Today special /ಇಡೀ ಅಮೆರಿಕಾ ಒಮ್ಮೆ ಏಷ್ಯಾದ ರಾಕ್ಷಸ ಕೀಟಕ್ಕೆ ಬೆಚ್ಚಿಬಿದ್ದಿತ್ತು. ಅದನ್ನ ಮೊದಲ ಸಲ ಹಿಡಿದು, ಅದರ ಅಸ್ತಿತ್ವವನ್ನು ಕಂಡು ಅವರು ಅಕ್ಷರಸಹ ಬೆದರಿದ್ದರು. ಯಾಕೆಂದರೆ ಉಗುರಿನಷ್ಟಿರೋ ಆ ಕ್ರಿಮಿ ಮನುಷ್ಯನನ್ನೆ ಕೊಂದು ಕೆಡವಬಲ್ಲ ಶಕ್ತಿ ಹೊಂದಿದ್ದವು.ಆದರೆ, ಸಾವಿರಾರು ಕಿಲೋಮೀಟರ್ ದೂರದಲ್ಲಿ ಕಂಡು ಬಂದಿದ್ದ ಎಷ್ಯನ್ ಜೈಂಟ್ ಹಾರ್ನೆಟ್ (Asian Giant Hornet)ಗಿಂತಲು ಕ್ರೂರ ಕೀಟವೊಂದು ಮಲೆನಾಡಿನ ಮಂದಿಗೆ ಒಂಥರಾ ನೆರೆ ಮನೆಯ ಅತಿಥಿ.ಇದರ ವಿಷಕಾರಿ ಮುಳ್ಳಿಗೆ ಮಲೆನಾಡಲ್ಲಿ ವರ್ಷಕ್ಕೆ ಒಬ್ಬರಿಬ್ಬರು ಸಾವನ್ನಪ್ಪುವ ವರದಿಯಾಗುತ್ತದೆ.
Today special / ನಾಗರಹಾವಿಗಿಂತಲೂ ವಿಷಕಾರಿ ಕೀಟ
ಸಾಮಾನ್ಯವಾಗಿ ಜೇನುನೊಣಗಳು ಕಚ್ಚಿದರೆ ಉರಿಯುತ್ತದೆ. ಬಾವು ಬರುತ್ತದೆ. ಕಣಜ ಕಚ್ಚಿ ಬೊಬ್ಬೆ ಹೊಡೆಸುತ್ತದೆ. ಆದರೆ ಇವರೆಡಕ್ಕಿಂತಲೂ ಹುಲಿ ಕಡಜಲು ಮೋಸ್ಟ್ ಡೆಂಜರಸ್.ಇದರ ವಿಷ ನಾಗರಹಾವಿನ ವಿಷಕ್ಕಿಂತಲೂ ಪವರ್ ಫುಲ್ ಅನ್ನುವ ಮಾತು ಮಲೆನಾಡಿನಲ್ಲಿ ಮನೆಮಾತಾಗಿದೆ.ನೆಲ ತಂಪಿರುವ ಜಾಗದಲ್ಲಿ ಗೂಡು ಕಟ್ಟುವ ಈ ಕೀಟ ಕಾಡುಗಳಲ್ಲಿ ಹೆಚ್ಚಾಗಿರುತ್ತವೆ.ಮನೆ ತೋಟ ನೀರಿನ ಟ್ಯಾಂಕ್ಗಳ ಮೇಲೂ ತಮ್ಮ ಠಿಕಾಣಿಯನ್ನು ಬಂದೋಬಸ್ತ್ ಮಾಡಿರುತ್ತವೆ.ಗೂಡಿನ ಮೇಲೆ ಬೀಳುವ ಇಬ್ಬನಿಯನ್ನು ಸಹ ಹೀರಿ ಗುಳ್ಳೆಯಂತೆ ಬಿಡಬಲ್ಲ ಈ ಕೀಟ ನೋಡುಗರಿಗೆ ಸುಂದರವಾಗೇನೋ ಕಾಣುತ್ತವೆ. ಆದರೆ ಸಹವಾಸ ಮಾತ್ರ ಭೀಕರ. ಭಯಂಕರ

Today special / ಗೂಡಿಗೆ ತೊಂದರೆಯಾದರೆ ಉಗ್ರ ಸ್ವರೂಪ 24 ಗಂಟೆ ಗ್ರಹಬಂಧನ
ಜೇನುನೊಣಗಳು ತೋರುವಂತಹ ಮೃದುಧೋರಣೆಯನ್ನು ಈ ಕೀಟಗಳು ತೋರಲಾರವು. ತನ್ನ ಗೂಡಿಗೆ ಅಪಾಯ ಅಂತಾ ಗೊತ್ತಾಗುತ್ತಲೇ ಎದುರಾಳಿ ಯಾರೆ ಇದ್ದರೂ ದಾಳಿಗಿಳಿಯುತ್ತವೆ.ಗೂಡಿಗೆ ಯಾರಾದ್ರೂ ತೊಂದರೆ ಕೊಟ್ಟರೆ 24 ಗಂಟೆ ಮನೆಯ ಕಿಟಕಿ ಬಾಗಿಲು ತೆರೆಯುವ ಹಾಗಿಲ್ಲ.ಈ ಸಂದರ್ಭದಲ್ಲಿ ಮನುಷ್ಯನಾದರೂ ಸರಿಯೇ, ದನ, ಕರು, ಕೋತಿ, ನಾಯಿ ಸೇರಿದಂತೆ ಕಾಡುಪ್ರಾಣಿಗಳನ್ನೇ ಬೇಟೆಯಾಡುತ್ತವೆ.ಹಾಗಾಗಿ ಈ ದುಷ್ಟ ಕೀಟವನ್ನು ಕಂಡರೆ ದೂರವಿರುವ ಪ್ರವೃತ್ತಿ ಮಲೆನಾಡಿನಲ್ಲಿದೆ.ಈ ಹುಲಿ ಕಡಜಲು ದಾಳಿಗೆ ಹಲವು ಸಾವು ನೋವುಗಳಾಗಿವೆ.ಕಳೆದ ಕೆಲವು ವರ್ಷಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಈ ಹುಳ ಬಲಿಪಡೆದಿತ್ತು.
ಹುಲಿ ಕಡಜಲವೆಂದು ಯಾಕೆ ಕರೆಯತ್ತಾರೆ ಗೊತ್ತಾ
ಶಿವಮೊಗ್ಗದ ತೀರ್ಥಹಳ್ಳಿ ಭಾಗ ಸೇರಿದಂತೆ ಮಲೆನಾಡಿನ ಕಾಡುಮನೆಯ ಪ್ರದೇಶಗಳಲ್ಲಿ ಈ ಹುಲಿ ಕಡಜಲ ಒಂಥರಾ ನೆರೆಮನೆಯ ಅತಿಥಿಯಿದ್ದಂತೆ.ಇದರ ಮುಖ ಒಂದು ರೀತಿಯಲ್ಲಿ ಹುಲಿಯಂತೆ ಕಾಣುತ್ತದೆ. ಈ ಕಾರಣಕ್ಕೆ ಇದನ್ನು ಹುಲಿಕಡಜಲವೆಂದು ಕರೆಯುತ್ತಾರೆ.ವಿಶೇಷ ಅಂದರೆ, ಇವುಗಳು ಗೂಡುಗಳನ್ನು ಎಲ್ಲರೂ ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ.ಹಾಗೊಂದು ವೇಳೆ ಸಾಹಸ ಮಾಡಲು ಹೋದರೆ ಜೀವಕೆ ಆಪತ್ತು ಬರುವಂತಹ ಅಪಾಯವಿರುತ್ತದೆ. ಹಾಗೆಂದು ವಿಷಕಂಠ ಹುಳುವನ್ನು ಮಗ್ಗಲಲ್ಲಿ ಇಟ್ಟುಕೊಳ್ಳಲು ಸಹ ಸಾಧ್ಯವಿರಲ್ಲ.

ಹುಲಿ ಕಡಜಲವೆಂದು ಯಾಕೆ ಕರೆಯತ್ತಾರೆ ಗೊತ್ತಾ
ಶಿವಮೊಗ್ಗದ ತೀರ್ಥಹಳ್ಳಿ ಭಾಗ ಸೇರಿದಂತೆ ಮಲೆನಾಡಿನ ಕಾಡುಮನೆಯ ಪ್ರದೇಶಗಳಲ್ಲಿ ಈ ಹುಲಿ ಕಡಜಲ ಒಂಥರಾ ನೆರೆಮನೆಯ ಅತಿಥಿಯಿದ್ದಂತೆ.ಇದರ ಮುಖ ಒಂದು ರೀತಿಯಲ್ಲಿ ಹುಲಿಯಂತೆ ಕಾಣುತ್ತದೆ. ಈ ಕಾರಣಕ್ಕೆ ಇದನ್ನು ಹುಲಿಕಡಜಲವೆಂದು ಕರೆಯುತ್ತಾರೆ.ವಿಶೇಷ ಅಂದರೆ, ಇವುಗಳು ಗೂಡುಗಳನ್ನು ಎಲ್ಲರೂ ಸುಲಭವಾಗಿ ತೆಗೆದು ಹಾಕಲು ಸಾಧ್ಯವಿಲ್ಲ.ಹಾಗೊಂದು ವೇಳೆ ಸಾಹಸ ಮಾಡಲು ಹೋದರೆ ಜೀವಕೆ ಆಪತ್ತು ಬರುವಂತಹ ಅಪಾಯವಿರುತ್ತದೆ. ಹಾಗೆಂದು ವಿಷಕಂಠ ಹುಳುವನ್ನು ಮಗ್ಗಲಲ್ಲಿ ಇಟ್ಟುಕೊಳ್ಳಲು ಸಹ ಸಾಧ್ಯವಿರಲ್ಲ.

ಜನಸಂದಣಿಯಲ್ಲದ ತೇವಾಂಶ ಪ್ರದೇಶದಲ್ಲಿ ಹೆಚ್ಚಾಗಿ ಹುಳುಗಳು ಗೂಡು ಕಟ್ಟಿ ಜೀವಿಸುತ್ತವೆ.ಇವುಗಳು ಗೂಡು ಕಟ್ಟುವುದೇ ವಿಶೇಷ.ಮಣ್ಣು, ಮರದ ಹೊಟ್ಟು, ಅಂಟನ್ನು ಬಳಸಿ ಗೂಡು ಕಟ್ಟುವುದರಿಂದ ಹೆಚ್ಚು ಗಟ್ಟಿಯಾಗಿರುತ್ತದೆ. ಮನೆಯಲ್ಲಿ ಕಡಜದ ಹೂಳು ಗೂಡುಕಟ್ಟಿದರೆ ಅದೃಷ್ಟದ ಸಂಕೇತ ಎಂಬ ನಂಬಿಕೆಯಿದೆ.ಆದರೆ ಕಡಜ ಹುಳು ಎಲ್ಲಂದರಲ್ಲಿ ಗೂಡು ಕಟ್ಟುವುದಿಲ್ಲ.ಕಣಜದ ಹುಳುಗಳ ಮೊಟ್ಟೆಗಳು 10-15 ದಿನ ಜೀವಿಸುತ್ತವೆ.ಮರಿಗಳು ಒಂದುವರೆ ತಿಂಗಳಿನವರೆಗೆ ಜೀವಿಸುತ್ತವೆ.ಹುಳುಗಳು ಪ್ರೌಢಾವಸ್ತೆಯಲ್ಲಿ 3 ರಿಂದ 4 ತಿಂಗಳಿಗೂ ಹೆಚ್ಚಿನ ಕಾಲ ಜೀವಿಸುತ್ತದೆ.
ಗೂಡುಗಳನ್ನು ತೆಗೆಯುವವರು ಮಲೆನಾಡಲ್ಲಿಯೇ ಇದ್ದಾರೆ
ಅದೃಷ್ಟವಶಾತ್ ಮಲೆನಾಡಿನಲ್ಲಿ ಇವುಗಳ ಗೂಡುಗಳನ್ನು ತೆಗೆಯುವ ವಿಧಾನ ಬಲ್ಲವರು ಇದ್ದಾರೆ. ಹಳಬರು ಹೇಳಿಕೊಟ್ಟ ನಾಜೂಕಿನ ನ್ಯಾಕ್ನಲ್ಲಿ ಕಡಜಲದ ಗೂಡನ್ನ ತೆಗೆಯಬಲ್ಲ ಅನುಭವಸ್ಥರು ಇದ್ದಾರೆ.ನೆರೆಹೊರೆಯಲ್ಲಿ ವಿಷಕಾರಿ ಕೀಟದ ವಾಸ್ತವ್ಯ ಕಂಡುಬಂದರೆ, ಅನುಭವಸ್ಥರ ಸಹಾಯ ಪಡೆದು ಮುಂದುವರಿಯುವುದು ಉತ್ತಮ.