ಆಸ್ಪತ್ರೆಯಿಂದ ಹೊರಬಂದ ವ್ಯಕ್ತಿಗೆ ಕಾದಿತ್ತು ಶಾಕ್​ : ಕೇವಲ 30 ನಿಮಿಷಗಳೊಳಗೆ ನಡೆಯಿತು ಈ ಘಟನೆ

prathapa thirthahalli
Prathapa thirthahalli - content producer

bike stolen ಇತ್ತೀಚೆಗೆ ಶಿವಮೊಗ್ಗದ ನಗರ ಪ್ರದೇಶಗಲ್ಲಿ ಬೈಕ್​ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಅದಕ್ಕೆ ಪೂರಕ ವೆಂಬಂತೆ ಶಿವಮೊಗ್ಗದ ಮೆಗ್ಗಾನ್ ​ಆಸ್ಪತ್ರೆಯ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಬೈಕ್​ನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ.

ವ್ಯಕ್ತಿಯೊಬ್ಬರು ಕಳೆದ 4 ದಿನಗಳ ಹಿಂದೆ ಮೆಗಾನ್​ ಆಸ್ಪತ್ರೆಯ ಪಾರ್ಕಿಂಗ್​ ನಲ್ಲಿ ಸಂಜೆ 6:30 ಕ್ಕೆ ತಮ್ಮ ಬಜಾಜ್​ ಬೈಕ್​ನ್ನು ನಿಲ್ಲಿಸಿ ಹೋಗಿದ್ದರು. ನಂತರ ಆಸ್ಪತ್ರೆಯ ನರ್ಸನ್ನು ಮಾತನಾಡಿಸಿ 7  ಗಂಟೆಗೆ ವಾಪಾಸ್​ ಬಂದಾಗ ವ್ಯಕ್ತಿಗೆ ಶಾಕ್​ ಎದುರಾಗಿತ್ತು, ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ. ಸುತ್ತಮುತ್ತ ಎಲ್ಲೆಡೆ ಹುಡುಕಾಡಿದರೂ ಬೈಕ್ ಪತ್ತೆಯಾಗಲಿಲ್ಲ. ಕೇವಲ 30 ನಿಮಿಷಗಳ ಅಂತರದಲ್ಲಿ ಬೈಕ್ ಕಳ್ಳತನವಾಗಿರುವುದು ತಿಳಿದುಬಂದಿದೆ.

- Advertisement -

ಇದನ್ನೂ ಓದಿ : ಪೆರೇಡ್​ ವೇಳೆ ಅಸ್ವಸ್ಥಳಾದ ವಿದ್ಯಾರ್ಥಿನಿ : ನೆರವಿಗೆ ಧಾವಿಸಿದ ಡಾ. ಧನಂಜಯ ಸರ್ಜಿ https://malenadutoday.com/dr-dhananjaya-sarji/ 

ಈ ಹಿನ್ನೆಲೆ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

bike stolen

 

Share This Article
Leave a Comment

Leave a Reply

Your email address will not be published. Required fields are marked *