breaking news shimoga / ಬೆಳಗ್ಗೆ ವಾಕಿಂಗ್​ ಹೋಗಿದ್ದ ವ್ಯಕ್ತಿ ಮೇಲೆ ಅಟ್ಯಾಕ್! ಹ*ತ್ಯೆ

Malenadu Today

breaking news shimoga ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಕೊಪ್ಪದಲ್ಲಿ ಇವತ್ತು ಬೆಳಗ್ಗೆ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ವ್ಯಕ್ತಿಯ ಕತ್ತು ಸೀಳಿ ಕೊಲೆಮಾಡಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಲಾಗಿದೆ. ಇಲ್ಲಿನ ನಿವಾಸಿ 62 ವರ್ಷದ ಹೇಮಣ್ಣ ಕೊಲೆಯಾದವರು. ಇವತ್ತು ಬೆಳಗ್ಗೆ ಹೇಮಣ್ಣ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಅವರ ಮೇಲೆ ಅಟ್ಯಾಕ್ ಆಗಿದ್ದು, ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಕೊಲೆಗೆ ಕಾರಣ ಸ್ಪಷ್ಟವಾಗಿಲ್ಲವಾದರೂ  ಹಳೆ ದ್ವೇಷ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸ್ತಿದ್ದಾರೆ.  ಅಡಿಕೆ ಚೇಣಿ, ಭತ್ತ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಹೇಮಣ್ಣರವರ ಮೇಲೆ  ಎರಡು ವರ್ಷದ ಹಿಂದೆಯು ಇದೇ ರೀತಿ ಅಟ್ಯಾಕ್ ಆಗಿತ್ತು. ಎನ್ನಲಾಗಿದೆ.. ಪ್ರಕರಣ ಸಂಬಂಧ  ಹೊಳೆಹೊನ್ನೂರು ಠಾಣೆಯ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

Share This Article