by vijayendra :  ಮೇ 14 ರಂದು ರಾಜ್ಯದಾಧ್ಯಂತ ತಿರಂಗಾ ಯಾತ್ರೆಗೆ ಚಾಲನೆ | ಏನಿದು ತಿರಂಗ ಯಾತ್ರೆ

prathapa thirthahalli
Prathapa thirthahalli - content producer

by vijayendra :  ಭಾರತೀಯ ಸೈನಿಕರ ರಕ್ಷಣೆಗಾಗಿ ಪ್ರಾರ್ಥನೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಇಡೀ ದೇಶದಲ್ಲಿ ತಿರಂಗಾ ಯಾತ್ರೆ ಮಾಡುತ್ತಿದ್ದು, ಮೇ 16 ರಂದು ಶಿವಮೊಗ್ಗದಲ್ಲಿ  ತಿರಂಗಾ ಯಾತ್ರೆ  ಆಯೋಜಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ದೇಶದಲ್ಲಿ ತಿರಂಗಾ ಯಾತ್ರೆಯನ್ನ ಆಯೋಜನೆ ಮಾಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಕರ್ನಾಟಕದಲ್ಲಿ ಸಹ ತಿರಂಗ ಯಾತ್ರೆ ನಡೆಯಲಿದೆ. ರಾಜಕೀಯೇತರವಾಗಿ  ತಿರಂಗಯಾತ್ರೆ ಎಲ್ಲಾ ಜಿಲ್ಲೆಯಲ್ಲಿ ಆರಂಭ ಆಗಲಿದೆ. ಮೇ 14 ರಂದು ಬೆಂಗಳೂರಿನಲ್ಲಿ ತಿರಂಗಾಯಾತ್ರೆಗೆ ಚಾಲನೆ ನೀಡಲಿದ್ದು, ಮಾಜಿ ಸೈನಿಕರು ವೈದ್ಯರು ನಾಗರೀಕರು ವಿದ್ಯಾರ್ಥಿಗಳು ಈ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮೇ.15 ರಂದು ಮಂಗಳೂರು , ಬೆಳಗಾವಿಯಲ್ಲಿ ತಿರಂಗಾ  ಯಾತ್ರೆ ನಡೆಯಲಿದೆ.ಹಾಗೆಯೇ ಮೇ.16 ರಂದು ಶಿವಮೊಗ್ಗ ಸೇರಿ ಜಿಲ್ಲಾ ಕೇಂದ್ರದಲ್ಲಿ ತಿರಂಗ ಯಾತ್ರೆ ನಡೆಯಲಿದೆ. ಈ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು, ಈ ಯಾತ್ರೆಯ ಮೂಲಕ ನಮ್ಮ ದೇಶದ ಯೋಧರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದರು.

by vijayendra : ಪ್ರಿಯಾಂಕ್ ಖರ್ಗೆ ಟೀಕೆ ಸರಿಯಲ್ಲ

ಆಪರೇಶನ್ ಸಿಂಧೂರ್ ಬಗ್ಗೆ ಪ್ರಿಯಾಂಕ ಖರ್ಗೆ ಅವರು ಸ್ವಲ್ಪ ಹಗುರವಾಗಿ ಮಾತನಾಡುತ್ತಿದ್ದಾರೆ.ಪ್ರಧಾನಿಗಳು ಅಮೇರಿಕಾ ಅಧ್ಯಕ್ಷರಿಗೆ ಶರಣಾಗಿದ್ದಾರೆ ಎನ್ನುವ ರೀತಿಯಲ್ಲಿ ಟೀಕೆ ಮಾಡಿದ್ದಾರೆ. ಪ್ರಿಯಾಂಕ ಖರ್ಗೆಯವರು ಸೇರಿ ಕಾಂಗ್ರೆಸ್​ನ ಮುಖಂಡರು ಈ ರೀತಿ ಟೀಕೆ ಮಾಡುತ್ತಿರುವುದು ಸರಿಯಿಲ್ಲ. ಇಂತಹ ಸಂದರ್ಭದಲ್ಲಿ ಸೈನ್ಯದ ಜೊತೆ ಇಡೀ ದೇಶ ಇರಬೇಕು ಎಂದರು.

Share This Article