crime news today 06-06-25 : ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ | ಎಫ್‌ಐಆರ್ ದಾಖಲು

prathapa thirthahalli
Prathapa thirthahalli - content producer

crime news today : ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

crime news today : ಏನಿದು ಪ್ರಕರಣ

ಜೂನ್ 4 ಮಧ್ಯರಾತ್ರಿ 12:15ರ ಸುಮಾರಿಗೆ ಗಣೇಶ್, ಅವರ ಅಣ್ಣ ಪ್ರಸನ್ನ ಮತ್ತು ಸ್ನೇಹಿತ ಶಿವು ಅವರು ಹೊಸಮನೆ 4ನೇ ತಿರುವಿನಲ್ಲಿರುವ ಹಾಲೇಶ್ವರಿ ದೇವಸ್ಥಾನದ ಬಳಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯನ್ನು ವೀಕ್ಷಿಸುತ್ತಿದ್ದರು. ಆ ಸಮಯದಲ್ಲಿ ಸುಮಾರು 20-25 ಜನರ ಗುಂಪು ಡೊಳ್ಳು ಬಾರಿಸುತ್ತಾ ನೃತ್ಯ ಮಾಡುತ್ತಿದ್ದು. ಈ ಗುಂಪಿನಲ್ಲಿದ್ದ ಕೆಲವರು ಏಕಾಏಕಿ ಗಣೇಶ್, ಪ್ರಸನ್ನ ಮತ್ತು ಶಿವು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

- Advertisement -

ಆಗ ಮಣಿ ಎಂಬಾತ ಪ್ಲೈವುಡ್, ಶಿಟು ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಗಣೇಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದು, ಇದರಿಂದ ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ನಂತರ ಇತರ ಆರೋಪಿಗಳು ಗಣೇಶ್ ಅವರ ಅಣ್ಣ ಪ್ರಸನ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ನಡೆಯುತ್ತಿದ್ದಾಗ ಅಲ್ಲಿದ್ದ ಜನರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗುತ್ತಿದ್ದ ಗಣೇಶ್ ಅವರನ್ನು ಅವರ ಅಣ್ಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

 

Share This Article