ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 16, 2025 : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನಪೇಟೆ ಸಮೀಪ ಇವತ್ತು ನಡೆದ ಅವಗಢದ ಭೀಕರತೆಯನ್ನು ತೋರಿಸುವ ದೃಶ್ಯವೊಂದು ಲಭ್ಯವಾಗಿದೆ. ಇಲ್ಲಿನ ಚಿಪ್ಪಿಗರ ಕೆರೆ ಏರಿ ಬಳಿ ಬರುತ್ತಿದ್ದ ಕಾರು, ಚಾಲಕನ ಕಂಟ್ರೋಲ್ ತಪ್ಪಿ , ರಸ್ತೆಯಿಂದ ಕೆರೆಗೆ ಉರುಳಿತ್ತು. ಘಟನೆಯಲ್ಲಿ ತ್ಯಾಗರ್ತಿಯ ಹುಚ್ಚಪ್ಪ ಅವರ ಪತ್ನಿ ಪಾರ್ವತಮ್ಮ ಸಾವನ್ನಪ್ಪಿದ್ದರು. ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು.
ಈ ಘಟನೆಯು ಇಲ್ಲಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಾಣುವಂತೆ ವೇಗವಾಗಿ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಇದ್ದಕ್ಕಿದಂತೆ ಚಾಲಕನ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಮೊದಲು ಟರ್ನಿಂಗ್ನಲ್ಲಿ ರಸ್ತೆಯ ಬದಿಯಲ್ಲಿ ಗುದ್ದಿದ ಕಾರು ಆನಂತರ ಒಂದು ಜಂಪ್ ಆಗಿ ಕೆರೆಗೆ ಉಲ್ಟಾ ಬಿದ್ದಿದೆ. ಪರಿಣಾಮ ಕಾರಿನೊಳಗೆ ನೀರು ತುಂಬಿಕೊಂಢಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೂ ಇದೇ ಹೊತ್ತಿಗೆ ಅಲ್ಲಿಯೇ ಬರುತ್ತಿದ್ದ ಬೈಕ್ ಸವಾರ ಸ್ಥಳೀಯರನ್ನು ಕೂಗಿದ್ದಾರೆ. ಸ್ಥಳಕ್ಕೆ ಬಂದವರು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.


View this post on Instagram
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!