ಸ್ವಲ್ಪ ಸರಿ ಎಂದಿದ್ದಕ್ಕೇನೆ ಶುರುವಾಯ್ತು ಕಿರಿಕ್! ಬಾರ್​ ಕೌಂಟರ್​ನಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ

ajjimane ganesh

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಸ್ವಲ್ಪ ಸರಿ ಎಂದ ವಿಚಾರಕ್ಕೆ ಜಗಳ ಜೋರಾಗಿಗೆ ವ್ಯಕ್ತಿಯೊಬ್ಬನಿಗೆ ಮನಸ್ಸೋ ಇಚ್ಛೆ ಥಳಿಸಿದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಸೆಪ್ಟೆಂಬರ್​ 25 ರಂದು ನಡೆದ ಘಟನೆ ಸಂಬಂಧ ದಾಖಲಾಗಿರುವ ಎಫ್​ಐಆರ್​ನಲ್ಲಿ : THE BHARATIYA NYAYA SANHITA (BNS), 2023 (U/s-115(2),126(2),352,351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ. 

ನಡೆದಿದ್ದೇನು ಎನ್ನುವುದನ್ನ ಗಮನಿಸುವುದಾದರೆ, ಇಲ್ಲಿನ ಬಾರ್ ವೊಂದರಲ್ಲಿ ಹಣದ ವ್ಯವಹಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೊಬ್ಬರು ಕ್ಯಾಶಿಯರ್ ಬಳಿ ಮಾತನಾಡುವ ಸಲುವಾಗಿ ಕ್ಯಾಶ್ ಕೌಂಟರ್​ನ ಒಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿ ನಿಂತಿದ್ದ ಯುವಕನಿಗೆ ‘ಸ್ವಲ್ಪ ಸರಿ’ ಎಂದು ಹೇಳಿ, ಒಳಗೆ ಹೋಗಲು ಪ್ರಯತ್ನಿಸಿದ್ದಾರೆ. ಇಷ್ಟೆ ವಿಚಾರಕ್ಕೆ  ನನಗೆ ಸರಿ ಎಂದು ಹೇಳುತ್ತೀಯಾ? ಎಂದು ಜಗಳ ತೆಗೆದು ಬಿಯರ್​ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಂತ್ರಸ್ತರು ಕಾರ್ಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆದು ಅಲ್ಲಿಂದ ಸಾಗರ ಆಸ್ಪತ್ರೆಗೆ ಶಿಫ್ಟ್ ಆಗಿ ಅಲ್ಲಿ ಟ್ರೀಓಟ್ಮೆಂಟ್​ ಪಡೆದಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. 

- Advertisement -

Attack in Bar Kargal sagara3

Details of assault case in Kargal, What happened near Shanthi Bar Kargal, File a complaint in Kargal, Where to get treatment for assault injuries in Sagar, Sagar Government Hospital, MalenaduToday News Kargal, ಕಾರ್ಗಲ್, ಶಾಂತಿ ಬಾರ್, ಹಲ್ಲೆ ಪ್ರಕರಣ, ದೂರು ದಾಖಲು, ವಿನೋದ, ಹಿಂಸಾಚಾರ, ಪೊಲೀಸ್ ಪ್ರಕರಣ, ಮಾರಣಾಂತಿಕ ಹಲ್ಲೆ, ಗಾಯಗಳು, ಸಾಗರ ಆಸ್ಪತ್ರೆ

 ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *