College Food Fest ಶಿವಮೊಗ್ಗ, ಅಕ್ಟೋಬರ್ 04 ಮಲೆನಾಡು ಟುಡೆ ಸುದ್ದಿ : ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಇಂದು ಆಯೋಜಿಸಿದ್ದ ನಿರ್ವಹಣೆ (ಮ್ಯಾನೇಜ್ಮೆಂಟ್), ಸಾಂಸ್ಕೃತಿಕ ಮತ್ತು ಆಹಾರ ಮೇಳ ಸ್ಪರ್ಧೆಯು ವಿದ್ಯಾರ್ಥಿಗಳ ಕ್ರಿಯಾತ್ಮಕತೆಗೆ ವೇದಿಕೆಯಾಯಿತು. ಸ್ಪಂದನ ಮಹಿಳಾ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಹಾರ ತಜ್ಞರಂತೆ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದರು.
ಬೆಂಕಿರಹಿತ ಖಾದ್ಯಗಳ ತಯಾರಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಪಾನಿಪೂರಿ, ಸ್ಯಾಂಡ್‌ವಿಚ್, ಹಣ್ಣಿನ ರಸಾಯನ, ಚಾಕಲೇಟ್‌ಗಳು, ಪೌಷ್ಟಿಕ ನ್ಯೂಡಲ್ಸ್‌ಗಳು, ವಿವಿಧ ರೀತಿಯ ಪಾನೀಯಗಳು, ಹಾಗೂ ಕಾಳು, ಖಾರ್ನ್ ಮತ್ತು ಧಾನ್ಯಗಳಿಂದ ಮಾಡಿದ ವೈವಿಧ್ಯಮಯ ಖಾದ್ಯಗಳನ್ನು ಪ್ರದರ್ಶಿಸಿದರು. ಈ ವಿಶಿಷ್ಟ ಮತ್ತು ರುಚಿಕರವಾದ ಖಾದ್ಯಗಳು ಆಹಾರ ಪ್ರಿಯರ ಮನಸ್ಸನ್ನು ಗೆದ್ದವು.
ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದ ಈ ಆಹಾರ ಮೇಳದಲ್ಲಿ, ಕೈಗೆಟುಕುವ ದರದಲ್ಲಿ ಖಾದ್ಯಗಳನ್ನು ಮಾರಾಟ ಮಾಡಲಾಯಿತು. ವಿಶೇಷವಾಗಿ, ವಿದ್ಯಾರ್ಥಿಗಳು ಸಂಪೂರ್ಣ ಡಿಜಿಟಲೀಕರಣದ ಪಾವತಿ (Digital Payment) ವ್ಯವಸ್ಥೆಯನ್ನು ಬಳಸಿಕೊಂಡು ಗ್ರಾಹಕರಿಗೆ ತಾವು ತಯಾರಿಸಿದ ಖಾದ್ಯಗಳನ್ನು ನೀಡಿದರು. ಇದರ ಜೊತೆಗೆ, ವಿದ್ಯಾರ್ಥಿಗಳು ವಿವಿಧ ನಿರ್ವಹಣಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೂಡ ಉತ್ಸಾಹದಿಂದ ಭಾಗವಹಿಸಿದರು.
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
College Food Fest

![]()

