ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025: ಜಾತಿಗಣತಿ ಹೆಸರಲ್ಲಿ ಮನೆ ಬಳಿಗೆ ಬಂದ ಇಬ್ಬರು, ಮನೆಯವರ ಮೇಲೆ ಹಲ್ಲೆ ಮಾಡಿದ ಘಟನೆಯೊಂದು ಶಿವಮೊಗ್ಗದ ಕ್ಲಾರ್ಕ್ಪೇಟೆಯಲ್ಲಿ ನಡೆದಿದೆ. ಇವತ್ತು ಮಧ್ಯಾಹ್ನ 1.30 ರಸುಮಾರಿಗೆ ಘಟನೆ ನಡೆದಿದೆ ಎನ್ನಲಾಗಿದ್ದು, ಸ್ಥಳಿಯರೇ ಆರೋಪಿಗಳನ್ನ ಹಿಡಿದು ದೊಡ್ಡಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಏನಾಯ್ತು ಘಟನೆ
ಸ್ಥಳೀಯರು ಹೇಳುತ್ತಿರುವ ಪ್ರಕಾರ, ಕ್ಲಾರ್ಕ್ ಪೇಟೆ ಅಜಾದ್ ನಗರ ಸೆಕೆಂಡ್ ಕ್ರಾಸ್ನಲ್ಲಿರುವ ಮಹಿಳೆಯೊಬ್ಬರ ಮನೆಗೆ ಬಂದ ದಂಪತಿ ಜಾತಿ ಗಣತಿ ಮಾಡಲು ಬಂದಿದ್ದೇವೆ ಎಂದಿದ್ದಾರೆ. ಅಲ್ಲದೆ ಆಧಾರ್ ಕಾರ್ಡ್ ಕೊಡಿ ಎಂದು ಕೇಳಿದ್ದಾರೆ. ಆದಾರ್ ಕಾರ್ಡ್ ತರಲು ಮನೆಯಲ್ಲಿದ್ದ ಮಹಿಳೆ ತಿರುಗುತ್ತಲೇ ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿ ದರೋಡೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇನ್ನೂ ದಂಪತಿ ಹಲ್ಲೆ ಮಾಡುತ್ತಲೇ ಮನೆಯಲ್ಲಿದ್ದ ಮಹಿಳೆ ಕಿರುಚಾಡಿದ್ದಾರೆ. ತಕ್ಷಣಕ್ಕೆ ಅಲ್ಲಿದ್ದವರು ಮನೆ ಬಳಿಗೆ ಬಂದು ಆರೋಪಿ ದಂಪತಿಯನ್ನು ಹಿಡಿದ್ದಾರೆ. ಬಳಿಕ ಪರಿಶೀಲನೆ ನಡೆಸಿದಾಗ, ದಂಪತಿ ತಂದಿದ್ದ ಬ್ಯಾಗ್ನಲ್ಲಿ ಚಾಕು, ಕತ್ತಿ, ಗರಗಸ, ಕಟರ್, ಕಟ್ಟಿಂಗ್ ಪ್ಲೇಯರ್ ಇರುವುದು ಗೊತ್ತಾಗಿದೆ. ಅವರನ್ನ ವಿಚಾರಿಸಿದಾಗ, ತಮ್ಮನ್ನ ಆರೋಪಿಗಳು ತಸ್ಲಿಮಾ ಹಾಗೂ ಅಸ್ಲಾಂ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.


ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
Couple Posing as caste Census Officials Arrested for Robbery Attempt in Shivamogga
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Couple Posing as caste Census Officials Arrested
