ಶಿವಮೊಗ್ಗ: ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಮರ್ಯಾದೆಗೇಡು ಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ತಕ್ಷಣವೇ ‘ಮರ್ಯಾದೆಗೇಡು ಹತ್ಯೆ ವಿರೋಧಿ ಕಾಯ್ದೆ’ಯನ್ನು ಜಾರಿಗೆ ತರಬೇಕು ಎಂದು ಪತ್ರಕರ್ತ ರವಿಕುಮಾರ್ ಆಗ್ರಹಿಸಿದರು.

ಶಿವಮೊಗ್ಗ : ಮನೆಯಂಗಳದಲ್ಲಿ ನಿಲ್ಲಿಸಿದ್ದ 18 ಲಕ್ಷದ ಎಕ್ಸ್‌ಯುವಿ 700 ನಾಪತ್ತೆ!
ನಗರದ ಪತ್ರಿಕಾ ಭವನದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 20ಕ್ಕೂ ಹೆಚ್ಚು ಮರ್ಯಾದೆಗೇಡು ಹತ್ಯೆಗಳು ನಡೆದಿರುವುದು ಆತಂಕಕಾರಿ ಸಂಗತಿ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮಾನ್ಯ ಪಟೇಲ್ ಎಂಬ ಯುವತಿಯ ಹತ್ಯೆ ಪ್ರಕರಣ ಸಮಾಜ ತಲೆತಗ್ಗಿಸುವಂತಿದೆ. ವೀರಶೈವ ಲಿಂಗಾಯತ ಸಮುದಾಯದ ಯುವತಿ ಪರಿಶಿಷ್ಟ ಜಾತಿಯ ಯುವಕನನ್ನು ವಿವಾಹವಾದಳು ಎಂಬ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಕಾನೂನಿನ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
Anti Honour Killing Act ಆಂದೋಲನಕ್ಕೆ ವ್ಯಾಪಕ ಬೆಂಬಲ
ಮಾನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ನಾವು ಸಮಾನ ಮನಸ್ಕರ ಗೆಳೆಯರ ತಂಡವು ಆಂದೋಲನವನ್ನು ಆರಂಭಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಆಂದೋಲನಕ್ಕೆ ಈಗಾಗಲೇ ಸಾರ್ವಜನಿಕರಿಂದ ಹಾಗೂ ಪತ್ರಕರ್ತರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಂಬಂಧ ಮುಂಬರುವ ಸೋಮವಾರ ಅಥವಾ ಮಂಗಳವಾರದಂದು ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಗುವುದು,” ಎಂದು ರವಿಕುಮಾರ್ ತಿಳಿಸಿದರು.
ಹಾಗೆ ಇದರ ನಡುವೆ ಪೋಕ್ಸೋ ಪಕರಣಕ್ಕೆ ಸಂಬಂಧಿಸಿದ ಗರಿಷ್ಠ ಕಾನೂನನ್ನು ಉಲ್ಲೇಖಿಸಿ ಮಾತನಾಡಿದ ಅವರು. ನಮ್ಮ ದೇಶದಲ್ಲಿ ಪೋಕ್ಸೋ ಪಕರಣಕ್ಕೂ ಸಹ ಗರಿಷ್ಠ 20 ವರ್ಷಗಳ ಶಿಕ್ಷೆ ಇದೆ. ಆದರೂ ಸಹ ಪೋಕ್ಸೋ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಆದ್ದರಿಂದ ಇದಕ್ಕೆ ಅದಕ್ಕಿಂತ ಹೆಚ್ಚಿನ ಮಟ್ಟದ ಶಿಕ್ಷೆ ನೀಡಬೇಕು. ಶಿಕ್ಷೆಯನ್ನು ನೀಡಿದರೆ ಮಾರ್ಯದೆ ಗೇಡು ಹತ್ಯೆ ಪ್ರಕರಣಗಳು ಕಡಿಮೆಯಾಗುತ್ತದೆ ಎಂದಲ್ಲ. ಆದರೆ ಗರಿಷ್ಠ ಶಿಕ್ಷೆಯ ಭಯ ಜನರಲ್ಲಿ ಮೂಡುತ್ತದೆ ಎಂದರು
ಜಾತಿ ವ್ಯವಸ್ಥೆ ಹಾಗೂ ಸಾಮಾಜಿಕ ಭಯಗಳೇ ಮರ್ಯಾದೆ ಹತ್ಯೆಗೆ ಕಾರಣ
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ದೇಶಾದ್ರಿ ಮಾತನಾಡಿ, “ಜೈಲಿಗೆ ಹೋಗುತ್ತೇನೆ ಎಂಬ ಅರಿವಿದ್ದರೂ ಒಬ್ಬ ತಂದೆ ತನ್ನ ಮಗಳನ್ನೇ ಕೊಲ್ಲುತ್ತಾನೆ ಎಂದರೆ ಅದಕ್ಕೆ ಸಮಾಜದ ಕೊಂಕು ಮಾತುಗಳು ಮತ್ತು ಜಾತಿ ವ್ಯವಸ್ಥೆಯೇ ಕಾರಣ. ವಿಭಿನ್ನ ಜಾತಿಯ ಯುವಕನನ್ನು ಮಗಳು ಮದುವೆಯಾದರೆ ಸಮಾಜ ಏನೆನ್ನುತ್ತದೋ ಎಂಬ ಭಯ ಇಂತಹ ಕೃತ್ಯಕ್ಕೆ ಪ್ರೇರೇಪಿಸುತ್ತದೆ. ಪ್ರತಿಯೊಬ್ಬರ ಮನಸ್ಸಿನಿಂದ ಜಾತಿ ಎಂಬ ವಿಷ ದೂರವಾದಾಗ ಮಾತ್ರ ಇಂತಹ ಕೊಲೆಗಳು ನಿಲ್ಲುತ್ತವೆ, ಎಂದರು.
Anti Honour Killing Act in Karnataka
