ಮಧು ಅಣ್ಣ ಏನಿದಣ್ಣ! ನೇರಾನೇರ ಸಿಕ್ಕಾಗಲೂ ಸಿಟ್ಟಾದರು ಬೇಳೂರು ಗೋಪಾಲಕೃಷ್ಣ! ಏನಿದು ಪ್ರಸಂಗ!

A scene of Belur Gopalakrishna's anger against Madhu Bangarappa was reported. ಮಧು ಬಂಗಾರಪ್ಪರವರ ವಿರುದ್ಧ ಬೇಳೂರು ಗೋಪಾಲಕೃಷ್ಣರವರು ಸಿಟ್ಟಾದ ಘಟನೆಯ ದೃಶ್ಯವೊಂದು ವರದಿಯಾಗಿದೆ

ಮಧು ಅಣ್ಣ ಏನಿದಣ್ಣ! ನೇರಾನೇರ  ಸಿಕ್ಕಾಗಲೂ ಸಿಟ್ಟಾದರು ಬೇಳೂರು ಗೋಪಾಲಕೃಷ್ಣ! ಏನಿದು ಪ್ರಸಂಗ!

KARNATAKA NEWS/ ONLINE / Malenadu today/ Nov 12, 2023 SHIVAMOGGA NEWS

Shivamogga |   ಶಿವಮೊಗ್ಗ ಕಾಂಗ್ರೆಸ್​ನಲ್ಲಿ ಸಚಿವರೊಂದು ಬಣ, ಅವರ ವಿರುದ್ಧದ ಒಂದು ಬಣ ಎಂಬಂತೆ ಸೃಷ್ಟಿಯಾಗುತ್ತಿದ್ದು, ನಾಯಕ ಮನಸ್ಸಿನ ಬಿರುಕು ದೊಡ್ಡದಾಗುತ್ತಿದೆಯೇ ವಿನಃ ಅದನ್ನ ತೇಪೆ ಹಚ್ಚಿ ಸರಿ ಮಾಡುವ ಪ್ರಯತ್ನ ನಡೆಯುತ್ತಿಲ್ಲ. ಇದಕ್ಕೆ ಪೂರಕವಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನೇರವಾಗಿಯೇ ಸಚಿವ ಮಧು ಬಂಗಾರಪ್ಪರವರನ್ನ ಪ್ರಶ್ನೆ ಮಾಡಿದ ಘಟನೆಯೊಂದು ನಡೆದಿದ್ದು, ಅದರ ದೃಶ್ಯ ಇದೀಗ ಹೊರಬಿದ್ದಿದೆ. 

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್​ರವರ ನೇತೃತ್ವದಲ್ಲಿ  ನಡೆದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯುತ್ತಿತ್ತು. ಗುದ್ದಲಿ ಪೂಜೆಗೆ ಬಂದಿದ್ದ ಅರ್ಚಕರು ಮಂತ್ರಗಳನ್ನ ಹೇಳುತ್ತಿದ್ರು. ಸಚಿವ ಮಧು ಬಂಗಾರಪ್ಪ ಹಾಗೂ ಶರಣಪ್ರಕಾಶ್​ ಪಾಟೀಲ್​ ಕೈಯಲ್ಲಿ ಅಕ್ಷತೆ ಹಿಡಿದು ನಿಂತಿದ್ದರು.

ಇದೇ ಸಂದರ್ಭದಲ್ಲಿ ಅಲ್ಲಿಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್​ಎಸ್​ ಸುಂದರೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರ ಆಗಮನವಾಯ್ತು. ಬರಬರುತ್ತಲೇ ಸರಿದ ಗುಂಪಿನ ನಡುವೆ ಸಚಿವರಿಗೆ ಕೈ ಮುಗಿದ ಬೇಳೂರು ಗೋಪಾಲಕೃಷ್ಣರವರು ತಮ್ಮ ಸಿಟ್ಟು ಹೊರಹಾಕಿದ್ರು.

READ : ತೋಟದಲ್ಲಿ ತಂತಿ ಬೇಲಿಗೆ ಸಿಕ್ಕ ಆನೆಮರಿ! ಮುದ್ದು ಕಂದನನ್ನ ಹೇಗೆ ಕಾಪಾಡಿದ್ವು ಗೊತ್ತಾ ಕಾಡಾನೆಗಳು!?

ಸಾರ್ ನಮಸ್ಕಾರ…ಏನ್​ ಸರ್​ ..ಎಂದು ಮಾತು ಶುರು ಮಾಡಿ ನಿಮಗಾಗಿ ಪಾರ್ಟಿ ಆಫೀಸ್​ನಲ್ಲಿ ಕಾಯ್ತಿದ್ವಿ.. ನೀವ್ ನೀವೇ ಕಾರ್ಯಕ್ರಮ ಮಾಡಿದರೇ ನಾವೇನು ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ರು. ಅಲ್ಲಾ ಮಧು ಅಣ್ಣಾ ಏನಿದು ಎಂದು ಸಚಿವರನ್ನ ಪ್ರಶ್ನಿಸಿದ್ರು. 

ಕೊನೆಗೆ ಸನ್ನಿವೇಶವನ್ನು ತಾವೇ ಕೂಲ್ ಮಾಡಿದ ಬೇಳೂರು ಗೋಪಾಲಕೃಷ್ಣರವರು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಅವರಿಗೆ ಹಾರೆ ತೆಗೆದುಕೊಳ್ಳಿ ಎಂದು ಸಚಿವರು ತಿಳಿಸಿದರು. ಅದು ಬೇಡ ಎಂದು ತಮಾಷೆ ಮಾಡಿದ ಅವರು, ಅಲ್ಲಿದ್ದ ಅಸಮಾಧಾನವನ್ನ ಶಮನ ಮಾಡಿ ನಗು ಮೂಡಿಸಿದರು. ಅಲ್ಲದೆ ಐದು ಸಲ ಗುದ್ದಲಿ ಹೊಡೆದು ನಮ್ ಕಡೆ ಹೀಗೆ ಎಂದರು. ಮೂರು ಸಲ ಸರಿಯಾಗಲ್ಲ, ನಮಗೆ ಐದು ಲೆಕ್ಕ ಎಂದರು. ಬಳಿಕ ಕಾರ್ಯಕ್ರಮ ಮುಗಿಯುತ್ತಲೇ ಸಚಿವರು ಒಂದು ದಿಕ್ಕಿಗೆ ಹೋದರೆ, ಶಾಸಕರು ಇನ್ನೊಂದು ದಿಕ್ಕಿಗೆ ಹೋದರು.