ಭದ್ರಾವತಿ : ಹೊಳೆ ಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದ ಬಳಿ ಫಾರಂ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್ ಲಾರಿ ಪಲ್ಟಿಯಾದ ಘಟನೆ ಇಂದು ಸಂಬವಿಸಿದೆ, ಈ ಹಿನ್ನೆಲೆ ನೂರಾರು ಕೋಳಿಗಳು ಸಾವನ್ನಪ್ಪಿದ್ದು, ದಾರಿಯಲ್ಲಿ ಸಾಗುತ್ತಿದ್ದ ಜನರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ.

ಶಿವಮೊಗ್ಗ, ಅಬಕಾರಿ ಇಲಾಖೆಯಿಂದ ದಿಢೀರ್ ದಾಳಿ, 51.75 ಲೀಟರ್ ಗೋವಾ ಮದ್ಯ ವಶ
ಮಲ್ಲಾಪುರ ಗ್ರಾಮದ ದೇವಸ್ಥಾನದ ತಿರುವಿನಲ್ಲಿ ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ಪಲ್ಟಿಯಾಗಿದೆ. ಕೋಳಿಗಳನ್ನು ಹೊತ್ತು ಆನವೇರಿ ಕಡೆಗೆ ಲಾರಿ ಸಾಗುತ್ತಿತ್ತು.ಇನ್ನು, ಲಾರಿಯಿಂದ ಹೊರಬಿದ್ದ ಫಾರಂ ಕೋಳಿಗಳನ್ನು ಜನರು ಹೊತ್ತೊಯ್ದಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದವರೆಲ್ಲ ಎರಡ್ಮೂರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಅಪಘಾತದ ರಭಸಕ್ಕೆ ನೂರಾರು ಕೋಳಿಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.


