ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ಅದು ಇದು ವಿಚಾರದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿರುವ ನಡುಮಧ್ಯೆ ಶಿವಮೊಗ್ಗ ನಗರದಲ್ಲಿಯೇ ಯುವತಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಗ್ಗೆ ಎಫ್ಐಆರ್ ಆಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದ್ದು, ಘಟನೆಯ ಚಕಿತಗೊಳಿಸುತ್ತಿದೆ.
ನಡೆದಿದ್ದೇನು? Attempted Assault

20 ವರ್ಷದ ಯುವತಿ (ವೈಯಕ್ತಿಕ ವಿವರ ಗೌಪ್ಯ) ಸೆಪ್ಟೆಂಬರ್ 8ರಂದು ಬೆಳಗಿನ ಜಾವ 4:20ರ ಸುಮಾರಿಗೆ ತಮ್ಮ ತಾಯಿ ಮತ್ತು ತಮ್ಮನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಬೈಕ್ನಲ್ಲಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಯುವತಿ ಹೊರಟಾಗ, ಅಲ್ಲಿ ಅನುಮಾನಸ್ಪದವಾಗಿ ನಿಂತಿದ್ದ ಇಬ್ಬರು ಯುವಕರು ಯುವತಿಯನ್ನು ಫಾಲೋ ಮಾಡಿದ್ದಾರೆ.ಈ ನಡುವೆ ಸರ್ಕೀಟ್ ಹೌಸ್ ಬಳಿಯ ರಸ್ತೆಯಲ್ಲಿ ಅಡ್ಡಗಟ್ಟಿದ ಯುವಕ, ಯುವತಿಯನ್ನು ಬೈಕ್ನಿಂದ ಬೀಳಿಸಿ ಆಕೆಯ ಮೈಮೇಲೆ ಕೈ ಹಾಕಿದ್ದಾನೆ. ಘಟನೆ ಬೆನ್ನಲ್ಲೆ ಹೆದರಿದ ಯುವತಿ ಮೊಬೈಲ್ ಹಾಗೂ ಬೈಕ್ ಬಿಟ್ಟು ಅಲ್ಲಿಂದ ಓಡಿದ್ದಾಳೆ. ಇದೇ ವೇಳೆ ಅಲ್ಲಿಗೆ ಇನ್ನೊಂದು ವಾಹನ ಬಂದಿದ್ದರಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ.

ಸದ್ಯ ಈ ಘಟನೆ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಯಾವ ಮಟ್ಟದಲ್ಲಿ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
Attempted Assault in Shivamogga Woman Files Complaint
Shivamogga crime news, attempted assault, woman attacked Shivamogga, police complaint, safety for women in Shivamogga, Shivamogga Vinobanagar police station., ಶಿವಮೊಗ್ಗ ಅತ್ಯಾಚಾರ ಯತ್ನ, ಶಿವಮೊಗ್ಗ ಕ್ರೈಂ, ಮಹಿಳೆಯರ ಮೇಲಿನ ದೌರ್ಜನ್ಯ, ವಿನೋಬನಗರ, ಪೊಲೀಸ್ ದೂರು.
