ಶೇಂಗಾ ಎಂದು ಭಾವಿಸಿ ವಿಷಬೀಜ ತಿಂದ ಮಕ್ಕಳು ಅಸ್ವಸ್ಥ

Children fall ill after consuming poisonous seeds thinking it was groundnut

ಶೇಂಗಾ ಎಂದು ಭಾವಿಸಿ ವಿಷಬೀಜ ತಿಂದ ಮಕ್ಕಳು ಅಸ್ವಸ್ಥ

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS

 ಉತ್ತರಕನ್ನಡ ಶಾಲೆಯ ಆವರಣದಲ್ಲಿ ಬೆಳದ ವಿಷಕಾರಿ ಬೀಜ ತಿಂದು10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. 

ಶೇಂಗಾ ಬೀಜವೆಂದು ಶಾಲೆಯ ಆವರಣದಲ್ಲಿ ಬೆಳದಿದ್ದ ಕಾಡು ಗಿಡದ ಬೀಜ ತಿಂದ 1,2 ಮತ್ತು 3 ನೇ ತರಗತಿಯ ಹತ್ತಕ್ಕೂ ಹೆಚ್ಚು ಮಕ್ಕಳು ಮನೆಗೆ ಹೋದಾಗ ವಾಂತಿ ಬೇದಿ ಪ್ರಾರಂಭವಾಗಿ  ಅಸ್ವಸ್ಥರಾಗಿದ್ದಾರೆ.

ಪರಾಭವಗೊಂಡ ಜನಪ್ರತಿನಿಧಿ ಕ್ಷೇತ್ರದಲ್ಲಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ, ಮುಂದೆ ಅದು ಅವರ ಗೆಲುವಿಗೆ ಸೋಪಾನವಾಗುತ್ತೆ! ಇದಕ್ಕೆ ಸಾಕ್ಷಿ ಮಧು ಬಂಗಾರಪ್ಪ ಹೇಗೆ ಗೊತ್ತಾ? JP STORY

ತಕ್ಷಣ ಪೋಷಕರು ಕಾಳಗಿನಕೊಪ್ಪ ಗ್ರಾಮದ ಸರಕಾರಿ ಆಸ್ಪತ್ರೆ ಹಾಗೂ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದು ,ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇನ್ನು ಚಿಕಿತ್ಸೆ ನೀಡಿದ ವೈದ್ಯ ಡಾ. ಗಣೇಶ ಅರಶೀಗೇರಿ ಅವರು ಮಾಹಿತಿ ನೀಡಿ  ಬಹುತೇಕ ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಮೂವರು ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮಕ್ಕಳನ್ನು ದಾಖಲಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ವಿಘಟನಗೊಳ್ಳುತ್ತಿರುವ ಸಮಾಜಕ್ಕೆ ಬಸವತತ್ವವೇ ಪರಿಹಾರ

ವಿಷಯ ತಿಳಿಯುತ್ತಿದ್ದಂತೆಯೇ ಸಿಪಿಐ ಸುರೇಶ ಶಿಂಗೆ, ಪಿಎಸ್ ಐ ವಿನೋದ ರೆಡ್ಡಿ, ಅಪರಾಧ ವಿಭಾಗದ ಪಿಎಸ್ ಐ  ಅಮಿನಸಾಬ್ ಅತ್ತಾರ ಹಾಗೂ ಸಿಬ್ಬಂದಿ ನಾಗೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು  ಶಾಲಾ ಶಿಕ್ಷಕರು, ಪಾಲಕರು ಮತ್ತು ಎಸ್‌ಡಿಎಂಸಿ ಕಮಿಟಿಯ ಸದಸ್ಯರು ಹಾಜರಿದ್ದರು.