ಭದ್ರಾವತಿ: ತಾಲೂಕಿನ ಅರೆಬಿಳಚಿ ಕ್ಯಾಂಪ್ ಬಳಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಭದ್ರಾ ಎಡದಂಡೆ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ನಾಲ್ವರ ಪೈಕಿ, ಇಂದು ದಂಪತಿಗಳ ಮೃತದೇಹ ಪತ್ತೆಯಾಗಿದೆ. ಈ ಮೂಲಕ ನಾಪತ್ತೆಯಾಗಿದ್ದ 4 ಮೃತದೇಹಗಳು ಸತತ 5 ದಿನಗಳ ಕಾರ್ಯಾಚರಣೆಯಿಂದಾಗಿ ಇಂದು ಪತ್ತೆಯಾಗುವ ಮೂಲಕ ಇಡೀ ಕುಟುಂಬದ ಕಥೆ ದುರಂತ ಅಂತ್ಯ ಕಂಡಿದೆ.
ಮೊಬೈಲ್ ಕಳೆದುಹೋಗಿದೆಯೇ? ಈಗ ರಪ್ಪಾ ಸಿಗ್ತದೆ ಫೋನ್! ಹೀಗಿದೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆ
ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಶ್ವೇತಾ (28) ಹಾಗೂ ಅವರ ಪತಿ ಪರಶುರಾಮ್ (33) ಅವರ ಶವಗಳು ಇಂದು ಅರೆಬಿಳಚಿ ಕ್ಯಾಂಪ್ ಸಮೀಪದ ನಾಲೆಯಲ್ಲೇ ಪತ್ತೆಯಾಗಿವೆ. ಈ ಮೊದಲು ನೀಲಾಬಾಯಿ ಹಾಗೂ ಅವರ ಪುತ್ರ ರವಿಕುಮಾರ್ ಅವರ ಮೃತದೇಹಗಳು ಸಿಕ್ಕಿದ್ದವು. ಇದರೊಂದಿಗೆ ನಾಲೆಯಲ್ಲಿ ಮುಳುಗಿದ್ದ ಒಂದೇ ಕುಟುಂಬದ ನಾಲ್ವರೂ ಸಾವನ್ನಪ್ಪಿರುವುದು ದೃಢಪಟ್ಟಿದೆ.
ಕಳೆದ ಐದೂ ದಿನಗಳಿಂದ SDRF, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ನಿರಂತರ ಶೋಧ ಕಾರ್ಯ ನಡೆಸಿದ್ದರು. ನಾಲೆಯಲ್ಲಿ ನೀರಿನ ಮಟ್ಟವನ್ನು ಕಡಿಮೆ ಮಾಡಿ ಹುಡುಕಾಟ ನಡೆಸಿದ ಬಳಿಕ ಇಂದು ಉಳಿದ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


