ಜವಹರಲಾಲ್  ನೆಹರು ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಸಹಕಾರಿ ಯೋಜನೆ ನಿರಂತರವಾಗಿ ಇರುತ್ತದೆ- ಮಧು ಬಂಗಾರಪ್ಪ.  

The co-operative scheme implemented by Jawaharlal Nehru will continue – Madhu Bangarappa. ಜವಹಾರಲಾಲ್  ನೆಹರು ರವರು ಜಾರಿಗೆ ತಂದ ಸಹಕಾರಿ ಯೋಜನೆ ನಿರಂತರವಾಗಿ ಇರುತ್ತದೆ- ಮಧು ಬಂಗಾರಪ್ಪ.  

ಜವಹರಲಾಲ್  ನೆಹರು ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಸಹಕಾರಿ ಯೋಜನೆ ನಿರಂತರವಾಗಿ ಇರುತ್ತದೆ- ಮಧು ಬಂಗಾರಪ್ಪ.  

KARNATAKA NEWS/ ONLINE / Malenadu today/ Nov 14, 2023 SHIVAMOGGA NEWS

Shivamogga | ಜವಹಾರಲಾಲ್  ನೆಹರು ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಸಹಕಾರಿ ಯೋಜನೆ ನಿರಂತರವಾಗಿ ಇರುತ್ತದೆ- ಮಧು ಬಂಗಾರಪ್ಪ.  

ಸಹಕಾರಿಗಳು ಇರದಿದ್ದರೇ ರೈತರಿಗೆ ಬಡವರಿಗೆ ಸಹಕಾರವೇ ಸಿಗುತ್ತಿರಲಿಲ್ಲ. ಸರ್ಕಾರದ ಪರವಾಗಿ ಯಾರಾದ್ರೂ ಸಹಕಾರ ಮಾಡ್ತಾರೆ ಅಂದ್ರೆ ಅದು ಸಹಕಾರಿ ಕ್ಷೇತ್ರದಿಂದಲೇ .ಜವಾಹರ್ ನೆಹರು ಇಚ್ಚಾಶಕ್ತಿಯಿಂದಾಗಿ ಜಾರಿಗೆ ಬಂದ ಯೋಜನೆ ನಿರಂತರವಾಗಿ ಇರುತ್ತದೆ. ಸರ್ಕಾರ ಇರುವವರೆಗೂ ಸಹಕಾರಿ ಕ್ಷೇತ್ರ ಇರುತ್ತದೆ. ಅದು ಇರಬೇಕು ಕೂಡ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. 

READ :ಪರದೆ ಸರಿಸಿ ಗರ್ಭಗುಡಿ ಪ್ರವೇಶಿಸಿದ ತಾಯಿ | 800 ವರ್ಷಗಳಿಂದ ನಡೆಯುತ್ತಿದೆ ಈ ಪವಾಡ

ಲಕ್ಷೀಶ್ವರದಲ್ಲಿ ಶೂ ಬದಲು ಚಪ್ಪಲಿ ನೀಡಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ಮಧು ಬಂಗಾರಪ್ಪ, ಹಂಗೇನಾದರೂ ಘಟನ ನಡೆದಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಶೂ ಅಂದ್ರೆ ಶೂ ಮೊಟ್ಟೆ ಅದ್ರೆ ಮೊಟ್ಟೆ ಕೊಡಲೇ ಬೇಕು. ರಾಜ್ಯದಲ್ಲಿ 60 ಸಾವಿರ ಶಾಲೆಗಳಿವೆ, ಅದರಲ್ಲಿ ಒಂದು ಶಾಲೆಯಲ್ಲಿ ಚಪ್ಪಲಿ ಕೊಟ್ಟಿದ್ದ  ಮಾತ್ರಕ್ಕೆ ನೀವು ಅದನ್ನು ತೋರಿಸಲು ಹೋಗಬೇಡಿ ಎಂದು ಮಾದ್ಯಮದವರಿಗೆ ಮಧು ಬಂಗಾರಪ್ಪ ಕುಟುಕಿದ್ದಾರೆ.

ಯಾರು ಚಪ್ಪಲಿ ನೀಡಿದ್ದಾರೋ ಅವರ ವಿರುದ್ಧ ಇಲಾಖೆಯಿಂದ ನೂರಕ್ಕೆ ನೂರರಷ್ಟು ಕ್ರಮ ಕೈಗೊಳ್ಳುತ್ತೇನೆ. ಬೇರೆ ಕಡೆಗಳಲ್ಲಿ ಒಳ್ಳೆ ಒಳ್ಳೆ ಶೂಗಳನ್ನು ಕೊಟ್ಟಿದ್ದಾರೆ ಅದನ್ನು ತೋರಿಸಿ ಎಂದು ಮಧು ಬಂಗಾರಪ್ಪ ಪತ್ರಕರ್ತರಿಗೆ ಸಲಹೇ ನೀಡಿದ್ದಾರೆ. ರಾಜ್ಯದಲ್ಲಿ ಬರಗಾಲ ಬಂದಂತ ಸಂದರ್ಭದಲ್ಲಿ ರೈತರಿಗೆ ಸಹಕಾರಿ ಕ್ಷೇತ್ರದಿಂದ ಬಹಳಷ್ಟು ಸಹಕಾರಿಯಾಗಿದೆ. 

READ : ವಿವಾಹ-ವಿಚಾರ | ಈಡಿಗ ವಧು-ವರರ ಅನ್ವೇಷಣೆ ಕೇಂದ್ರ ಆರಂಭ!

ಸಣ್ಣ ಸಣ್ಣ ಸೊಸೈಟಿಗಳಿಂದ ರೈತರಿಗೆ ನೆರವು ಸಿಕ್ಕಿದೆ. ಬ್ಲಡ್ ಬ್ಯಾಂಕ್ ಹೇಗೋ ಹಾಗೆ ರೈತರಿಗೆ ಸೊಸೈಟಿ ದುಡ್ಡಿನ ಬ್ಯಾಂಕ್. ಅದರ ಮೂಲಕವೇ ಅವರು ಸುಧಾರಣೆ ಕಂಡಿದ್ದಾರೆ. ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ಪರ್ಯಾಯವಾಗಿ ಯಾವಾಗಲೂ ಇರಬೇಕು. ಅದರಿಂದ ಜನರಿಗೆ ಅನುಕೂಲವಾಗಬೇಕು. ಇದು ಒಳ್ಳೆಯ ವ್ಯವಸ್ಥೆ.ಸರ್ಕಾರ ಕೂಡ ಸಹಕಾರಿ ಕ್ಷೇತ್ರಕ್ಕೆ ಸಹಕಾರ ನೀಡುತ್ತದೆ.ಕಾಡಾನೆ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ಮದು ಬಂಗಾರಪ್ಪ, ಈ ಕುರಿತಂತೆ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.