KARNATAKA NEWS/ ONLINE / Malenadu today/ Jun 13, 2023 SHIVAMOGGA NEWS
ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಕಳೆದ 15 ದಿನಗಳಲ್ಲಿ ನಾಲ್ಕಕ್ಕೂ ಹೆಚ್ಚು ಆಕ್ಸಿಡೆಂಟ್ಗಳಾಗಿವೆ. ಇದಕ್ಕೆ ಕಾರಣ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಭೀಕರ ಅಪಘಾತಗಳ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
ಸಂಭವಿಸುತ್ತಿರುವ ಅಪಘಾತಗಳಲ್ಲಿ ಜನರು ಜೀವ ಕಳೆದುಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಭಾನುವಾರ ಸಂಭವಿಸಿದ ಭೀಕರ ಲಾರಿ ಅಪಘಾತದ ದೃಶ್ಯ ಇದೀಗ ಲಭ್ಯವಾಗಿದ್ದು, ಒನ್ ವೇ ನಲ್ಲಿ ಸಂಭವಿಸಿರುತ್ತಿವ ಅಪಘಾತಕ್ಕೆ ಕಾರಣ ಮತ್ತೊಮ್ಮೆ ಧೃಡವಾಗುತ್ತಿದೆ.
ಎರಡು ಲಾರಿಗಳ ನಡುವೆ ಭೀಕರ ಡಿಕ್ಕಿ
ಪಿಇಎಸ್ ಕಾಲೇಜು ಮುಂಭಾಗ ಎರಡು ಲಾರಿಗಳು ಪರಸ್ಪರ ಡಿಕ್ಕಿಯಾಗಿವೆ. ಸಾಗರ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಒಂದು ಕಡೆಯ ರಸ್ತೆಯನ್ನು ಅಗೆಯಲಾಗಿದ್ದು, ಔಟರ್ ರಿಂಗ್ ರೋಡ್ ಲಿಂಕ್ ಜೋಡಿಸಲಾಗುತ್ತಿದೆ. ಹೀಗಾಗಿ ಒಂದು ಕಡೆಯಲ್ಲಿ ಮಾತ್ರ ಶ್ರೀರಾಂಪುರದ ಸಮೀಪ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ವೇಗವಾಗಿ ಚಲಿಸುವ ವಾಹನಗಳು ಓನ್ ವೇನಲ್ಲಿಯು ವೇಗವಾಗಿಯೇ ಚಲಿಸುತ್ತಿರುವುದು ಅಪಘಾತಕ್ಕೆ ಕಾರಣವಾಗಿದೆ.
ಸಾಗರ-ಶಿವಮೊಗ್ಗ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತ! ಈ ರಸ್ತೆಯಲ್ಲಿ ಓಡಾಡುವ ಇರಲಿ ಜಾಗ್ರತೆ ! #shivamogga pic.twitter.com/DGo46VaIxD
— malenadutoday.com (@CMalenadutoday) June 13, 2023
ಮಾರ್ಗದಲ್ಲಿಯೇ ಗೊಂದಲ
ಭಾನುವಾರವೂ ಸಹ ಶಿವಮೊಗ್ಗ ಕಡೆಗೆ ಬರುತ್ತಿದ್ದ ಲಾರಿಗೆ, ಸಾಗರ ಕಡೆಗೆ ಬರುತ್ತಿದ್ದ ಟಿಪ್ಪರ್ ಡಿಕ್ಕಿಯಾಗಿದೆ. ಗುದ್ದಿದ ರಭಸಕ್ಕೆ ಟಿಪ್ಪರ್ ನುಜ್ಜುಗುಜ್ಜಾಗಿದೆ. ಸಾಗರ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನಿಗೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಅಂದಾಜಿಗೆ ಸಿಗಲಿಲ್ಲ. ಇನ್ನೊಂದೆಡೆ ಶಿವಮೊಗ್ಗದ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಸ್ಪೀಡಾಗಿದ್ದ ಹಿನ್ನೆಲೆಯಲ್ಲಿ ಆತ ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ಧಾನೆ. ಘಟನೆಯ ದೃಶ್ಯ ಸ್ಥಳೀಯ ನಿವಾಸಿಯೊಬ್ಬರು ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಲಭ್ಯವಾಗಿದೆ.

15 ನಾಲ್ಕಕ್ಕೂ ಹೆಚ್ಚು ಅಪಘಾತಗಳು!
ಇನ್ನೂ ಈ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಿರುವುದು ಇದೇ ಮೊದಲೇನಲ್ಲ. ಮೇಲಾಗಿ ಕಳೆದ 15 ದಿನಗಳಲ್ಲಿ ನಾಲ್ಕಕ್ಕೂ ಹೆಚ್ಚು ಆಕ್ಸಿಡೆಂಟ್ಗಳು ಸಂಭವಿಸಿದೆ.
ಪಾದಚಾರಿ ಮೇಲೆ ಎರಗಿದ ಬಸ್
ಇತ್ತೀಚೆಗೆ ಇಲ್ಲಿ ನಡೆದುಕೊಂಡು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಜೈ ಪ್ರಕಾಶ್ ಎಂಬವರ ಮೇಲೆ ಬಸ್ಸು ಡಿಕ್ಕಿ ಹೊಡೆದು ಅಪಘಾತವಾಗಿತ್ತು ಈ ಘಟನೆಯಲ್ಲಿ ಪಾದಚಾರಿ ಸಾವನ್ನಪ್ಪಿದ್ದರು.
ರಾಂಗ್ ಸೈಡ್ನಲ್ಲಿ ಡಿಕ್ಕಿ
ಪಾದಚಾರಿಯ ಮೇಲೆ ಬಸ್ ಎರಗಿದ ಘಟನೆಗೂ ಮೊದಲು ಶ್ರೀರಾಮಪುರದ ಬಳಿಯಲ್ಲಿ ಸಾಗರ ಕಡೆಯಿಂದ ಬರುತ್ತಿದ್ದ ಬೈಕ್ ವೊಂದು, ಒನ್ ವೇನಲ್ಲಿ ನೇರವಾಗಿ ಇನ್ನೋವ್ಹಾ ಕಾರಿಗೆ ಡಿಕ್ಕಿಯಾಗಿತ್ತು. ಈ ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಕಳೆದ ಜೂನ್ 5 ರಂದು ಈ ಘಟನೆ ಸಂಭವಿಸಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ
ರಾಂಗ್ ಸೈಡ್ನಲ್ಲಿ ವಾಹನ ಓಡಿಸಬೇಡಿ! ಭೀಕರ ಆಕ್ಸಿಡೆಂಟ್ನ ಸಾಕ್ಷಿ ತೋರಿಸ್ತಿದೆ ನೋಡಿ ಸಿಸಿಟಿವಿ

ಈ ಘಟನೆಗಳು ಕೇವಲ ಉದಾಹರಣೆಗಳಾಗಿವೆ, ಪ್ರತಿನಿತ್ಯ ಇಲ್ಲಿ ಸಣ್ಣಪುಟ್ಟ ಆಕ್ಸಿಡೆಂಟ್ಗಳು ಸಂಭವಿಸುತ್ತಲೇ ಇದೆ. ದ್ವಿಮುಖ ಸಂಚಾರವನ್ನು ಬಂದ್ ಮಾಡಿ , ಒಂದೆ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಸೂಚಕ ಫಲಕಗಳು, ರಿಪ್ಲೆಕ್ಟರ್ಗಳು ಇಲ್ಲಿ ಕಾಣುತ್ತಿಲ್ಲ. ಮೇಲಾಗಿ ಸಮರ್ಪಕ ಬ್ಯಾರಿಕೇಡ್ಗಳನ್ನ ಅಳವಡಿಸಲಾಗಿಲ್ಲ. ಸ್ಪೀಡ್ ಲಿಮಿಟ್ ಇಲ್ಲದೇ ಇರುವುದು ಸಹ ಅಪಘಾತಗಳಿಗೆ ಕಾರಣವಾಗುತ್ತಿದೆ. ಒಟ್ಟಾರೆ ಕಾಮಗಾರಿ ನಡೆಯುತ್ತಿರುವ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳು ಜನರ ಜೀವ ತೆಗೆಯುತ್ತಿವೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ರಾಂಗ್ ಸೈಡ್ನಲ್ಲಿ ವಾಹನ ಓಡಿಸಬೇಡಿ! ಭೀಕರ ಆಕ್ಸಿಡೆಂಟ್ನ ಸಾಕ್ಷಿ ತೋರಿಸ್ತಿದೆ ನೋಡಿ ಸಿಸಿಟಿವಿ #shivamogga pic.twitter.com/ZDQdCqPcOt
— malenadutoday.com (@CMalenadutoday) June 8, 2023
