ಸೆಂಟ್ರಲ್ ಬ್ಯಾಂಕ್‌ನಲ್ಲಿ 350 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆದರೂ ಅಂಕ ಕಡಿತವಿಲ್ಲ!

ಬೆಂಗಳೂರು | ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಭರ್ಜರಿ ಅವಕಾಶ ನೀಡಿದೆ. ಮಾರ್ಕೆಟಿಂಗ್ ಮತ್ತು ಫಾರಿನ್ ಎಕ್ಸ್‌ಚೇಂಜ್ ವಿಭಾಗದಲ್ಲಿ ಒಟ್ಟು 350 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ಅಧಿಸೂಚನೆ ಹೊರಡಿಸಿದೆ.

ಶಿವಮೊಗ್ಗ ಪಾಲಿಕೆ ಎದುರು ಕಾಂಗ್ರೆಸ್​ ಕಾರ್ಯಕರ್ತರ ಪ್ರತಿಭಟನೆ! ಕರ್ನಾಟಕ ಬಚಾವೋ ಘೋಷಣೆ

ನೇಮಕಾತಿ ಪ್ರಕ್ರಿಯೆಯಲ್ಲಿ 300 ಮಾರ್ಕೆಟಿಂಗ್ ಆಫೀಸರ್ (ಸ್ಕೇಲ್-1) ಮತ್ತು 50 ಫಾರಿನ್ ಎಕ್ಸ್‌ಚೇಂಜ್ ಆಫೀಸರ್ (ಸ್ಕೇಲ್-3) ಹುದ್ದೆಗಳಿವೆ. ಮಾರ್ಕೆಟಿಂಗ್ ಹುದ್ದೆಗೆ ಎಂಬಿಎ ಅಥವಾ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 2 ವರ್ಷದ ಅನುಭವ ಅಗತ್ಯ. ವಿದೇಶಿ ವಿನಿಮಯ ಅಧಿಕಾರಿ ಹುದ್ದೆಗೆ ಪದವಿಯೊಂದಿಗೆ ಸಿಎಫ್‌ಎ/ಸಿಎ ಅಥವಾ ಎಂಬಿಎ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು ಹಾಗೂ ಐದು ವರ್ಷಗಳ ಅನುಭವ ಕಡ್ಡಾಯವಾಗಿದೆ. 

ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಪರೀಕ್ಷೆಯು ಒಟ್ಟು 100 ಅಂಕಗಳ ವಸ್ತುನಿಷ್ಠ ಮಾದರಿಯಾಗಿದ್ದು, 60 ನಿಮಿಷಗಳ ಕಾಲಾವಕಾಶವಿರುತ್ತದೆ. ವಿಶೇಷವೆಂದರೆ, ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಯಾವುದೇ ‘ಋಣಾತ್ಮಕ ಅಂಕಗಳು’ ಇರುವುದಿಲ್ಲ. ಪರೀಕ್ಷೆಯು ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ. 

ಸಾಮಾನ್ಯ ವರ್ಗದವರಿಗೆ 850 ರೂ. ಹಾಗೂ ಎಸ್‌ಸಿ/ಎಸ್‌ಟಿ/ಮಹಿಳಾ ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು 22 ರಿಂದ 35 ವರ್ಷದೊಳಗಿನವರಾಗಿದ್ದು, ಫೆಬ್ರವರಿ 3, 2026ರ ಒಳಗಾಗಿ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ centralbank.bank.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

CBI Recruitment 2026 Apply for 350 Officer Posts
CBI Recruitment 2026 Apply for 350 Officer Posts

CBI Recruitment 2026 Apply for 350 Officer Posts

shivamogga car decor sun control house
shivamogga car decor sun control house