ನವೆಂಬರ್ 25, 2025 : ಮಲೆನಾಡು ಟುಡೆ : ಮುಂಬೈನಲ್ಲಿ ಟೀಂ ಇಂಡಿಯಾ ಮಹಿಳಾ ಮಣಿಗಳು ವಿಶ್ವಕಪ್ ಗೆದ್ದಾಗ, ಇಡೀ ದೇಶವೇ ಸಂಭ್ರಮಿಸಿತ್ತು. ಆ ಸಂಭ್ರಮಕ್ಕೆ ಮತ್ತೊಂದು ಸಡಗರವನ್ನು ಅಟ್ಯಾಚ್ ಮಾಡಿದವರು, ದೇಶದ ವಿಶೇಷಚೇತನ ಮಹಿಳಾ ತಂಡದವರು. ವಿದೇಶದ ನೆಲದಲ್ಲಿ ನೇಪಾಳ ತಂಡವನ್ನು ಡಾಮಿನೆಂಟ್ ಮಾಡಿ ಸೋಲಿಸಿದ್ದ ಟೀಂ ಇಂಡಿಯಾ ಅಂಧರ ವಿಶ್ವಕಪ್‌ನಲ್ಲಿ ಅಗ್ರೆಸಿವ್ ಆಗಿ ಗೆದ್ದು ಬೀಗಿತ್ತು.

ಅಂಧರ ವಿಶ್ವಕಪ್
ಕ್ರಿಕೆಟ್ ಅನ್ನುವುದು ಧರ್ಮ ಎನಿಸಿಕೊಂಡಿರುವ ದೇಶದಲ್ಲಿ ಅದರ ಎಲ್ಲಾ ವಲಯದಲ್ಲಿಯು ನಾವೇ ಕಿಂಗ್ ಆಗಿರಬೇಕು ಎಂದುಕೊಳ್ಳುವುದು ತಪ್ಪಲ್ಲ ಮತ್ತು ಇದನ್ನು ಸಮರ್ಥಿಸಿದ್ದು ಅಂಧ ಮಹಿಳಾ ಟೀಂ..ಶ್ರೀಲಂಕಾದ ರಾಜದಾನಿ ಕೊಲೊಂಬೋದಲ್ಲಿ ವಿಶ್ವಕಪ್ ಗೆದ್ದು ಭಾರತಕ್ಕೆ ವಾಪಸ್ ಆದ ಟೀಂ ಇಂಡಿಯಾವನ್ನು ದಿಗ್ಗಜ ಅಗ್ರಜರೆಲ್ಲರೂ ಸ್ವಾಗತಿಸಿದ್ದರು. ಹಾಡಿ ಹೊಗಳಿದ್ದರು. ಆದರೆ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಟೀಂ ಇಂಡಿಯಾದ ಸಾಧನೆಯಲ್ಲಿ ಶಿವಮೊಗ್ಗದ ಓರ್ವ ವಿಶೇಷ ಚೇತನ ಯುವತಿಯ ಸಾಧನೆಯು ಸಹ ಗೆಲುವಿನ ಗುರಿ ಸೇರುವಲ್ಲಿ ನೆರವಾಗಿತ್ತು ಎಂಬ ವಿಚಾರ ಮೊದಲೇ ಗೊತ್ತಿದ್ದರೇ, ಶಿವಮೊಗ್ಗದ ಮಂದಿಯೆಲ್ಲಾ ಅಂದರ ವಿಶ್ವಕಪ್ ಫೈನಲ್ ಗೆಲುವಿನ ಸಡಗರವನ್ನು ಇನ್ನೂ ಅದ್ದೂರಿಯಾಗಿ ಆಚರಿಸುತ್ತಿದ್ದರೇನೋ?

ಹೊಸನಗರ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರಿಗೆ ಗಂಭೀರ ಗಾಯ
ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದ ಬರುವೆ
ಆದರೆ, ಹಾಗಾಗಿಲ್ಲ, ಬದಲಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆ ಸಮೀಪದ ಬರುವೆ ಗ್ರಾಮದ ಒಬ್ಬ ತಾಯಿ, ಒಬ್ಬ ತಂದೆ, ಹೆತ್ತ ಮಗಳ ಸಾಧನೆಯನ್ನು ಕಣ್ಣು ಒದ್ದೆ ಮಾಡಿಕೊಂಡು ನಗು ಚೆಲ್ಲುತ್ತಿದ್ದರು. ಚಿಕ್ಕಂದಿನಿಂದಲೂ ಈ ಹುಡುಗಿಗೆ ಹೀಗಾಯ್ತಲ್ಲ ಎಂದೇ ದೇವರನ್ನು ನೆನಸಿಕೊಳ್ತಿದ್ದ ಫೋಷಕರಲ್ಲಿ ಈಗ ತಮ್ಮ ಮಗಳ ಸಾಧನೆಯ ಗರಿ ಕಾಣುತ್ತಿದೆ. ಇದ್ದುದರಲ್ಲಿಯೇ ನೆಮ್ಮದಿ ಕಂಡಿದ್ದ ಕುಟುಂಬವನ್ನ ಈಗ ಯುವತಿಯ ಸಾಧನೆಯಿಂದ ಗುರುತಿಸಿ ಸನ್ಮಾನಿಸುವ ಒಂದೊಳ್ಳೆಯ ಕೆಲಸವು ಆರಂಭವಾಗಿದೆ. ವಿಶೇಷ ಅಂದರೆ, ತಮ್ಮ ಊರಿನ ಯುವತಿ ವಿಶ್ವಕಪ್ ಗೆದ್ದಾಳೆ ಕಣ್ರಿ, ಸಣ್ಣ ವಿಷಯವೇನ್ರಿ! ಅಂತಾ ಆ ಯುವತಿಯ ಫೋಷಕರಿಗೆ ಶಾಲು ಹಾಕಿ ಸನ್ಮಾನಿಸಿ, ಯುವತಿಯ ಸಾಧನೆಯ ಸುದ್ದಿಯನ್ನ ಊರಿಗೆ ತಿಳಿಸಿದದ ಮೊದಲಿಗರು ನಮ್ಮ ರಫಿ ರಿಪ್ಪನ್ಪೇಟೆ
ಅಂದಹಾಗೆ, ಸುದ್ದಿ ವಿಷಯಕ್ಕೆ ಬರುವುದಾದರೆ, ಇಷ್ಟೆಲ್ಲಾ ಹೇಳುತ್ತಿರುವುದು ರಿಪ್ಪನ್‌ಪೇಟೆಯ ಯುವತಿ ಕಾವ್ಯಾ ವಿ. ಬಗ್ಗೆ.. ಇವರು ಅಸಮಾನ್ಯ ಯುವತಿ, ವೈಫಲ್ಯವನ್ನು ಮೆಟ್ಟಿ ನಿಂತ ಛಲಗಾತಿ, ಕಾಣದ ಕಣ್ ದೃಷ್ಟಿಯಲ್ಲಿಯೇ ವಿಶ್ವವನ್ನೆ ಗೆದ್ದ ಶ್ರೇಯಸಿ. ವರ್ಣಿಸುವ ಪದಗಳಿಗೂ ಮೀರಿದ ಸಾಧಕಿ ಅನ್ನುವುದಕ್ಕೆ ಈಕೆಯ ಸಾಧನೆಯೇ ಸಾಕ್ಷಿ.
ಧರ್ಮಸ್ಥಳ ಅನನ್ಯಾ ಭಟ್ ಕೇಸ್, ರಿಪ್ಪನ್ಪೇಟೆಯಲ್ಲಿದ್ರಾ ಸುಜಾತಾ ಭಟ್! ನಿಜವೇನು?

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಪಂದ್ಯ
ಕಳೆದ ಭಾನುವಾರ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಅಂಧರ ವಿಶ್ವಕಪ್‌ನ ಫೈನಲ್‌ನಲ್ಲಿ ದೀಪಿಕಾ ಟಿ.ಸಿ. ನಾಯಕತ್ವದ ಭಾರತ ತಂಡವು ನೇಪಾಳವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಐತಿಹಾಸಿಕ ಜಯ ಸಾಧಿಸಿತ್ತು. ವಿಶ್ವಕಪ್ ತಂಡದಲ್ಲಿ ಕರ್ನಾಟಕದಿಂದ ಮೂವರು ಆಟಗಾರ್ತಿಯರಿದ್ದರು. ಆ ಪೈಕಿ ರಿಪ್ಪನ್‌ಪೇಟೆಯ ಕಾವ್ಯಾ ವಿ. ಕೂಡ ಒಬ್ಬರು. ಅತ್ಯುತ್ತಮ ಆಲ್‌ರೌಂಡರ್ ಆಗಿರುವ ಕಾವ್ಯ ವಿಶ್ವಕಪ್‌ನಲ್ಲಿ ಸಖತ್ ಪ್ರದರ್ಶನವನ್ನೆ ನೀಡಿದ್ದಾರೆ.

ಕಾವ್ಯಾ ಅವರು ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಆಚಾರ್ ಕೇರಿ ನಿವಾಸಿಗಳಾದ ಜಯಮ್ಮ ಮತ್ತು ವೆಂಕಟೇಶ್ ಆಚಾರ್ ಮಗಳು. ಐದು ಜನ ಹೆಣ್ಣುಮಕ್ಕಳ ನಡುವೆ, ಕಾವ್ಯಾ ವಿಶೇಷ ಚೇತನ. ಆರಂಭದಲ್ಲಿ ಮಗಳ ಸ್ಥಿತಿ ಬಗ್ಗೆ ಕುಟುಂಬಸ್ಥರಲ್ಲಿ ಒಂದು ರೀತಿಯ ದುಃಖವೂ ಇತ್ತು. ಆಕೆಯ ಭವಿಷ್ಯದ ಭಯವೂ ಇತ್ತು. ಹೆತ್ತ ತಂದೆ ತಾಯಿ ಮಾತ್ರ ಈ ಭಯವನ್ನು ಮೆಟ್ಟಿ, ಆಕೆಗೆ ಅವಶ್ಯಕತೆ ಇರುವ ಅವಕಾಶಗಳನ್ನೆ ಒದಗಿಸಿದರು. ನನ್ನಿಂದ ಏನಾಗುತ್ತದೆ? ಅಂದು ಕೊಳ್ಳದ ಕಾವ್ಯ ಸಹ ತನಗೆ ಒದಗಿದ ಅವಕಾಶದಲ್ಲಿ ಗುರು ಮೆಚ್ಚಿಸಿ, ಗುರಿಮುಟ್ಟಿದ್ದಾರೆ.

ಶಾರದಾ ಅಂಧರ ವಿಕಾಸ ಶಾಲೆ
ಕಾವ್ಯಾ ಅವರ ಕ್ರೀಡಾ ಜೀವನಕ್ಕೆ ಶಿವಮೊಗ್ಗದ ಅಂಧರ ವಿಕಾಸ ಕೇಂದ್ರದ ಶಿಕ್ಷಕರಾದ ಸುರೇಶ್ ಹಾಗೂ ಈಶ್ವರ್ ಅವರ ಪ್ರೇರಣೆ ಮತ್ತು ಮಾರ್ಗದರ್ಶನ ಮಹತ್ತರವಾದದ್ದು. 4ನೇ ತರಗತಿಯ ನಂತರ ಗೋಪಾಳದಲ್ಲಿ ಶಾರದಾ ಅಂಧರ ವಿಕಾಸ ಶಾಲೆ ಸೇರಿಕೊಂಡ ಕಾವ್ಯಾ ಅಲ್ಲಿಯೆ ತನ್ನ ಭವಿಷ್ಯದ ಮೊದಲ ಹೆಜ್ಜೆಗಳನ್ನ ಇರಿಸಿದರು. ಕ್ರಿಕೆಟ್ ಸೇರಿದಂತೆ ಹಲವು ಆಟಗಳನ್ನು ಅಭ್ಯಾಸ ಮಾಡಿಕೊಂಡ ಆಕೆ ಅಲ್ಲಿಯೆ ಶಿಕ್ಷಕರು ನೀಡಿದ ಪ್ರೋತ್ಸಾಹದಿಂದ ಒಂದೊಂದೆ ಮೆಟ್ಟಿಲು ಏರತೊಡಗಿದ್ರು. ಬಳಿಕ ಬೆಂಗಳೂರಿನ ಶಿಕಾ ಶೆಟ್ಟಿ ಮತ್ತು ಚಂದು ನೀಡಿದ ಕೋಚಿಂಗ್ ನಲ್ಲ ಅಂತರಾಷ್ಟ್ರೀಯಾ ಆಟಗಾರ್ತಿಯಾದ ಕಾವ್ಯರಿಗೆ ಜ್ಞಾನಭಾರತಿ ಎಜುಕೇಶನ್ ಸೊಸೈಟಿಯ ಸಹಕಾರವೂ ಸಿಕ್ಕಿತ್ತು.

ಕಣ್ಣು ಕಾಣದೇ ಇದ್ದವರಿಗೆ ಆಡಲು ಸಾಧ್ಯವಾಗುವುದಿಲ್ಲ, ಅದರಲ್ಲಿ ನನ್ನ ಮಗಳು ಜಯ ಸಾಧಿಸಿದ್ದಾಳೆ. ಇದು ನಮಗೆ ತುಂಬಾ ಹೆಮ್ಮೆ, ಎಂದು ಕಾವ್ಯಾ ಅವರ ತಂದೆ ವೆಂಕಟೇಶ್ ಆಚಾರ್ ಅವರು ಹೇಳುವಾಗ ಅವರ ಮಾತುಗಳಲ್ಲಿ ಕೇವಲ ಸಂತೋಷ ಮಾತ್ರ ಇರಲಿಲ್ಲ, ತಾವು ಪಟ್ಟ ಎಲ್ಲಾ ಕಷ್ಟಗಳಿಗೆ ದೊರೆತ ಒಂದು ಸಾರ್ಥಕತೆಯ ಆನಂದ ಬಾಷ್ಪವೂ ಇತ್ತು.



ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
