ಪಕ್ಕಾ ಇನ್​ಫಾರ್ಮೇಶನ್​ ನೊಂದಿಗೆ ರೇಡ್! ಫಾರೆಸ್ಟ್ ಮಾಲಿನ ಜೊತೆ ಸಿಕ್ಕಿಬಿದ್ದ ಆರೋಪಿ

ajjimane ganesh

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಸಾಗರ ಉಪವಿಭಾಗದ ಅರಣ್ಯ ಸಂಚಾರಿದಳದ ಸಿಬ್ಬಂದಿ ಒಂದೊಳ್ಳೆ ರೇಡ್ ನಡೆಸಿದ್ದಾರೆ. ಜಿಂಕೆ ಚರ್ಮವನ್ನು Deer Skin ಮಾರಾಟಕ್ಕೆ ಯತ್ನಿಸ್ತಿದ್ದ ಆರೋಪಿಯನ್ನ ವಶಕ್ಕೆ ಪಡೆದು, ಜಿಂಕೆ ಚರ್ಮವನ್ನ Deer Skin ಸೀಜ್ ಮಾಡಿದ್ದಾರೆ. ಯಡೆಹಳ್ಳಿ ವೃತ್ತದ ಸಮೀಪ ಈ ಘಟನೆ ನಡೆದಿದೆ. ನವಲುಗುಂದ ಗ್ರಾಮದ ನಿವಾಸಿಯಾದ ಅರ್ಜುನ್ ಬಿನ್ ರಾಮಪ್ಪ ಬಂಧಿತ ಆರೋಪಿಯಾಗಿದ್ದಾನೆ. ಯಡೆಹಳ್ಳಿ ವೃತ್ತದ ಬಳಿ ವನ್ಯಜೀವಿಯೊಂದರ ಚರ್ಮವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಇನ್​ಫಾರ್ಮೆಶನ್​ ಒಂದು ಅರಣ್ಯ ಸಿಬ್ಬಂದಿಗೆ ಸಿಕ್ಕಿತ್ತು. ಇದರ ಬೆನ್ನಲ್ಲೆ ವಿಷಯ ಕನ್​ಫರ್ಮ್​ ಮಾಡಿಕೊಂಡ ಸಿಬ್ಬಂದಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದೆ. ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಜಿಂಕೆಯ ಚರ್ಮವನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಆರೋಪಿ  ಅರ್ಜುನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಪ್ರಕರಣವನ್ನು ದಾಖಲಿಸಲಾಗಿದೆ. ಕೋರ್ಟ್​ಗೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ಸಿಬ್ಬಂಧಿ ವಿಶ್ವನಾಥ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಮಹೇಶ್, ಪ್ರಮೋದ ಕುಮಾರಿ ಹಾಗೂ ಹಾಲೇಶ್ ಪಾಲ್ಗೊಂಡಿದ್ದರು.

Deer Skin Sale Attempt file One Arrested in Anandapura Police Patrol Operation
Deer Skin Sale Attempt file One Arrested in Anandapura Police Patrol Operation

ಉರುಳಿಗೆ ಬಿದ್ದ ಆರು ವರ್ಷದ ಗಂಡು ಕರಡಿ ರಕ್ಷಣೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Deer Skin Sale Attempt file One Arrested in Anandapura Police Patrol Operation

ಜೈಭೀಮ್ ನಗರದಲ್ಲಿ ಕೊ*ಲೆಯ ಬೆನ್ನಿಗೆ ಕೊ*ಲೆ! ಎಲ್ಲಾ 5 ಆರೋಪಿಗಳು ಅರೆಸ್ಟ್​! ಬ್ರದರ್ ಗ್ಯಾಂಗ್​ನಲ್ಲಿದ್ದವರು ಇವರೇ

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಜಿಂಕೆ ಚರ್ಮ ಮಾರಾಟ ಯತ್ನ ಆನಂದಪುರದಲ್ಲಿ ಓರ್ವ ಬಂಧನ ಪೊಲೀಸ್ ಸಂಚಾರಿದಳದ ಕಾರ್ಯಾಚರಣೆ Deer Skin Sale Attempt file One Arrested in Anandapura Police Patrol Operation
Share This Article