ಜೂನ್ 15 ರಂದು ಕಾರು ಅಫಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಆರ್ ಎಂ ಎಲ್ ನಗರದ ಸನಾ ರಾಬಿಯಾ ಕೌಸರ್ (22) ಮೃತ ದುರ್ದೈವಿ.
car accident in shivamogga : ಏನಿದು ಘಟನೆ.
ಎಂಬಿಬಿಎಸ್ ಪದವಿ ಮುಸಿಗಿ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಇಂಟರ್ಶಿಪ್ ಮಾಡುತ್ತಿದ್ದ ಸನಾ ರಾಬಿಯಾ ಕೌಸರ್ ಜೂನ್ 15 ರಂದು ಗೆಳೆಯರೊಂದಿಗೆ ಹೊಸನಗರಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಆ ವೇಳೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹ ಧಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಿಂದ ಸನಾ ರಾಬಿಯಾ ಕೌಸರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಕೂಡಲೇ ಚಿಕಿತ್ಸೆಗೆಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ವೈದ್ಯೆ ಸಾವನ್ನಪ್ಪಿದ್ದಾರೆ.
- Advertisement -
car accident in shivamogga ಘಟನಾ ಸಂಬಂಧ ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
TAGGED:car accident in shivamogga