Check Your Rashi Bhavishya October 9 2025 ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 09 2025: ಇಂದಿನ ಪಂಚಾಂಗ ಮತ್ತು ಇಂದಿನ ರಾಶಿ ಭವಿಷ್ಯ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಮತ್ತು ಆಶ್ವಯುಜ ಮಾಸದ ಶುಭ ದಿನ. ಬಹುಳ ತದಿಗೆ (ಕೃಷ್ಣ ಪಕ್ಷದ ತೃತೀಯ) ರಾತ್ರಿ 2:53 ರವರೆಗೆ ಇರುತ್ತದೆ, ನಂತರ ಚತುರ್ಥಿ ಇರಲಿದೆ. ನಕ್ಷತ್ರವು ಭರಣಿ ರಾತ್ರಿ 12:36 ರವರೆಗೆ ಇದ್ದು, ನಂತರ ಕೃತ್ತಿಕಾ ನಕ್ಷತ್ರವು ಪ್ರಾರಂಭವಾಗುತ್ತದೆ. ಕನ್ಯಾ ಮಾಸದ ಅಂತ್ಯ/ತುಲಾ ಮಾಸದ ಪ್ರಾರಂಭ (ಸಂಕ್ರಮಣ) ಇರುತ್ತದೆ. ಆಯನ : ದಕ್ಷಿಣಾಯನ. ಋತು : ಶರದ್ ಋತು. Check Your Rashi Bhavishya October 9 2025
ರಾಹು ಕಾಲ ಮಧ್ಯಾಹ್ನ 1:30 ರಿಂದ 3:00 ರವರೆಗೆ ಇದ್ದರೆ, ಯಮಗಂಡ ಕಾಲ ಬೆಳಿಗ್ಗೆ 6:00 ರಿಂದ 7:30 ರವರೆಗೆ ಇರುತ್ತದೆ. ಗುಳಿಕ ಕಾಲ ಮಧ್ಯಾಹ್ನ 9:30 ರಿಂದ 10:30 ರವರೆಗೆ, ಮತ್ತು ಅಮೃತ ಘಳಿಗೆ ರಾತ್ರಿ 8:05 ರಿಂದ 9:36 ರವರೆಗೆ ಇರುತ್ತದೆ. ಇಂದು ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯುವ ದಿನ, ವಿಶ್ವಾ ಅಂಜಿ ದಿನ, ಮೇಟಿಗಾತಿ ಜಾತ್ರೆ, ಮುದಿನೂರು ರಥೋತ್ಸವ ನಡೆಯಲಿದೆ.
ಇಂದಿನ 12 ರಾಶಿಗಳ ವಿಸ್ತೃತ ಭವಿಷ್ಯ (ಅಕ್ಟೋಬರ್ 9, 2025)
ಮೇಷ : ಹೆಚ್ಚಿನ ಉತ್ಸಾಹದಿಂದ ಕೆಲಸ ಪೂರ್ಣಗೊಳಿಸಲಿದ್ದೀರಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಕುಟುಂಬದ ಬಲ ಸಿಗಲಿದೆ. ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ. ವ್ಯವಹಾರದಲ್ಲಿ ವಿಸ್ತರಣೆ ಕಾಣಲಿದ್ದು, ಉದ್ಯೋಗದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ. (Progress)
ವೃಷಭ: ಸಂಬಂಧಿಕರೊಂದಿಗೆ ಕೆಲವು ಭಿನ್ನಾಭಿಪ್ರಾಯ ಎದುರಿಸಬೇಕಾಗಬಹುದು. ಹಠಾತ್ ಪ್ರಯಾಣ. ಕುಟುಂಬದಲ್ಲಿ ಒತ್ತಡದ ವಾತಾವರಣ. ಧಾರ್ಮಿಕ ಸ್ಥಳಗಳಿಗೆ ಭೇಟಿ. ಕೆಲಸಕಾರ್ಯಗಳಲ್ಲಿ ವಿಳಂಬ. ವ್ಯವಹಾರದಲ್ಲಿ ನಿರಾಸೆ, ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಾಗುವುದು.
ಮಿಥುನ: ಉತ್ತಮ ಬಾಂಧವ್ಯ ಬೆಳೆಯಲಿದೆ. ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವ್ಯವಹಾರಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ವಾಹನ ಬಳಕೆಯಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಎದುರಾಗಬಹುದು. (Success)
ಕರ್ಕಾಟಕ: ಮಂಗಳಕರ ಘಟನೆಗಳು ನಡೆಯಲಿವೆ.ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ಆಸ್ತಿ-ಸಂಬಂಧಿತ ವಿವಾದಗಳಿಗೆ ಪರಿಹಾರ. ಧನ ಲಾಭ. ವ್ಯವಹಾರ ಸುಲಲಿತವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಹೊಸ ಹುರುಪು ಇರಲಿದೆ. (Affluence)Check Your Rashi Bhavishya October 9 2025
ಸಿಂಹ : ಕೆಲವು ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡಬಹುದು. ಸಾಲ ಪಡೆಯುವ ಪ್ರಯತ್ನಗಳನ್ನು ಮಾಡಬೇಕಾಗಬಹುದು. ಅನಿರೀಕ್ಷಿತ ಪ್ರಯಾಣ ಮತ್ತು ಆಂತರಿಕ ಹಾಗೂ ಬಾಹ್ಯ ಒತ್ತಡ ಎದುರಾಗಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ದಿನ. ವ್ಯವಹಾರ ಚೆನ್ನಾಗಿ ನಡೆಯಲಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ.

ಕನ್ಯಾ:ಅನಿರೀಕ್ಷಿತ ಪ್ರಯಾಣ.ಕೆಲವು ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ಗೊಂದಲಮಯವಾಗಿರಲಿದೆ. ಅನಾರೋಗ್ಯದ ಚಿಂತೆ. ಕೆಲಸ ನಿಧಾನಗತಿಯಲ್ಲಿ ಸಾಗಲಿವೆ. ವ್ಯವಹಾರ ಸಾಮಾನ್ಯ, ಉದ್ಯೋಗದಲ್ಲಿ ತಲೆಬಿಸಿ ಜಾಸ್ತಿ
ತುಲಾ: ಪರಿಚಯ ಮತ್ತು ಸಂಪರ್ಕ ವಿಸ್ತರಣೆ. ಹೊಸ ಮಾಹಿತಿ ದೊರೆಯುತ್ತವೆ. ಮನರಂಜನೆಗೆ ಅವಕಾಶವಿರುತ್ತದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ವಸ್ತು ಲಾಭ ಮತ್ತು ವಾಹನ ಖರೀದಿ, ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಅನುಕೂಲಕರವಾದ ಬದಲಾವಣೆ
ವೃಶ್ಚಿಕ: ವ್ಯಾಪಾರ-ವಹಿವಾಟುಗಳಲ್ಲಿ ಯಶಸ್ಸು.ವ್ಯವಹಾರ ಚೆನ್ನಾಗಿ ನಡೆಯಲಿದೆ. ಆರ್ಥಿಕ ಬೆಳವಣಿಗೆ ಇಂದು ಪ್ರಮುಖ ನಿರ್ಧಾರ ಕೈಗೊಳ್ಳುವವಿರಿ. ಉದ್ಯೋಗಗಳಲ್ಲಿ ಹೊಸ ಉತ್ಸಾಹ ತುಂಬಿರುತ್ತದೆ. (Achievement)
ಧನು: ಹಣಕಾಸಿನ ವ್ಯವಹಾರಗಳಲ್ಲಿ ನಿರಾಸೆ. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗದಿರಬಹುದು. ದೇವರ ದರ್ಶನ, ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಬಹುದು. ವ್ಯವಹಾರದಲ್ಲಿ ಅಲ್ಪ ಪ್ರಮಾಣದ ಲಾಭ ಸಿಗಲಿದೆ. ಕೆಲಸದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. (Effort)
ಮಕರ: ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಆರ್ಥಿಕ ಪರಿಸ್ಥಿತಿ ಅಷ್ಟೊಂದು ಅನುಕೂಲಕರವಾಗಿಲ್ಲ. ಹೆಚ್ಚಿನ ಶ್ರಮ ಅನಿವಾರ್ಯ. ದೂರ ಪ್ರಯಾಣ. ನಿರುತ್ಸಾಹ. ದೇವರ ಚಿಂತನೆಗಳಲ್ಲಿ ಸಮಯ ಕಳೆಯುತ್ತೀರಿ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಏರಿಳಿತ

ಕುಂಭ: ಸ್ನೇಹಿತರೊಂದಿಗೆ ವಾದ-ವಿವಾದ. ಸಾಲದ ಬಗ್ಗೆ ಎಚ್ಚರವಿರಲಿ. ಹಠಾತ್ ಪ್ರಯಾಣ ಮತ್ತು ಕೌಟುಂಬಿಕ ಸಮಸ್ಯೆ.. ನಿಮ್ಮ ವ್ಯವಹಾರ ಲಾಭದಾಯಕವಾಗಿ ನಡೆಯಲಿವೆ. ಉದ್ಯೋಗಗಳಲ್ಲಿ ಗೊಂದಲದ ವಾತಾವರಣವಿರಲಿದೆ.
ಮೀನ: ಆಪ್ತ ಸ್ನೇಹಿತರೊಂದಿಗಿನ ವಿವಾದ ಬಗೆಹರಿಯಲಿವೆ. ಶುಭ ಕಾರ್ಯಕ್ರಮ. ಹೊಸ ಭೂಮಿ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ಆಧ್ಯಾತ್ಮಿಕ ಚಿಂತನೆ. ಮನರಂಜನೆ ಇರಲಿದೆ. ವ್ಯವಹಾರ ವಿಸ್ತರಣೆ ಕಾಣಲಿವೆ. ಉದ್ಯೋಗಗಳಲ್ಲಿ ಹೊಸ ಅವಕಾಶ ಅರಸಿ ಬರಲಿವೆ.
Check Your Rashi Bhavishya October 9 2025
Panchang details, Rashi Bhavishya for today, Daily horoscope in Kannada, Thursday Nakshatra Tithi, Bharani Nakshatra timings, Today’s Rahu Kala, auspicious time today, Vrishabha Rashi Bhavishya, Mithuna Rashi predictions, Simha Rashi financial issues, Best time for travel today, Consult Panchang online, ಇಂದಿನ ರಾಶಿ ಭವಿಷ್ಯ, ಅಕ್ಟೋಬರ್ 9, 2025 ಪಂಚಾಂಗ, ಗುರುವಾರ ರಾಹು ಕಾಲ, ಭರಣಿ ನಕ್ಷತ್ರ, ಮೇಷ ರಾಶಿ, ವೃಷಭ ರಾಶಿ, ಸಿಂಹ ರಾಶಿ ಭವಿಷ್ಯ, ಕರ್ಕಾಟಕ ಶುಭ ಘಟನೆಗಳು, ತುಲಾ ರಾಶಿ ಲಾಭ, ವೃಶ್ಚಿಕ ರಾಶಿ ಯಶಸ್ಸು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!