bjp tiranga yatra : ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಮೇ 16 ರಂದು ಕೈಗೊಂಡಿದ್ದ ತಿರಂಗ ಯಾತ್ರೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮೇ 20 ರಂದು ನಡೆಸಲು ತೀರ್ಮಾನಿಸಲಾಗಿದೆ.
ಭಾರತ ಸೇನೆ ಪಾಕಿಸ್ತಾನದ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜಿಪಿ ನಡ್ಡಾರವರ ನಿರ್ದೇಶನದಂತೆ ಬಿಜೆಪಿ ದೇಶದ್ಯಾಂತ ತಿರಂಗ ಯಾತ್ರೆಯನ್ನು ಕೈಗೊಂಡಿತ್ತು. ಅದೇ ರೀತಿ ಈ ಯಾತ್ರೆಯನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮೇ15 ರಿಂದ 23 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ಶಿವಮೊಗ್ಗದಲ್ಲಿ ಮೇ 16 ರಂದು ತಿರಂಗ ಯಾತ್ರೆ ನಡೆಯಬೇಕಿತ್ತು. ಆದರೆ ಈಗ ಕಾರಣಾಂತರಗಳಿಂದ ಶಿವಮೊಗ್ಗದಲ್ಲಿ ಮೇ 16 ರಂದು ನಡೆಯಬೇಕಿದ್ದ ತಿರಂಗ ಯಾತ್ರೆಯನ್ನು ಮೇ 20 ಕ್ಕೆ ಮುಂದೂಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ಜಿಲ್ಲಾ ಘಟಕ ಕಾರಣಾಂತರಗಳಿಂದ ತಿರಂಗ ಯಾತ್ರೆಯನ್ನು ಮೂಂದೂಡಿದ್ದೇವೆ, ಮೇ 20 ರಂದು ಬೆಳಿಗ್ಗೆ 10:30 ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್ನಿಂದ ತಿರಂಗ ಯಾತ್ರೆ ಆರಂಭವಾಗುತ್ತದೆ ಎಂದು ತಿಳಿಸಿದೆ.