ಕಡಿಮೆ ರೇಟ್​ನಲ್ಲಿ ಸಿಗುತ್ತೆ ಟು ವೀಲ್ಹರ್​ ವೆಹಿಕಲ್! ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ 40 ವಾಹನಗಳ ಹರಾಜ್​!

A date has been fixed for auctioning 40 vehicles at Doddpete Police Station ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ 40 ವಾಹನಗಳ ಹರಾಜು ಮಾಡಲು ದಿನಾಂಕ ನಿಗದಿಪಡಿಸಲಾಗಿದೆ

ಕಡಿಮೆ ರೇಟ್​ನಲ್ಲಿ ಸಿಗುತ್ತೆ ಟು ವೀಲ್ಹರ್​ ವೆಹಿಕಲ್! ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ 40 ವಾಹನಗಳ ಹರಾಜ್​!

KARNATAKA NEWS/ ONLINE / Malenadu today/ Nov 10, 2023 SHIVAMOGGA NEWS

Shivamogga |  ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ಯಲ್ಲಿ ವಾರಸುದಾರರಿಲ್ಲದ 40 ದ್ವಿಚಕ್ರ ವಾಹನಗಳನ್ನು ಅಮಾನತು ಪಡಿಸಿಕೊಂಡಿದ್ದು, ಈ ವಾಹನಗಳ ಹರಾಜು ನವೆಂಬರ್ 15 ರಂದು ನಡೆಯಲಿದೆ. ಈ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ. 

READ : ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ವಿಶೇಷ ಪ್ರಕಟಣೆ! ಏನು? ವಿವರ ಇಲ್ಲಿದೆ !?

ಇದುವರೆಗೂ ವಿವಿಧ ಪ್ರಕರಣಗಳಲ್ಲಿ ಜಪ್ತು ಮಾಡಿರುವ 40 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿಲ್ಲ. ಈ  ಕಾರಣ ಟೂ ವೀಲ್ಹರ್ ವಾಹನಗಳನ್ನು ದೊಡ್ಡಪೇಟೆ ಠಾಣೆ ಮುಂಭಾಗ ನ.15ರಂದು ಬಹಿ ರಂಗ ಹರಾಜು ಮಾಡಲು ತೀರ್ಮಾನಿಸಲಾಗಿದೆ. 

ಶಿವಮೊಗ್ಗ ಎಸ್​ಪಿ ಆದೇಶದ ಮೇರೆಗೆ ಈ ಹರಾಜನ್ನ ನಡೆಸಲಾಗುತ್ತಿದ್ದು, ಆಸಕ್ತ ಸಾರ್ವಜನಿಕರು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ದೊಡ್ಡಪೇಟೆ ಪೊಲೀಸ್ ಠಾಣೆ ನಿರೀಕ್ಷಕರು ತಿಳಿಸಿದ್ದಾರೆ.