bhadravathi accident : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹತ್ತಿನಿಂತ ಕಾರು

prathapa thirthahalli
Prathapa thirthahalli - content producer

bhadravathi accident : ಭದ್ರಾವತಿ ರಸ್ತೆಯ ನಿದಿಗೆ ಸಮೀಪದಲ್ಲಿ ಇಂದು ಬೆಳಿಗ್ಗೆ  ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ನಿಂತಿದೆ. ಭದ್ರಾವತಿ ಕಡೆಯಿಂದ ಬರುತ್ತಿದ್ದ ಡಸ್ಟರ್​  ಕಾರು ಒಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೆ ಹಾರಿ ಮಣ್ಣಿನ ರಾಶಿಗೆ ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ  ಮಣ್ಣಿನಲ್ಲಿದ್ದ ಕಲ್ಲು  ಎದುರಿಗೆ ಬರುತ್ತಿದ್ದ ಲಾರಿಗೆ ತಾಗಿ ಲಾರಿಯ ಗ್ಲಾಸ್​ ಒಡೆದು ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರ ಅಪಘಾತದಿಂದ ಪಾರಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  

Share This Article