ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13 2025: ಕಳೆದ ಮೇ ತಿಂಗಳಿನಲ್ಲಿ ಅರಣ್ಯ ಇಲಾಖೆಯಲ್ಲಿ ದಾಖಲಾಗಿದ್ದ ಜಿಂಕೆ ಬೇಟೆ ಪ್ರಕರಣದ ಸಂಬಂಧ ಇದೀಗ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆಯ ಅಡಿಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ. ಆನವಟ್ಟಿ ವಲಯ ಅರಣ್ಯ ಅಧಿಕಾರಿ ನೀಡಿದ ದೂರಿನನ್ವಯ ಈ ಕೇಸ್ ದಾಖಲಾಗಿದ್ದು, ಒಂಟಿ ಕೊಳವೆ ಬಂದೂಕು ಬಳಸಿ ಬೇಟೆಯಾಡಿದ್ದರ ಪ್ರಕರಣ ಇದಲಾಗಿದೆ.
ಪ್ರಕರಣದ ವಿವರ: Arms Act Case
ಆನವಟ್ಟಿಯಲ್ಲಿ ಹಿರೇ ಇಡಗೋಡಿನ ಇಬ್ಬರು ನಿವಾಸಿಗಳ ವಿರುದ್ಧ ಕಳೆದ ಮೆ ತಿಂಗಳಿನಲ್ಲಿ ಅರಣ್ಯ ಇಲಾಖೆಯು ಅಕ್ರಮ ಬೇಟೆ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಇಲ್ಲಿನ ಇಬ್ಬರು ನಿವಾಸಿಗಳು ಜಿಂಕೆಯನ್ನ ಬೇಟೆಯಾಡಿ ಅದನ್ನು ಬೇಯಿಸುತ್ತಿದ್ದ ವೇಳೆ ರೇಡ್ ಮಾಡಿದ್ದ ಅಧಿಕಾರಿಗಳು ಇಬ್ಬರನ್ನೂ ಅರೆಸ್ಟ್ ಮಾಡಿ ಕೇಸ್ ದಾಖಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಆನವಟ್ಟಿ ವಲಯದಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಆರೋಪಿಗಳು ಒಂಟಿ ಕೊಳವೆಯ ನಾಡ ಬಂದೂಕನ್ನು (Single-barrel Country-made Gun) ಬಳಸಿ ವನ್ಯ ಪ್ರಾಣಿಯನ್ನು ಬೇಟೆಯಾಡಿದ್ದರು. ಹೀಗಾಗಿ ಇಬ್ಬರ ವಿರುದ್ಧ ಇದೀಗ ಶಸ್ತ್ರಾಸ್ತ್ರ ಕಾಯ್ದೆ (Arms Act, 1959) ಅಡಿಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Arms Act 1959 case Shivamogga, Wildlife poaching Soraba Anavatti, Illegal country-made gun seizure, ಶಸ್ತ್ರಾಸ್ತ್ರ ಕಾಯ್ದೆ, Arms Act 1959, ವನ್ಯಜೀವಿ ಬೇಟೆ, ಅಕ್ರಮ ಬಂದೂಕು, ಹಿರೇ ಇಡಗೋಡು, ಸೊರಬ, ಆನವಟ್ಟಿ, ಜೀವನ್ ಈಶ್ವರಪ್ಪ, ನಾಡ ಬಂದೂಕು ಜಪ್ತಿ, Wildlife Poaching, Illegal Gun Possession, Country Made Gun Seizure, Soraba Arms Case,Arms Act Case
