ಬೈಕ್ ಹಾಗೂ ಗ್ಯಾಸ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ಬಾಳೆಬೈಲು ಸಮೀಪ ನಡೆದಿದೆ. ಸುದೀಪ್ ( 25) ಮತ್ತು ಸುಧೀಶ್ (30) ಮೃತಪಟ್ಟ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
ನಿನ್ನೆ ತಡರಾತ್ರಿ 1:30 ರ ಸಮಯದಲ್ಲಿ ಪಟ್ಟಣದ ಬಾಳೆಬೈಲಿನ ಆರ್ ಎಂ ಸಿ ಯಾರ್ಡ್ ಬಳಿ ಗ್ಯಾಸ್ ಲಾರಿ ಹಾಗೂ ಪಲ್ಸರ್ ಬೈಲ್ ನಡುವೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಬೈಕ್ನ ಮುಂಬಾಗ ಸಂಪೂರ್ಣ ಜಖಂ ಆಗಿದೆ, ಬೈಕ್ನಲ್ಲಿದ್ದ ಇಬ್ಬರು ಹೆಲ್ಮೆಟ್ ಧರಿಸದೇ ಇದ್ದ ಪರಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ಇಬ್ಬರು ಯುವಕರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Bike Gas Lorry Collision Near Balebail,


