bande saheb movie :  ನಾ ಕಂಡಂತೆ ಬಂಡೇ ಸಾಹೇಬ್ ಚಲನಚಿತ್ರ 

prathapa thirthahalli
Prathapa thirthahalli - content producer

bande saheb movie : ಈ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ ,,, ಗುಲ್ಬರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಒಬ್ಬ ದೇಶದ್ರೊಯಿಯನ್ನು ಮಟ್ಟ ಹಾಕುವ ಕಾರ್ಯದಲ್ಲಿ ತನ್ನ ಪ್ರಾಣವನ್ನೇ ದೇಶಕ್ಕಾಗಿ ಬಲಿಕೊಟ್ಟ ಒಬ್ಬ ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಶ್ರೀ ಮಲ್ಲಿಕಾರ್ಜುನ ಬಂಡೆ ಯವರ ನೈಜ ಜೀವನಾಧಾರಿತ ಕಥೆ, ಅಧಿಕಾರಿಯ ಜೀವನದಲ್ಲಿ ನಡೆದಂತಹ ಹಲವಾರು ಘಟನೆಗಳನ್ನು ,, ಹಾಗೂ ಸಣ್ಣ ವಯಸಿನಲ್ಲಿ ತಾಯಿಯನ್ನು ಕಳೆದುಕೊಂಡು ತಂದೆ ಆಶ್ರಯದಲ್ಲಿ ಬೆಳೆದು ಪೊಲೀಸ್ ಆಗಲೇಬೇಕೆಂದು ಪಣತೊಟ್ಟು ತನ್ನ ಗುರಿಯನ್ನು ಸಾದಿಸಿದ ಘಟನೆಯನ್ನು ಸಹಜವಾಗಿ ಮನಮುಟ್ಟುವಂತೆ ತೋರಿಸಿದ್ದಾರೆ ,,, 

bande saheb movie : ಕುಟುಂಬ ಸಮೇತರಾಗಿ ನೋಡಬಹುದಾದ ಸಿನಿಮಾ 

ಈ ಚಿತ್ರದಲ್ಲಿ ನಾಯಕ ನಟರಾದ ಸಂತೋಷ್ ರಾಮ್ ಅವರು ತುಂಬಾ ಸಹಜವಾಗಿ ,,ಅದ್ಭುತವಾಗಿ ನಟಿಸಿ ಆ ದಕ್ಷ ಅಧಿಕಾರಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ,, ಖಳನಾಯಕ ಕಾಲಾಪತ್ತರ್ ಹಾಗು ಮುನ್ನ  ಪಾತ್ರದಲ್ಲಿ ನಟಿಸಿದ ಪಾತ್ರದಾರಿಯರು ಸಹ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ತಮ್ಮಗಳ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ನಿರ್ದೇಶಕ ಚಿನ್ಮಯಿ ರಾಮ್ ಹಾಗು ನಿರ್ಮಪಕ ದೊಡ್ಡಮನಿ ಯವರು ಸಹ ಈ ಚಿತ್ರ ನೈಜವಾಗಿ ಬರಲು ತುಂಬಾ ಶ್ರಮ ಪಟ್ಟಿದ್ದಾರೆ , ಎರಡು ಹಾಡು ಕೇಳಲು ಇಂಪಾಗಿದೆ , ಕುಟುಂಬಸಮೇತರಾಗಿ ಎಲ್ಲರೂ ಈ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.

ಶಿವಮೊಗ್ಗದ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಈ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಯಿಸಿ. 

bande saheb movie
bande saheb movie : ಬರಹ ಸುರೇಶ್, ಎಲ್, ಉದ್ಯಮಿ ಶಿವಮೊಗ್ಗ

 

 

                                                                                                                                                                                                                                     

 

Share This Article