Dboss ದರ್ಶನ್‌ & ಸಿನಿಮಾ ಲೋಕದ ಇವತ್ತಿನ ಫಾಸ್ಟ್‌ 5 ಸುದ್ದಿ 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 19, 2025

ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ ಎಂದು ದರ್ಶನ್‌ ತೂಗುದೀಪ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.



ಸುದ್ದಿ : 02 ಫೈಟರ್‌ ನಿರ್ಮಾಪಕರ ಜೊತೆ ಚಿಕ್ಕಣ್ಣ ಹೊಸ ಚಿತ್ರ

ಉಪಾಧ್ಯಕ್ಷ ಹಾಗೂ ಫೈಟರ್‌ ಚಿತ್ರದ ಮೂಲಕ ನಾಯಕ ನಟರಾಗಿ ನಟಿಸಿದ್ದ ಚಿಕ್ಕಣ್ಣ ಈಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.  ಈ ಚಿತ್ರಕ್ಕೆ ಮಹೇಶ್‌ ಎಂಬುವವರು ಕಥೆ ಬರೆದಿದ್ದು,  ಫೈಟರ್ ಚಿತ್ರದ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ  ಚಿತ್ರದ ಹೆಸರು ಇನ್ನೂ ಫೈನಲ್‌ ಆಗಲಿಲ್ಲ.

ಸುದ್ದಿ : 03 ಕೆ ಡಿ ಚಿತ್ರಕ್ಕೆ ಎಂಟ್ರಿ ಕೊಟ್ಟ ಶಿವಣ್ಣ

ಜೋಗಿ ಪ್ರೇಮ್‌ ನಿರ್ದೇಶನದ  ಮತ್ತು ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ  ಕೆಡಿ ಚಿತ್ರಕ್ಕೆ  ಶಿವಣ್ಣ ಎಂಟ್ರಿ ಕೊಟ್ಟಿದ್ದಾರೆ.ಕ್ರೇಜಿ ಸ್ಟಾರ್‌ ರವಿಚಂದ್ರನ್‌, ಶಿಲ್ಪಾ ಶೆಟ್ಟಿ, ರಮೇಶ್‌ ಅರವಿಂದ್‌, ಸಂಜಯ್‌ ದತ್‌.. ಮೊದಲಾದ ಸ್ಟಾರ್‌ ಕಲಾವಿದರು ನಟಿಸುತ್ತಿರುವ ಚಿತ್ರದಲ್ಲಿ ಶಿವಣ್ಣ ಎಂಟ್ರಿ ಆಗಿರೋದು ಚಿತ್ರದ ಮೇಲೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.  ಶಿವಣ್ಣ ಸಂಪೂರ್ಣ ಗುಣಮುಖರಾದ ನಂತರ ಕಾಣಿಸಿಕೊಳ್ಳುವ ಮೊದಲ ಚಿತ್ರವೇ ಕೆಡಿ ಆಗಲಿದೆ.

ಸುದ್ದಿ : 04 ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ 42 ವರ್ಷ | ಹಾಡನ್ನು ಪೋಸ್ಟ್‌ ಮಾಡಿ ಇಳಯರಾಜರನ್ನು ಪ್ರಶಂಶಿಸಿದ ಅನಿಲ್‌ ಕಪೂರ್‌

ಪಲ್ಲವಿ ಅನುಪಲ್ಲವಿ ಚಿತ್ರಕ್ಕೆ 42 ವರ್ಷ ತುಂಬಿದ್ದು, ಆ ಚಿತ್ರದ ನಗುವ ನಯನ ಹಾಡನ್ನು ಅನಿಲ್‌ ಕಪೂರ್‌ ಪೋಸ್ಟ್‌ ಮಾಡಿ ಅದಕ್ಕೆ ಸಂಗೀತ  ಸಂಯೋಜನೆ ಮಾಡಿದ್ದ ನಿರ್ದೇಶಕ ಇಳಯರಾಜರನ್ನು ಪ್ರಶಂಸಿಸಿದ್ದಾರೆ. 42 ವರ್ಷ ಕಳೆದರೂ ಮೇದಾವಿ ಇಳಯರಾಜರವರು ಹಾಡುಗಳು ಅಷ್ಟೇ ಶಕ್ತಿಯುತವಾಗಿ ಪ್ರತಿಧ್ವನಿಸುತ್ತದೆ. ಈ ಸಂಗೀತ ಯಾವ ಕಾಲಕೂ ಇದೇ ಭಾವನೆಯನ್ನು ನೀಡುತ್ತದೆ ಎಂದು ಟ್ವೀಟರ್‌ನಲ್ಲ ಅನಿಲ್‌ ಕಪೂರ್‌ ಬರೆದು ಕೊಂಡದ್ದಾರೆ.



ಸುದ್ದಿ : 05 ಫೆ. 28 ಕ್ಕೆ ಮಾಂಕ್‌ ದಿ ಯಂಗ್‌ ಚಿತ್ರ ರಿಲೀಸ್‌

ಸರೋವರ್‌ ಮತ್ತು ಸೌಂದರ್ಯ ಅಭಿನಯದ ಶೀರ್ಷಿಕೆಯಿಂದಲೇ ಸಖತ್‌ ಸದ್ದು ಮಾಡಿರುವ ಮಾಂಕ್‌ ದಿ ಯಂಗ್‌ ಚಿತ್ರ ಫೆಬ್ರವರಿ 28 ರಂದು ರಾಜ್ಯದಾಧ್ಯಂತ ಬಿಡುಗಡೆಯಾಗುತ್ತಿದೆ.ಈ ಚಿತ್ರವನ್ನು ಮಸ್ಚಿತ್‌ ಸೂರ್ಯ ನಿರ್ದೇಶಿಸಿದ್ದು, ಗೋಪಿಚಂದ್‌ ಪುಲ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

.SUMMARY | I am forever indebted to these unblemished hearts for always standing by me in times of distress.

KEYWORDS | cinema news, kannada, top 5,

Share This Article