bhadra canal / ಭದ್ರಾ ಚಾನಲ್​ಗೆ ಬಿದ್ದ ಕಾರು! ಶೋಧ ಕಾರ್ಯಾಚರಣೆಗೆ ಬಂದ ಈಶ್ವರ್ ಮಲ್ಪೆ, ಬಾರ್ ಮ್ಯಾನೇಜರ್​ ಮೃತದೇಹ ಪತ್ತೆ!

Malenadu Today

bhadra canal  ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪ ಸಿಗುವ ಭದ್ರಾ ಬಲದಂಡೆ ನಾಲೆಗೆ ಕಾರೊಂದು ಉರುಳಿ ಬಿದ್ದಿದೆ.  ಹೊಳೆಹೊನ್ನೂರು ಸಮೀಪದ ದಾನವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಾರು ದಾನವಾಡಿಯಿಂದ ನಾಗವಲ್ಲಿ ಗ್ರಾಮದೆಡೆಗೆ ತೆರಳುತ್ತಿದ್ದ ವೇಳೆ ನಾಲೆಗೆ ಉರುಳಿದೆ.  ಭದ್ರಾ ಜಲಾಶಯದಿಂದ ನಾಲೆಗೆ ನೀರು ಬಿಡುತ್ತಿರುವುದರಿಂದ ಚಾನಲ್​ನಲ್ಲಿ ಬರಪೂರ ನೀರು ಹರಿಯುತ್ತಿದ್ದು, ಕಾರು ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.  

bhadra canal / ಭದ್ರಾ ಚಾನಲ್​

ಇನ್ನೂ ಚಾನಲ್​ಗೆ ಬಿದ್ದ ಕಾರು ಹಾಗೂ ಅದರಲ್ಲಿದ್ದವರ ಪತ್ತೆಗಾಗಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಸ್ಥಳಕ್ಕೆ ಬಂದು ಶೋಧ ಕಾರ್ಯಾಚರಣೆ ನಡೆಸಿತ್ತು. ದಿನವಿಡಿ ಕಾರ್ಯಾಚರಣೆ ನಡೆಸಿದ ಬಳಿ  ಸ್ವಿಫ್ಟ್ ಡಿಸೇರ್ ಕಾರು ಹಾಗೂ ಭೋಜರಾಜ್ (32) ಎಂಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.   ಬಾಳೆಹೊನ್ನೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಮ್ಯಾನೇಜರ್ ಆಗಿದ್ದ ಬೋಜರಾಜ್​ ಆರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು.  

 

TAGGED:
Share This Article