ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್

ajjimane ganesh

ನವೆಂಬರ್ 24,  2025 : ಮಲೆನಾಡು ಟುಡೆ :  ಶಿವಮೊಗ್ಗ ವಿನೋಬ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನದ ಘಟನೆಯೊಂದು ನಡೆದಿದೆ. ವೃದ್ಧೆಯೊಬ್ಬರ ಮಾಂಗಲ್ಯ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಇತ್ತೀಚೆಗೆ ಇದೇ ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಎರಡು ಸರಗಳ್ಳತನ ಪ್ರಕರಣವನ್ನು ಭೇದಿಸಿದ್ದರು.

Chain snatching incidents rise in Shivamogga amidst high gold prices. Elderly woman's chain stolen in Vinobanagara. Youth arrested for Ganja consumption. SP Mithun Kumar issues warning.
Chain snatching incidents rise in Shivamogga amidst high gold prices. Elderly woman’s chain stolen in Vinobanagara. Youth arrested for Ganja consumption. SP Mithun Kumar issues warning.

ಎರಡು ಪ್ರತ್ಯೇಕ ಸರಗಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 2,75,000/- ರೂ. ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದರು.ನವುಲೆ ಶಿವಬಸವನಗರ ಕ್ರಾಸ್ ರಸ್ತೆಯಲ್ಲಿ ನಡೆದಿದ್ದ ಒಂದು ಪ್ರಕರಣ ಹಾಗೂ ಆಲ್ಕೊಳ ಮಂಗಳ ಮಂದಿರ ರಸ್ತೆಯಲ್ಲಿರುವ ಕಾಳಿಕಾಂಭಾ ದೇವಸ್ಥಾನದ ಬಳಿ ನಡೆದಿದ್ದ ಇನ್ನೊಂದು ಪ್ರಕರಣದಲ್ಲಿ ಶ್ಯಾಡೋ ಸಚಿನ್ ಹಾಗೂ ಭುವನ ಎಂಬಾತನನ್ನು ಅರೆಸ್ಟ್ ಮಾಡಿದ್ದರು.

Chain snatching incidents

SUNCONTROL_FINAL-scaled

ಅಂದಿನ ಘಟನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಓದಲು ಪೂರ್ಣ ಸುದ್ದಿಯ ವಿವರ ಇಲ್ಲಿದೆ:

ನವೆಂಬರ್ 18 ರಂದು ನಡೆಯಿತು ಮತ್ತೊಂದು ಕಳ್ಳತನ ಪ್ರಕರಣ

ಪೊಲೀಸರು ಸರಗಳ್ಳತನದ ಆರೋಪಿಗಳನ್ನ ಬಂದಿಸಿದ್ದ ನ ಬೆನ್ನಲ್ಲೆ ಕಳೆದ ನವೆಂಬರ್​ 18 ರಂದು ಇಲ್ಲಿನ ಎಪಿಎಂಸಿ ಬಳಿ ಮಹಿಳೆಯೊಬ್ಬರು ಸರವನ್ನ ಕಿತ್ತುಕೊಂಡು ಹೋಗಲಾಗಿದೆ. ಈ ಕುರಿತು ದಾಖಲಾದ ಎಫ್​ಐಆರ್​ನಲ್ಲಿ ಉಲ್ಲೇಖವಾಗಿರುವ ಪ್ರಕಾರ, ನಡೆದ ಘಟನೆಯನ್ನು ಗಮನಿಸೋಣ. 

SUNCONTROL_FINAL-scaled

ಎಪಿಎಂಸಿ ಬಳಿ ತರಕಾರಿ ವ್ಯಾಪಾರಿಯ ಮಾಂಗಲ್ಯಸರ ಕಳ್ಳತನ/Chain snatching incidents

ತರಕಾರಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿರುವ ಬಗ್ಗೆ ಮಹಿಳೆಯು ದೂರು ನೀಡಿದ್ದಾರೆ. 44 ವರ್ಷಗಳಿಂದ ಎಪಿಎಂಸಿ ಎದುರು ಮರದ ಕೆಳಗೆ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆ, ಎಂದಿನಂತೆ ನವೆಂಬರ್ 18, 2025 ರಂದು  ಮಧ್ಯಾಹ್ನ 12:50ರ ಸಮಯದಲ್ಲಿ ವ್ಯಾಪಾರ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು

ಈ ವೇಳೆ ವಿನೋಬನಗರದ 60 ಅಡಿ ರಸ್ತೆಯ 16ನೇ ಕ್ರಾಸ್ ತಿರುವಿನಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಹೊನ್ನಮ್ಮ ಅವರ ಕೊರಳಿಗೆ ಕೈಹಾಕಿ ಎಳೆದಿದ್ದಾರೆ. ಕತ್ತಿನಲ್ಲಿದ್ದ 58.150 ಗ್ರಾಂ ತೂಕದ ಬಟಾಣಿ ಮತ್ತು ಬೆಲ್ಟ್ ವಿನ್ಯಾಸದ ಚಿನ್ನದ ಮಾಂಗಲ್ಯ ಸರವನ್ನು ದರೋಡೆಕೋರರು ಕಸಿದುಕೊಂಡಿದ್ದಾರೆ. ಬಳಿಕ ಆರೋಪಿಗಳು ಬೈಕ್ ಏರಿ ಎಪಿಎಂಸಿ ಮಾರುಕಟ್ಟೆಯ ಕಡೆಗೆ ಎಸ್ಕೇಪ್ ಆಗಿದ್ದಾರೆ. ಇಬ್ಬರೂ ಸುಮಾರು 20 ರಿಂದ 25 ವರ್ಷದವರಾಗಿಬರಹುದು ಎಂದು ಊಹಿಸಲಾಗಿದೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿದ್ದು ತನಿಖೆ ನಡೆಸ್ತಿದ್ದಾರೆ.

Chain snatching incidents rise in Shivamogga amidst high gold prices. Elderly woman's chain stolen in Vinobanagara. Youth arrested for Ganja consumption. SP Mithun Kumar issues warning.
Chain snatching incidents rise in Shivamogga amidst high gold prices. Elderly woman’s chain stolen in Vinobanagara. Youth arrested for Ganja consumption. SP Mithun Kumar issues warning.

ಇಷ್ಟಕ್ಕೂ ಸರಗಳ್ಳತನ ಹೆಚ್ಚಾಗಲು ಕಾರಣ ಏನು?

ಸರಗಳ್ಳತನಕ್ಕು ಕ್ರೈಂ ಲೋಕಕ್ಕೂ ಸಾಕಷ್ಟು ಸಂಬಂಧಗಳಿವೆ. ಅಪರಾಧ ಕೃತ್ಯಗಳನ್ನೆ ಜೀವನ ಮಾಡಿಕೊಂಡಿರುವವರು ತಮ್ಮ ಕಾನೂನು ಸಂಬಂಧಿತ ಖರ್ಚುಗಳಿಗೆ ಈ ರೀತಿಯ ಸರಗಳ್ಳತನಗಳನ್ನು ನಡೆಸುತ್ತಾರೆ. ಇನ್ನೂ ಗಾಂಜಾ ಮತ್ತು ಅದಕ್ಕೂ ಮೇಲಿನ ಮಾದಕ ದೃವ್ಯಗಳಿಗೆ ಅಡಿಕ್ಟ್ ಆದವರು, ಆ ವಸ್ತುಗಳನ್ನು ಖರೀದಿಸಲು ಕಳ್ಳತನಕ್ಕೆ ಇಳಿಯುತ್ತಾರೆ. ಶಿವಮೊಗ್ಗದಲ್ಲಿ ಗಾಂಜಾ ಸುಲಭ ಹಾಗೂ ಸಲೀಸಾಗಿ ಸಿಗುತ್ತದೆ ಎಂಬುದರಲ್ಲಿ ಜನರಿಗೆ ಅನುಮಾನ ಉಳಿದಿಲ್ಲ. ಹಲವು ಮನೆಗಳಲ್ಲಿ ತಮ್ಮ ಮಕ್ಕಳ ಸ್ಥಿತಿ ಕಂಡು ಜನರು ಸಿಕ್ಕಸಿಕ್ಕವರಿಗೆ ಶಾಪ ಹಾಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿಯು ಪೊಲೀಸ್​ ಇಲಾಖೆ ಮಾದಕ ವಸ್ತುಗಳನ್ನು ಪೂರೈಸುವ ಜಾಲಗಳನ್ನು ಹಿಡಿಯುವ ಪ್ರಯತ್ನ ನಡೆಸ್ತಿಲ್ಲ.  ಇತ್ತೀಚೆಗೆ ವಿನೋಬಗನರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೆರೆಸಿಕ್ಕ ಸರಗಳ್ಳರ ಪೈಕಿ ಓರ್ವ ರೌಡಿಶೀಟರ್ ಎಂಬುದು ಗಮನಾರ್ಹ. ಇನ್ನೂ ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರೇ ಜಾಗೃತಿ ವಹಿಸಬೇಕಿದೆ. 

ಕಳದೆ ನವೆಂಬರ್ 12 ರಂದು ಬಿಸಿಎ ವಿದ್ಯಾರ್ಥಿಯೊಬ್ಬ ಹೊಸ ರಿಂಗ್ ರೋಡ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕು ತೋರಿಸಿ ಚಿನ್ನದ ಸರ ಮತ್ತು ಮೊಬೈಲ್ ಕಿತ್ತುಕೊಂಡಿದ್ದರು. ಜಯನಗರ, ವಿನೋಬನಗರ ಮತ್ತು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ವರದಿಯಾಗಿವೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Chain snatching incidents rise in Shivamogga amidst high gold prices. Elderly woman’s chain stolen in Vinobanagara. Youth arrested for Ganja consumption. SP Mithun Kumar issues warning.

Share This Article