ಯುವತಿಯರೇ ಎಚ್ಚರ | ಫೋಟೋ, ವಿಡಿಯೋ ಎಂದು ಹೆದರಿಸಿದ ಯುವಕ | ಸಿಇಎನ್​ ಠಾಣೆಯಲ್ಲಿ ದಾಖಲಾಯ್ತು FIR

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS

 

ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಮೊಬೈಲ್ ಫೋಟೋ, ವಿಡಿಯೋ ರೆಕಾರ್ಡ್​ ಮಾಡಿ ಕಿರುಕುಳ ನೀಡುತ್ತಿರುವ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ. 

ಯುವತಿಯರನ್ನ ಟ್ರ್ಯಾಪ್​ ಮಾಡಿ, ಅವರಿಂದ ಚಿನ್ನ,ದುಡ್ಡು ಪಡೆದು, ಅವರ ಖಾಸಗಿತನದ ದೃಶ್ಯಗಳನ್ನು ವೈರಲ್ ಮಾಡುವ ಬೆದರಿಕೆಯೊಡ್ಡುವ ಸಂಗತಿಗಳು ಬಹಳಷ್ಟು ನಡೆಯುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾನೂನಿನ ಅರಿವು ಮಹಿಳೆಯರಲ್ಲಿ ಇರಬೇಕಾಗುತ್ತದೆ. ಯಾರು ಏನೇ ಹೆದರಿಸಿದರೂ ಗೌಪ್ಯವಾಗಿ ಸಿಇಎನ್ ಠಾಣೆಗೆ ಅಥವಾ ಹತ್ತಿರದ ಪೊಲೀಸ್ ಸ್ಟೇಷನ್​ನಲ್ಲಿಯೋ ದೂರು ನೀಡಿದರೆ, ಹೆದರಿಸಿದ ವ್ಯಕ್ತಿ ಎಂತವನೇ ಆದರೂ ಆತ ಅಂದರ್ ಆಗುತ್ತಾನೆ..

ಸದ್ಯ ಯುವತಿಯೊಬ್ಬರು ತೋರಿದ ದೈರ್ಯದಿಂದಾಗಿ ಯುವಕನೊಬ್ಬನ ವಿರುದ್ದ ಕಂಪ್ಲೆಂಟ್ ದರ್ಜ್ ಆಗಿದ್ದು ಎಫ್ಐಆರ್ ಆಗಿದೆ. ಯುವಕನೊಬ್ಬ ಶೈಕ್ಷಣಿಕ ತರಭೇತಿ ಕಾರ್ಯಕ್ರಮದ ವೇಳೆ ಯುವತಿಯೊಬ್ಬಳನ್ನ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿ ಮೂಡಿತ್ತು. ಈ ಮಧ್ಯೆ ಯುವಕ ಯುವತಿಯಿಂದ ಕಷ್ಟ ಅಂತಾ ಚಿನ್ನ ಪಡೆದಿದ್ದ. ಆನಂತರ ಚಿನ್ನ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಲು ಆರಂಭಿಸಿದ್ದ. ಅಲ್ಲದೆ ಯುವತಿಯ ಕಡೆಯವರಿಗೆ ಕರೆ ಮಾಡಿ ಅಸಭ್ಯ ದೃಶ್ಯವನ್ನು ವೈರಲ್ ಮಾಡುವುದಾಗಿ ಹೇಳಿದ್ದ ಎಂದು ಆರೋಪಿಸಲಾಗಿದೆ.  ಈ ಸಂಬಂಧ ಯುವತಿ ದೂರು ನೀಡಿದ್ದು, ಇದೀಗ ಕಿರುಕುಳದ ಆಸಾಮಿಯನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು