SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 25, 2024
ಮಹಾರಾಷ್ಟ್ರ | ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿ ಉರಿದಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಮುಂಬೈ-ಪುಣೆ ಹೆದ್ದಾರಿಯ ಬಳಿ ಬುಧವಾರ ಬೆಳಗ್ಗೆ 6.15 ಕ್ಕೆ ಚಾಲಕನ ನಿಯಂತ್ರಣ ತಪ್ಪಿ ರಾಸಾಯನಿಕದ ಟ್ಯಾಂಕರ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ವಿಷಯ ತಿಳಿದ ಕೂಡಲೇ ಖೋಪೋಲಿ ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳದವರು ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡು ಬೆಂಕಿ ನಂದಿಸಿದರು.
ಈ ಹಿಂದೆ ಜೈಪುರದಲ್ಲಿ ಸಿ ಎನ್ ಜಿ ಟ್ಯಾಂಕರ್ ಸ್ಪೋಟಗೊಂಡು ಹಲವಾರು ಕಾರುಗಳು ಸುಟ್ಟು ಹೋಗಿದ್ದವು. ಆ ಘಟನೆ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.
VIDEO | #Maharashtra: A speeding chemical tanker caught fire after it overturned near Mumbai-Pune highway in Khopoli, Raigad district on Wednesday morning.
(Source: Third Party) pic.twitter.com/GQsLFIfC8v
— Press Trust of India (@PTI_News) December 25, 2024
SUMMARY | A tanker carrying chemicals overturned and caught fire near the Mumbai-Pune highway in Maharashtra’s Raigad district this morning
KEYWORDS | chemicals, tanker, Maharashtra,