಶನ್ ಅವರ ಡೆವಿಲ’ ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆ ಆಗುತ್ತಿದೆ. ಈಗಾಗಲೇ ‘ಡೆವಿಲ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿರುವುದರಿಂದ ಟಿಕೆಟ್‌ಗಳು ಭಾರಿ ಬೇಡಿಕೆಯನ್ನು ಸೃಷ್ಟಿಸಿವೆ. ಬುಕ್‌ಮೈಶೋನಲ್ಲಿ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಅನೇಕ ಟಿಕೆಟ್‌ಗಳು ಮಾರಾಟವಾಗಿವೆ.

ದರ್ಶನ್ ಅವರ ಅನುಪಸ್ಥಿತಿಯ ನಡುವೆಯೂ ಅಭಿಮಾನಿಗಳೇ ಚಿತ್ರದ ಪ್ರಮೋಷನ್‌ನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಬಳಸಿದ ಚೇರ್ ಅನ್ನು ಪ್ರದರ್ಶನಕ್ಕಿಟ್ಟು ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ರಾಜ್ಯದಾದ್ಯಂತ ವಿವಿಧ ಅಡಿಗಳ ಕಟೌಟ್‌ಗಳು ಮತ್ತು ಫ್ಲೆಕ್ಸ್‌ಗಳನ್ನು ಹಾಕಿ ವಿಭಿನ್ನ ರೀತಿಯಲ್ಲಿ ಸಂಭ್ರಮಾಚರಣೆ ಮತ್ತು ಪ್ರಚಾರ ಮಾಡಲಾಗುತ್ತಿದೆ.

ಇದೀಗ ಶಿವಮೊಗ್ಗದಲ್ಲಿ ದಾಸನ ಅಭಿಮಾನಿಗಳು ಅಕ್ಷರಶಃ ಹಬ್ಬದ ವಾತಾವರಣವನ್ನೇ ನಿರ್ಮಿಸಿದ್ದಾರೆ. ನಗರದ ವೀರಭದ್ರ ಚಲನಚಿತ್ರಮಂದಿರವನ್ನು ದರ್ಶನ್ ಅವರ ಬ್ಯಾನರ್‌ಗಳಿಂದ ಮುಳುಗಿಸಲಾಗಿದೆ. ಥಿಯೇಟರ್‌ನ ಮುಂಭಾಗದಲ್ಲಿ ಬೃಹತ್ ಕಟೌಟ್ ಹಾಕಿ ದೀಪಾಲಂಕಾರ ಮಾಡಲಾಗಿದ್ದು, 25 ಅಡಿ ಎತ್ತರದ ಕಟೌಟ್ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆದಿವೆ. ಈ ಕಟೌಟ್ ಅನ್ನು ಸಂಭ್ರಮಾಚರಣೆಯ ಮೂಲಕ ಪ್ರತಿಷ್ಠಾಪಿಸಲಾಗುತ್ತಿದೆ.

ನಾಳೆ ಶಿವಮೊಗ್ಗದ ಎರಡು ಚಿತ್ರಮಂದಿರಗಳು ಮತ್ತು ಒಂದು ಮಾಲ್‌ನಲ್ಲಿ ‘ಡೆವಿಲ್’ ಚಿತ್ರ ಬಿಡುಗಡೆಯಾಗಲಿದ್ದು, ವೀರಭದ್ರ ಚಲನಚಿತ್ರಮಂದಿರದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಫ್ಯಾನ್ಸ್ ಶೋಗಳನ್ನು ಸಹ ಏರ್ಪಡಿಸಲಾಗಿದೆ.

Devil movie Shivamogga ಇಂದು ಸಂಜೆ ಮೆರವಣಿಗೆ ಮತ್ತು ಸಂಭ್ರಮಾಚರಣೆ

ಡೆವಿಲ್’ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳು ಇಂದು (ಡಿಸೆಂಬರ್ 10) ಸಂಜೆ ವೀರಭದ್ರ ಚಲನಚಿತ್ರ ಮಂದಿರದ ಬಳಿ ಭರ್ಜರಿ ಸಂಭ್ರಮಾಚರಣೆ ಹಮ್ಮಿಕೊಂಡಿದ್ದಾರೆ. ಈ ವೇಳೆ ಕೇಕ್ ಕತ್ತರಿಸುವ ಕಾರ್ಯಕ್ರಮ, ಡಿಜೆ, ಡೊಳ್ಳು ಕುಣಿತ ಮತ್ತು ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಒಟ್ಟಿನಲ್ಲಿ, ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾದ ಬಿಡುಗಡೆಗೆ ಶಿವಮೊಗ್ಗದಲ್ಲಿ ಉತ್ಸವದ ವಾತಾವರಣವನ್ನು ಸೃಷ್ಟಿಸಿದ್ದಾರೆ.

 

 Devil movie Shivamogga Fans Celebrate 

Devil movie Shivamogga Fans Celebrate 
Devil movie Shivamogga Fans Celebrate

 

 

Share This Article