Daily Horoscope 19 January 2026 |ವಿಶ್ವವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಇಂದು ರಾತ್ರಿ 2.09 ರವರೆಗೆ ಇದ್ದು, ತದನಂತರ ಬಿದಿಗೆ ತಿಥಿ ಆರಂಭವಾಗಲಿದೆ. ಪೂರ್ವಾಹ್ನ 12.20 ರವರೆಗೆ ಉತ್ತರಾಷಾಢವಿದ್ದು, ನಂತರ ಶ್ರವಣ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ರಾತ್ರಿ 2.33 ರಿಂದ 4.13 ರವರೆಗೆ ಲಭ್ಯವಿವೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು! ಸೊರಬದಲ್ಲಿ ಇಬ್ಬರು ಮಿಸ್ಸಿಂಗ್ !

ಇವತ್ತಿನ ರಾಶಿಫಲ
ಮೇಷ | ಉದ್ಯೋಗ ಲಭಿಸುವ ಶುಭ ಸುದ್ದಿ, ಸ್ಥಿರಾಸ್ತಿಯಲ್ಲಿ ವೃದ್ಧಿ ಮತ್ತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸಕಾಲ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಉತ್ತಮ ಪ್ರೋತ್ಸಾಹ.
ರಾತ್ರಿ ನಿಲ್ಲಿಸಿದ್ದ ಗಾಡಿ ಬೆಳಿಗ್ಗೆಯಷ್ಟರಲ್ಲಿ ನಾಪತ್ತೆ! ಸಾಗರ ರೋಡಲ್ಲಿ ಕತ್ತಲು ಕಳೆಯುವಷ್ಟರಲ್ಲಿ ಏನಾಯ್ತು!
ವೃಷಭ | ಅಂದುಕೊಂಡ ಕಾರ್ಯ ಮುಂದೂಡಿಕೆ, ಬಂಧುಗಳೊಂದಿಗೆ ಕಲಹ, ಅನಾರೋಗ್ಯ,ಆಸ್ತಿ ವಿವಾದ ಲೆಕ್ಕಾಚಾರ ತಲೆಕೆಳಗಾಗಬಹುದು. ಉದ್ಯೋಗ ಮತ್ತು ವೃತ್ತಿರಂಗದಲ್ಲಿ ನಿರುತ್ಸಾಹ.
ಮಿಥುನ | ಕುಟುಂಬದ ಜವಾಬ್ದಾರಿಯ ಹೊರೆ ಹೆಚ್ಚಾಗಲಿದೆ. ಈ ದಿನ ಕಷ್ಟವೆನಿಸಿದರೂ ಕೆಲವೊಂದನ್ನು ಪಾಲಿಸಬೇಕಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಆತುರ , ಅನಾರೋಗ್ಯ , ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಮುನ್ನಡೆ ಸಿಗುವುದಿಲ್ಲ.

ಕರ್ಕಾಟಕ | ಸಮಾಜದಲ್ಲಿ ಗೌರವ ಮತ್ತು ವರ್ಚಸ್ಸು ಹೆಚ್ಚಾಗಲಿದೆ. ಆಪ್ತರು ಹಾಗೂ ಸ್ನೇಹಿತರೊಂದಿಗೆ ಉಲ್ಲಾಸದಿಂದ ಸಮಯ ಕಳೆಯುವಿರಿ, ವಾಹನ ಸೌಲಭ್ಯ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ.
ಭದ್ರಾವತಿಯಲ್ಲಿ ದುಷ್ಕರ್ಮಿಗಳಿಂದ ಬಿಜೆಪಿ ಕಾರ್ಯಕರ್ತನ ಕಾರು ಪೀಸ್ ಪೀಸ್! Facebook Post ಕಾರಣನಾ?
ಸಿಂಹ | ಭೂಮಿ ಹಾಗೂ ಗೃಹ ಯೋಗ, ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವರು ಮತ್ತು ಸಹೋದರರೊಂದಿಗೆ ಇದ್ದ ಮನಸ್ತಾಪ ನಿವಾರಣೆಯಾಗಲಿದೆ. ಉದ್ಯೋಗ ಮತ್ತು ವೃತ್ತಿ ಬದುಕಿನ ಏರಿಳಿತಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ.
ಕನ್ಯಾ | ಮನೆಯ ಸದಸ್ಯರೊಂದಿಗೆ ವಿವಾದ, ಮನಸ್ಸು ಚಂಚಲವಾಗಿರುತ್ತದೆ ಮತ್ತು ಆರೋಗ್ಯ ಹಾಗೂ ಕುಟುಂಬದಲ್ಲಿ ಸಮಸ್ಯೆ , ಅನಗತ್ಯವಾಗಿ ವೈಮನಸ್ಸು. ವ್ಯಾಪಾರ ಉದ್ಯೋಗದಲ್ಲಿ ಸಾಮಾನ್ಯ ದಿನ

ತುಲಾ | ವ್ಯವಹಾರಗಳಲ್ಲಿ ಅಡೆತಡೆ, ದೂರದ ಊರುಗಳಿಗೆ ಪ್ರಯಾಣ ಮತ್ತು ಸಂಬಂಧಿಕರೊಂದಿಗೆ ವಿವಾದ, ಅನಾರೋಗ್ಯದ ಮುನ್ಸೂಚನೆ , ಖರ್ಚು ಹೆಚ್ಚಾಗುವುದು ವ್ಯಾಪಾರ ಮತ್ತು ಉದ್ಯೋಗದಲ್ಲಿ ವಿಶೇಷ ದಿನ.
ವೃಶ್ಚಿಕ | ಅನುಕೂಲಕರ ದಿನವಾಗಿದ್ದು , ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಮತ್ತು ಭೂಮಿ ಲಾಭ, ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಹಾಗೂ ದೇವರ ದರ್ಶನ ,ಉದ್ಯೋಗ, ವ್ಯಾಪಾರದಲ್ಲಿ ಹಿಂದಿನ ಖುಷಿಯ ದಿನ ಮರುಕಳಿಸುವುದು
ಧನು | ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಫಲಿತಾಂಶ ಕಷ್ಟ, ವಿವಾದ , ಬಂಧುಗಳಿಂದ ಟೀಕೆ, ಓಡಾಟ ಜಾಸ್ತಿ ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ
ಮಕರ | ಅಪರೂಪದ ಆಹ್ವಾನ ಬರಲಿದ್ದು ಮನೆಯಲ್ಲಿ ಶುಭ ಕಾರ್ಯ ಜರುಗುತ್ತವೆ ಮತ್ತು ಆದಾಯವು ತೃಪ್ತಿದಾಯಕವಾಗಿರುವುದು. ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳು ಬಗೆಹರಿಯುತ್ತವೆ.
ಕುಂಭ | ನೆಂಟರಿಷ್ಟರೊಂದಿಗೆ ವೈರತ್ವ, ದೂರ ಪ್ರಯಾಣ, ಕಳ್ಳರ ಭಯ ಹಾಗೂ ಕೆಲಸಗಳಲ್ಲಿ ಅನಿರೀಕ್ಷಿತ ಅಡೆತಡೆ ಲೆಕ್ಕಾಚಾರಗಳು ತಪ್ಪಿ ಜವಾಬ್ದಾರಿ ಹೆಚ್ಚಾಗುವುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಖರ್ಚು
ಮೀನ | ದೂರದ ಊರಿನಿಂದ ಬರಲಿದೆ ಶುಭ ಸುದ್ದಿ, ಆದಾಯದಲ್ಲಿ ಏರಿಕೆ ಮತ್ತು ಸಹಾಯ ಸಹಕಾರ ದೊರೆತು ಕೈಗೊಂಡ ಕಾರ್ಯಗಳಲ್ಲಿ ವಿಜಯಶಾಲಿಯಾಗುವಿರಿ. ವ್ಯಾಪಾರ ಉದ್ಯೋಗದಲ್ಲಿನ ಕಿರಿಕಿರಿ ದೂರವಾಗುತ್ತವೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
