ವಾಹನ ಸವಾರರೇ ಎಚ್ಚರ! ತುಂಗಾ ಸೇತುವೆ ಬಳಿ ಇದೇ ಡೇಂಜರ್ ಸ್ಫಾಟ್! ಏಕೆ ಗೊತ್ತಾ?

Beware of motorists! This is the danger spot near tunga bridge! Do you know why?

ವಾಹನ ಸವಾರರೇ ಎಚ್ಚರ! ತುಂಗಾ ಸೇತುವೆ ಬಳಿ ಇದೇ ಡೇಂಜರ್ ಸ್ಫಾಟ್! ಏಕೆ ಗೊತ್ತಾ?
tunga bridge

shivamogga Mar 25, 2024  tunga bridge ಸಾವನ್ನು ಕೈ ಬೀಸಿ ಕರೆಯುತ್ತಿದೆ ಭಾರಿ ವಾಹನಗಳ ಸಂಚಾರಕ್ಕೆತಡೆಯೊಡ್ಡಲು ಹಾಕಿರುವ ಕಮಾನು 

ಶಿವಮೊಗ್ಗ ತುಂಗಾ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಚಡೆಯೊಡ್ಡಲಾಗಿದೆ. ಬಸ್ಸು ಲಾರಿಗಳು ಸೇರಿದಂತೆ ಮಲ್ಟಿ ಆಕ್ಸಲ್ ವೀಲ್ ವಾಹನಗಳ ಸಂಚಾರ ನಿರ್ಭಂದಿಸುವ ಸಲುವಾಗಿ ಸೇತುವೆ ಇಕ್ಕೆಲಗಳಲ್ಲಿ ಕಬ್ಬಿಣದ ಕಮಾನುಗಳನ್ನು ಹಾಕಲಾಗಿದೆ. 

ರಾತ್ರಿ ವೇಳೆ ವೇಗವಾಗಿ ಬಂದ ಕೆಲವು ಬಾರಿ ವಾಹನಗಳು ಕಮಾನಿಗೆ ಡಿಕ್ಕಿ ಹೊಡೆದು ಅಪಘಾತ ಎಸಗಿದ್ದವು. ಇದಾದ ನಂತರ ಕಮಾನಿನ ಸನಿಹ ದೊಡ್ಡ ಹಂಪ್ಸ್ ಹಾಕಲಾಗಿತ್ತು. ರಾತ್ರಿ ವೇಳೆ ಸಂಚಾರಿ ಪೊಲೀಸರು ಬ್ಯಾರಿಕೇಡ್ ಹಾಕಿ ಹೋಗುತ್ತಿದ್ದರು. ಆದರೆ ಇತ್ತಿಚ್ಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಸಾಗುವ ರಸ್ತೆಯಲ್ಲಿದ್ದ ಹಂಪ್ಸ್ ಗಳನ್ನು ತೆರವು ಗೊಳಿಸಲಾಗಿತ್ತು. 

ಅದೇ ರೀತಿ ಹೊಳೆಹೊನ್ನೂರು ಸರ್ಕಲ್ ಬಳಿಯ ತುಂಗಾ ಸೇತುವೆಗೆ ಹಾಕಲಾಗಿದ್ದ ಹಂಪ್ಸ್ ನ್ನು ತೆರವು ಗೊಳಿಸಲಾಗಿತ್ತು. ಈಗ ವೇಗವಾಗಿ ಭಾರಿಗಾತ್ರದ ವಾಹನಗಳು ಸಾಗಿ ಬರುತ್ತಿದೆ. ಟ್ರಾಫಿಕ್ ಪೊಲೀಸರಿಗೆ ಈಗ ಕಮಾನು ಕಾಯುವುದೇ ದೊಡ್ಡ ಕೆಲಸವಾಗಿದೆ. ಎಲ್ಲಿ ಭಾರಿ ಗಾತ್ರದ ವಾಹನಗಳು ವೇಗವಾಗಿ ಬಂದು ಕಮಾನಿಗೆ ಹೊಡೆದುಕೊಂಡು ಸಾವು ನೋವುಗಳಾಗುತ್ತವೋ ಎಂಬ ಆತಂಕ ಪೊಲೀಸರಿಗೆ ಇದೆ. 

ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕಮಾನು ತೆರವುಗೊಳಿಸಬೇಕು. ಇಲ್ಲವೇ ಕಮಾನು ಸನಿಹ ಹಂಪ್ಸ್ ನ್ನು ಹಾಕಬೇಕಿದೆ. ಇಲ್ಲವಾದಲ್ಲಿ ಈ ಮಾರ್ಗದಲ್ಲಿ ಅಪಾಯ ತಪ್ಪಿದ್ದಲ್ಲ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕಿದೆ. ಇಲ್ಲವೇ ಸಾವು ನೋವುಗಳಾದಾಗ ಅದರ ಹೊಣೆಯನ್ನ ಅಧಿಕಾರಿಗಳೇ ಹೊರಬೇಕಾಗುತ್ತದೆ ಎನ್ನುತ್ತಿದ್ದಾರೆ ‍ಸ್ಥಳೀಯರು