ಗ್ಯಾಸ್​ಗೆ ಆಧಾರ್​ ಲಿಂಕ್​ ಮಾಡಲು ಲಾಸ್ಟ್ ಡೇಟ್​ ಇದ್ಯಾ! ಇಲಾಖೆ ಪ್ರಕಟಣೆಯಲ್ಲಿ ಏನಿದೆ? ಸರತಿ ಸಾಲಿನಲ್ಲಿ ನಿಲ್ಲದೇ E-KYC ಮಾಡ್ಬಹುದು ಗೊತ್ತಾ?

The Department of Food, Civil Supplies and Consumer Affairs has issued a notification regarding gas and aadhaar link

ಗ್ಯಾಸ್​ಗೆ ಆಧಾರ್​ ಲಿಂಕ್​ ಮಾಡಲು ಲಾಸ್ಟ್ ಡೇಟ್​ ಇದ್ಯಾ! ಇಲಾಖೆ ಪ್ರಕಟಣೆಯಲ್ಲಿ ಏನಿದೆ? ಸರತಿ ಸಾಲಿನಲ್ಲಿ ನಿಲ್ಲದೇ E-KYC ಮಾಡ್ಬಹುದು ಗೊತ್ತಾ?
gas and aadhaar link

SHIVAMOGGA  |  Dec 28, 2023  |  gas and aadhaar link  ಗ್ಯಾಸ್​ ಕನೆಕ್ಷನ್​ಗೆ ಆಧಾರ್​ ಲಿಂಕ್​ ಮಾಡಿಸಬೇಕಾ!? ಡಿಸೆಂಬರ್ 31 ಆಧಾರ್ ಲಿಂಕ್ ಮಾಡಲು ಲಾಸ್ಟ್​ ಡೇಟಾ? ಹೀಗೊಂದು ಪ್ರಶ್ನೆಗಳು ಕಳೆದ ಕೆಲವು ದಿನಗಳಿಂದ ಶಿವಮೊಗ್ಗದಲ್ಲಿ ಕೇಳಿಬರುತ್ತಿದೆ. ಬಂಡಾರಿ ಗ್ಯಾಸ್ ಏಜೆನ್ಸಿ ಎದುರು ಅಂತೂ ನೋಟ್ ಬ್ಯಾನ್​ ಆದಾಗ ಕ್ಯೂ  ನಿಂತ ಹಾಗೆ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಈ ಬಗ್ಗೆ ನಿನ್ನೆಯಷ್ಟೆ ರಾಜ್ಯಮಟ್ಟದ ಸುದ್ದಿಪತ್ರಿಕೆಯೊಂದು ವರದಿ ಮಾಡಿತ್ತಷ್ಟೆ ಅಲ್ಲದೆ, ಗ್ಯಾಸ್ ಸಂಪರ್ಕಕ್ಕೆ ಆಧಾರ್ ಲಿಂಕ್​ ಮಾಡಬೇಕು ನಿಜ ಆದರೆ ಅದಕ್ಕೆ ಲಾಸ್ಟ್ ಡೇಟ್ ಅಂತೇನು ಇಲ್ಲ ಎಂದು ತಿಳಿಸಿತ್ತು. 

ಇದೀಗ ಈ ಸಂಬಂಧ ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರಾದ ಅವಿನ್ ಆರ್ ಪ್ರಕಟಣೆ  ನೀಡಿದ್ದಾರೆ. 

READ : ಶಿವಮೊಗ್ಗ ರೌಡಿಸಂಗೆ ಇನ್ನೊಂದು ವಾರ್ನಿಂಗ್! ವಲ್ಲು@ ವಲಂಗಾ@ಮಂಜುನಾಥ್​ನ ಕಾಲಿಗೆ ಪೊಲೀಸ್ ಬುಲೆಟ್! ಎಸ್​ಪಿ ಹೇಳಿದ್ದೇನು?

 ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ / gas and aadhaar link

ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.

ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್​ಗಳನ್ನು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ. 

ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್ ಮತ್ತು ವಿಟ್ರನ್ ಹೆಚ್‍ಪಿ ಗ್ಯಾಸ್ ಈ ಮೊಬೈಲ್ ಆಪ್‍ಗಳ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಉ ಉಪನಿರ್ದೇಶಕರಾದ ಅವಿನ್ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.