Daily Horoscope Jan 26 2026 details ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಮಾಘ ಮಾಸದ, ಇಂದು ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ 7:09 ರವರೆಗೆ ಇದ್ದು, ತದನಂತರ ನವಮಿ ತಿಥಿ ಆರಂಭವಾಗಲಿದೆ. ಬೆಳಿಗ್ಗೆ 10:58 ರವರೆಗೆ ಅಶ್ವಿನಿ ನಕ್ಷತ್ರವಿದ್ದು, ನಂತರ ಭರಣಿ ನಕ್ಷತ್ರ ಬರಲಿದೆ. ಭೀಷ್ಮಾಷ್ಟಮಿಯ ಈ ದಿನ ಅಮೃತ ಘಳಿಗೆ ಬೆಳಗಿನ ಜಾವ 4:57 ರಿಂದ 6:27 ರವರೆಗೆ ಇರಲಿದೆ ರಾಹುಕಾಲ ಬೆಳಿಗ್ಗೆ 7:30 ರಿಂದ 9:00 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10:30 ರಿಂದ 12:00 ರವರೆಗೆ ಇರಲಿದೆ.

ಇವತ್ತಿನ ರಾಶಿಭವಿಷ್ಯ/ Daily Horoscope Jan 26 2026 details
ಮೇಷ | ಅಂದುಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆಪ್ತರು ನೀಡುವ ಸಲಹೆ ಸ್ವೀಕರಿಸಿ, ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.
ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ, ಯಾವಾಗ, ಏನೆಲ್ಲಾ ವಿಶೇಷತೆ ಇರಲಿದೆ
ವೃಷಭ | ಸಣ್ಣಪುಟ್ಟ ಮಾತುಕತೆ ಜಗಳಕ್ಕೆ ತಿರುಗುವ ಸಾಧ್ಯತೆಯಿದೆ. ಆರ್ಥಿಕ ಮುಗ್ಗಟ್ಟು ಅಥವಾ ತೊಂದರೆ ಎದುರಿಸಬೇಕಾಗಬಹುದು. ದೂರಪ್ರಯಾಣ.ಒಪ್ಪಂದ ಅಥವಾ ವ್ಯವಹಾರ ಮುಂದೂಡಲ್ಪಡಬಹುದು. ದೈಹಿಕ ಶ್ರಮ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಗತ್ಯ ಸಮಸ್ಯೆ.
ಮಿಥುನ | ಎಲ್ಲವೂ ಸುಗಮವಾಗಿ ಸಾಗಲಿದೆ. ಸ್ನೇಹಿತರ ಜೊತೆಗೆ ಅತ್ಯಂತ ಆನಂದದಾಯಕ ಕ್ಷಣ ಕಳೆಯಲಿದ್ದೀರಿ. ಹೊಸ ಜನರ ಪರಿಚಯ, ಭವಿಷ್ಯಕ್ಕೆ ನೆರವಾಗಲಿದೆ. ಶುಭ ಸುದ್ದಿ ಬಂದು ತಲುಪಲಿವೆ. ವ್ಯಾಪಾರಸ್ಥರಿಗೆ ಹಾಗೂ ಉದ್ಯೋಗಿಗಳಿಗೆ ಈ ದಿನ ಆಶಾದಾಯಕ.
ಕರ್ಕಾಟಕ | ಸಂತೋಷದ ಸುದ್ದಿ ಕೇಳುವಿರಿ. ಕೈಗೊಂಡ ಕೆಲಸಗಳಲ್ಲಿ ಜಯ ಸಿಗಲಿದೆ. ಆರ್ಥಿಕ ಧನಲಾಭವಾಗುವ ಯೋಗವಿದ್ದು, ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯವಾಗಲಿದೆ. ವಾಹನ ಖರೀದಿ ಯೋಗ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲೆಕ್ಕಾಚಾರ ನಿಜವಾಗಲಿದೆ.

ಸಿಂಹ | ಕೈಗೆತ್ತಿಕೊಂಡ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಡೆತಡೆ. ಸಂಬಂಧಿಕರೊಂದಿಗೆ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟು ಎದುರಾಗಬಹುದು. ಹಠಾತ್ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುವ ಯೋಗ ಉದ್ಯೋಗ ಮತ್ತು ವ್ಯಾಪಾರದಲ್ಲಿ ಏರಿಳಿತ ಕಂಡುಬರಲಿವೆ.
ಕನ್ಯಾ | ಕೆಲಸ ನಿಧಾನಗತಿಯಲ್ಲಿ ಸಾಗಲಿವೆ, ಪ್ರಗತಿ ಕಾಣುವಿರಿ. ದೇವಸ್ಥಾನಗಳಿಗೆ ಭೇಟಿ ನೀಡುವ ಅಥವಾ ದೈವ ದರ್ಶನದ ಭಾಗ್ಯವಿದೆ. ಕೌಟುಂಬಿಕವಾಗಿ ಕೆಲವು ಸಮಸ್ಯೆ ತಲೆದೋರಬಹುದು. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಅನಾರೋಗ್ಯದ ಮುನ್ಸೂಚನೆಗಳಿವೆ. ವ್ಯಾಪಾರ ಮತ್ತು ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರಲಿದೆ.
ತುಲಾ | ಅತ್ಯಂತ ಉತ್ಸಾಹದಿಂದ ಸಮಯ ಕಳೆಯಲಿದ್ದಾರೆ. ಭೋಜನ ಕೂಟಗಳಲ್ಲಿ ಅಥವಾ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮನೆಯಲ್ಲಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಮಾತುಕತೆ ಫಲಪ್ರದವಾಗಲಿವೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಅನಿರೀಕ್ಷಿತ ಹಾಗೂ ಆಶ್ಚರ್ಯಕರ ಬದಲಾವಣೆ ಕಂಡುಬರಲಿವೆ.
ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ ಡಿಸಿ ಮತ್ತು ಎಸ್ಪಿ ಭೇಟಿ
ವೃಶ್ಚಿಕ | ಉದ್ಯೋಗಕ್ಕೆ ಸಂಬಂಧಿಸಿದಂತೆ ಕರೆಗಳು ಬರಲಿವೆ. ವ್ಯವಹಾರಗಳಲ್ಲಿ ಅಥವಾ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಆಸ್ತಿ ಖರೀದಿ ಮಾಡುವ ಯೋಗಬಲವಾಗಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಹುರುಪು ಮತ್ತು ಉತ್ಸಾಹ ಕಂಡುಬರಲಿದೆ.
ಧನು | ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರಬಹುದು. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸುವ ಅನಿವಾರ್ಯತೆ ಎದುರಾಗಲಿದೆ. ದೇವಸ್ಥಾನಗಳಿಗೆ ಭೇಟಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಗೊಂದಲ ಇರಬಹುದು.
ಮಕರ | ವ್ಯವಹಾರದಲ್ಲಿ ಅಡೆತಡೆ. ಸಾಲ ಆಗಬಹುದು. ಹಠಾತ್ ಪ್ರಯಾಣದ ಯೋಗವಿದೆ. ಅನಾರೋಗ್ಯ. ಕುಟುಂಬದಲ್ಲಿ ಒತ್ತಡದ ವಾತಾವರಣವಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲಮಯ ದಿನ
ಕುಂಭ | ಪರಿಸ್ಥಿತಿ ಸಂಪೂರ್ಣವಾಗಿ ಅನುಕೂಲಕರವಾಗಿವೆ.ಸಭೆ ಸಮಾರಂಭಗಳಲ್ಲಿ ಭಾಗವಹಿಸಲಿದ್ದೀರಿ. ಬಾಕಿ ಹಣ ವಸೂಲಾಗಲಿದೆ. ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ಸಾಹದ ದಿನ
ಮೀನ | ಬಂಧುಗಳೊಂದಿಗೆ ವೈಮನಸ್ಸು. ಪ್ರಯಾಣ ಮುಂದೂಡಲ್ಪಡಲಿವೆ. ಕೆಲಸದಲ್ಲಿ ಅತಿಯಾದ ಶ್ರಮ. ಮನಸ್ಸಿಗೆ ಶಾಂತಿ. ಪರಿಸ್ಥಿತಿ ಪೂರಕವಾಗಿರುವುದಿಲ್ಲ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
