Cm Basavaraj Bommai :ಶಿವಮೊಗ್ಗಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಪ್ರತಿಭಟನೆಯ ಬಿಸಿ!

Cm Basavaraj Bommai arrives in Shimoga, faces protest

Cm Basavaraj Bommai  :ಶಿವಮೊಗ್ಗಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಪ್ರತಿಭಟನೆಯ ಬಿಸಿ!
Cm Basavaraj Bommai :ಶಿವಮೊಗ್ಗಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಪ್ರತಿಭಟನೆಯ ಬಿಸಿ!

MALENADUTODAY.COM | SHIVAMOGGA NEWS

ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಇವತ್ತು ಪ್ರತಿಭಟನೆಯ ಬಿಸಿ ಕೂಡ ತಟ್ಟಿದೆ. ಒಂದು ಕಡೆ ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆಯನ್ನು ಉಳಿಸುವಂತೆ ಸೇವ್ ಭದ್ರಾವತಿ ಎಂದು ಪೋಸ್ಟರ್​ ಹಿಡಿದು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.  ಶಿವಮೊಗ್ಗ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ದಲಿತ ಮುಖಂಡರು ಭದ್ರಾವತಿ ಕಾರ್ಖಾನೆ ಉಳಿಸುವಂತೆ ಮನವಿ ಸಲ್ಲಿಸಿದ್ರು.  

ಇನ್ನೊಂದೆಡೆ ಮುಳುಗಡೆ ಸಂತ್ರಸ್ತರಿಗೆ ಮತ್ತು ಬಗರರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಅಲ್ಲದೆ  ಸರ್ಕಿಟ್​ ಹೌಸ್​ನಲ್ಲಿ ಸಿಎಂರಿಗೆ ಅಹವಾಲು ಸಲ್ಲಿಸಿದ ಮುಖಂಡರು, ಘೋಷಣೆಗಳನ್ನು ಕೂಗಿದರು, ದಿ್ಕ್ಕಾರವನ್ನು ಕೂಗುತ್ತಾ, ನ್ಯಾಯಕ್ಕಾಗಿ ಆಗ್ರಹಿಸಿದ್ರು. 

ಶರಾವತಿ ಮುಳುಗಡೆ ಸಂತ್ರಸ್ತರ ಭವಣೆ ಇನ್ನೂ ಬಗೆಹರಿದಿಲ್ಲ. ಸುಮಾರು ಸಾವಿರ ಕುಟುಂಬಕ್ಕೆ 3,500 ಎಕರೆ ಭೂಮಿಯನ್ನು ಹಿಂದಿನ ಸರ್ಕಾರ ನೀಡಿತ್ತು. ಆದರೆ ಹೈಕೋರ್ಟ್ ಕೇಂದ್ರದ ಅನುಮತಿ ಪಡೆಯದೆ ಡಿನೋಟಿಫಿಕೇಷನ್ ಮಾಡಿದ್ದರಿಂದ ಆದೇಶ ರದ್ದು ಮಾಡಿದೆ. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಇದುವರೆಗೂ ಮೇಲ್ಮನವಿ ಸಲ್ಲಿಸಿಲ್ಲ ಎಂದು ಮನವಿದಾರರು ದೂರಿದರು. (3ನೇ ಪುಟಕ್ಕೆ)ಲಕ್ಷ ಅರ್ಜಿಗಳನ್ನು ವಜಾ ಮಾಡಿ ದ್ದಾರೆ. ರೈತರನ್ನ ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ದೂರಿದರು.  ಮಲೆನಾಡು ರೈತರ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್, ಪ್ರಮುಖರಾದ ಕೃಷ್ಣಮೂರ್ತಿ, ಧರ್ಮೇಂದ್ರ, ಪರಶುರಾಮ ಸೇರಿದಂತೆ ಹಲವರಿದ್ದರು.

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com