ಮೆಗ್ಗಾನ್​ನಲ್ಲಿ ಹೆಣ್ಣು ಮಗು ಪತ್ತೆ | 12 ವರ್ಷದ ಬಾಲಕಿಯ ಫೋಷಕರಿಗಾಗಿ ಹುಡುಕಾಟ

Malenadu Today

MALENADUTODAY.COM | SHIVAMOGGA NEWS

ಮೆಗ್ಗಾನ್ ಆವರಣದಲ್ಲಿ ಹೆಣ್ಣು ಮಗು ಪತ್ತೆ

ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆ ಆವರಣ ದಲ್ಲಿ ಸುಮಾರು 5 ರಿಂದ 6 ತಿಂಗಳ ಹೆಣ್ಣು ಮಗು ಪತ್ತೆಯಾಗಿದೆ. ಸದ್ಯ ಈ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯವರು (https://dwcd.karnataka.gov.in/) ರಕ್ಷಿಸಿದ್ದಾರೆ. ಮಗುವಿನ ಪುನರ್ವಸತಿ ದೃಷ್ಟಿಯಿಂದ ಮಗುವಿನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅಧೀಕ್ಷಕರು, ಸರ್ಕಾರಿ ಬಾಲಕ ಬಾಲ ಮಂದಿರ, ಆಲ್ಗೊಳ, ಶಿವಮೊಗ್ಗ ಇವರ ಕಚೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08182-295511 ನ್ನು ಸಂಪರ್ಕಿಸಬಹುದೆಂದು ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.Malenadu Today

ಫೆಬ್ರವರಿ 20 ರಿಂದ 25ವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನಯಾತ್ರೆ

ಬಾಲಕಿ ರಕ್ಷಣೆ : ಪೋಷಕರ ಪತ್ತೆಗೆ ಮನವಿ

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಮಕ್ಕಳ ಸಹಾಯ ವಾಣಿಯ ಅಧಿಕಾರಿಗಳು 12 ವರ್ಷದ ಮೇಘನಾ ಎಂಬ ಹೆಣ್ಣು ಮಗುವನ್ನು ರಕ್ಷಿಸಿ ಪಾಲನೆ, ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ದಾಖಲಿಸಿದ್ದಾರೆ. ತಂದೆ ನಾಗಪ್ಪ ತಾಯಿ ಚಿನ್ನಮ್ಮ ಎಂಬುದಾಗಿ ಬಾಲಕಿಯು ತಿಳಿಸಿದ್ದಾಳೆ ಎನ್ನಲಾಗಿದೆ. ಈ ಸಂಬಂಧ  ಬಾಲಕಿಯ ಪೋಷಕರು, ಸಂಬಂಧಿಕರು ಇದ್ದಲ್ಲಿ ಅಥವಾ ಪೋಷಕರ ಬಗ್ಗೆ ಮಾಹಿತಿ ದೊರೆತಲ್ಲಿ ಸೂಕ್ತ ದಾಖಲಾತಿಯೊಂದಿಗೆ ಅದೀಕ್ಷಕರು, ಸರ್ಕಾರಿ ಬಾಲಕರ ಬಾಲ ಮಂದಿರ, ಆಲ್ಗೊಳ, ಶಿವಮೊಗ್ಗ ಇವರ ಕಚೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ : 08182-295511 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article