SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಂಬಂದ ಮತ್ತೊಂದು ಸುದ್ದಿ ಚಿಕ್ಕಮಗಳೂರು ಜಿಲ್ಲೆಯಿಂದ ವರದಿಯಾಗಿದೆ ರಾಜ್ಯದ ಮಾಧ್ಯಮವೊಂದರಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಆ ವರದಿಯ ಪ್ರಕಾರ, ನಕ್ಸಲ್ ನಿಗ್ರಹ ಪಡೆ ಚಿಕ್ಕಮಗಳೂರಿನಲ್ಲಿ ಕೂಂಬಿಂಗ್ ತೀವ್ರಗೊಳಿಸಿದೆ.
ಮುಂಡಗಾರು ಲತಾ ಹಾಗೂ ವನಜಾಕ್ಷಿ ಮತ್ತು ಸುಂದರಿ, ಜಯಣ್ಣ, ರವೀಂದ್ರನಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ. ಇವರುಗಳಿಗಾಗಿ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಾಗುತ್ತಿದೆ
ಈ ನಡುವೆ ವನಜಾಕ್ಷಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ ಎಂಬ ಬಗ್ಗೆ ಅಂಗಡಿ ಸುರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದ್ದು, ಅವರಿಗೆ ಶರಣಾಗುವಂತೆ ಸೂಚಿಸಲಾಗಿದೆಯಂತೆ. ಒಟ್ಟಾರೆ ಮಲೆನಾಡ ಕಾಡಂಚಿನಲ್ಲಿ ಎಎನ್ಎಫ್ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಸದ್ಯದಲ್ಲಿಯೇ ನಕ್ಸಲ್ ವಿಚಾರವಾಗಿ ಮತ್ತೊಂದು ದೊಡ್ಡ ಬೆಳವಣಿಗೆ ಬೆಳಕಿಗೆ ಬರುವ ಸಾಧ್ಯತೆ ಇದೆ.
SUMMARY | The ANF is combing the forest areas of Chikkamagaluru, Shivamogga, Dakshina Kannada and kodagu districts for Naxal Mundagaru Latha, Vanajakshi, Sundari, Jainna and Ravindra.

KEY WORDS | ANF , combing the forest areas of Chikkamagaluru, Shivamogga, Dakshina Kannada and kodugu districts ,Naxal Mundagaru Latha, Vanajakshi, Sundari, Jayanna , Ravindra.