ವಿದೇಶದಲ್ಲಿ ಉದ್ಯೋಗದ ಆಮಿಷ : ಸೊರಬಾ ವ್ಯಕ್ತಿಗೆ ಲಕ್ಷಾಂತರ ರೂಪಾಯಿ  ವಂಚನೆ

prathapa thirthahalli
Prathapa thirthahalli - content producer

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬಾ ತಾಲೂಕಿನ ವ್ಯಕ್ತಿಯೊಬ್ಬರಿಗೆ ಸೈಬರ್​ ವಂಚಕರು ಹೊರ ದೇಶದಲ್ಲಿ ಕೆಲಸ ಕೋಡಿಸುತ್ತೇನೆ  ನಂಬಿಸಿ 2.58 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ.

ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ

ದೂರುದಾರರು ವಿವಿಧ ವೆಬ್‌ಸೈಟ್‌ಗಳಲ್ಲಿ ವಿದೇಶಿ ವೃತ್ತಿ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೇ ಸಮಯಕ್ಕೆ, ದೂರುದಾರರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಮಾತನಾಡಿದ ವಂಚಕರು, ನಾವು ನಿಮಗೆ ವಿವಿಧ ಐಟಿ ಕಂಪನಿಗಳಲ್ಲಿ ಕೆಲಸ ಕೊಡಿಸುತ್ತೇವೆ, ಆದರೆ ಈ ಉದ್ಯೋಗವನ್ನು ಖಚಿತಪಡಿಸಲು ಕೆಲವು ಪ್ರಕ್ರಿಯೆಗಳು ಇದ್ದು, ಅದಕ್ಕಾಗಿ 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಖರ್ಚಾಗುತ್ತದೆ ಎಂದು ತಿಳಿಸಿ, ದೂರುದಾರರ ರೆಸ್ಯೂಮ್‌ (Resume) ಅನ್ನು ಕಳುಹಿಸಿಕೊಡುವಂತೆ ಕೇಳಿದ್ದಾರೆ.

ನಂತರ, ಕೆಲಸ ಕೊಡಿಸಲು ವಿವಿಧ ಪ್ರೊಸೆಸಿಂಗ್ ಶುಲ್ಕಗಳು (Process Charges) ಮತ್ತು ಇತರೆ ಶುಲ್ಕಗಳು ಬೇಕಾಗುತ್ತವೆ ಎಂದು ನಂಬಿಸಿ, ವಂಚಕರು ವಿವಿಧ ಹಂತಗಳಲ್ಲಿ ಒಟ್ಟು 2,58,000 ಲಕ್ಷ ಹಣವನ್ನು ದೂರುದಾರರಿಂದ ಪಡೆದುಕೊಂಡಿದ್ದಾರೆ. ಕೆಲವು ದಿನಗಳ ನಂತರವೂ ಕರೆ ಮಾಡಿದ ವಂಚಕರು, ಮತ್ತೆ 2 ಲಕ್ಷ ಹಣ ಹಾಕುವಂತೆ  ಕೇಳಿದಾಗ ದೂರುದಾರರಿಗೆ ಅನುಮಾನ ಬಂದಿದೆ. ಕೂಡಲೇ ಅವರು ತಾನು ಹಾಕಿದ ಹಣವನ್ನು ವಾಪಸ್ಸು ಹಾಕುವಂತೆ ಕೇಳಿದಾಗ, ವಂಚಕರು ಕರೆಯನ್ನು ‘ಬ್ಲಾಕ್’ ಮಾಡಿ, ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮೋಸ ಹೋಗಿದ್ದು ತಿಳಿದ ವ್ಯಕ್ತಿ ಶಿವಮೊಗ್ಗದ ಸಿ ಇ ಎನ್​ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದುರನ್ನು ದಾಖಲಿಸಿದ್ದಾರೆ.

Cyber job scam Soraba Man Loses 2.58 Lakh

Cyber job scam

Share This Article