ಶಾಲಾ ಬಸ್​ ಡಿಕ್ಕಿ, ಬೈಕ್​ ಸವಾರ ಸಾವು 

prathapa thirthahalli
Prathapa thirthahalli - content producer

ಶಿಕಾರಿಪುರ : ಶಾಲಾ ಬಸ್ಸೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಶಿಕಾರಿಪುರದ  ಹೊರವಲಯದಲ್ಲಿ ಸೋಮವಾರ ಸಂಜೆ ನಡೆದಿದೆ. ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ವಿನಾಯಕ (36) ಮೃತ  ವ್ಯಕ್ತಿ

Bike accident  Rider Dies on Spot in shikaripura
Bike accident  Rider Dies on Spot in shikaripura

ಶಾಹಿ ಗಾರ್ಮೆಂಟ್ಸ್​ನಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿನಾಯಕ್​ ಅವರ ಸ್ನೇಹಿತ್​ ಮೋಹನ್​ರೊಂದಿಗೆ  ಕಾರ್ಯನಿಮಿತ್ತ ಬೈಕ್​ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಶಾಲಾ ಬಸ್​​ ವಿನಾಯಕ್​ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ತೀವ್ರ ಗಾಯಗೊಂಡಿದ್ದ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.   ಬೈಕ್‌ನ ಹಿಂಬದಿ ಸವಾರ ಮೋಹನ್  ಗಾಯಗೊಂಡಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 

ಈ ಕುರಿತು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUNCONTROL_FINAL-scaled

Bike accident  Rider Dies on Spot in shikaripura

Bike accident  Rider Dies on Spot in shikaripura

Share This Article