SHIVAMOGGA AIRPORT ಬಗ್ಗೆ ಇನ್ನೊಂದು ಗುಡ್​ ನ್ಯೂಸ್! ಟಿಕೆಟ್ ಬುಕ್ಕಿಂಗ್ ಆರಂಭಕ್ಕೆ ಕೌಂಟ್​ಡೌನ್​! ಪ್ಲೈಟ್ ಹಾರುವುದಕ್ಕೂ ಮೊದಲೇ ಬಂತು ₹12 ಲಕ್ಷ ಆದಾಯ!

Another good news about SHIVAMOGGA AIRPORT! The countdown to the start of ticket booking! Rs 12 lakh revenue even before flight!

SHIVAMOGGA AIRPORT ಬಗ್ಗೆ ಇನ್ನೊಂದು ಗುಡ್​  ನ್ಯೂಸ್! ಟಿಕೆಟ್ ಬುಕ್ಕಿಂಗ್ ಆರಂಭಕ್ಕೆ ಕೌಂಟ್​ಡೌನ್​!  ಪ್ಲೈಟ್ ಹಾರುವುದಕ್ಕೂ ಮೊದಲೇ ಬಂತು ₹12 ಲಕ್ಷ ಆದಾಯ!

KARNATAKA NEWS/ ONLINE / Malenadu today/ Jul 14, 2023 SHIVAMOGGA NEWS 

ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಇನ್ನೊಂದು ಗುಡ್ ನ್ಯೂಸ್​ ಸಿಕ್ಕಿದೆ. ನಿನ್ನೆಯಷ್ಟೆ ಸಚಿವ ಎಂಬಿ ಪಾಟೀಲ್ ಶಿವಮೊಗ್ಗ ಏರ್​ಪೋರ್ಟ್ ವಿಚಾರವಾಗಿ ಮಾತನಾಡಿದ್ದು ಜುಲೈ 20 ರೊಳಗೆ ಏರ್​ಪೋರ್ಟ್​ನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು ಎಂದಿದ್ದರು. ಇದರ ಬೆನ್ನಲ್ಲೆ ವಿಮಾನ ಹಾರಾ ಸಂಸ್ಥೆ ಇಂಡಿಗೋ ಸಂಸ್ಥೆಯು ಇದೇ ಜುಲೈ 20 ವಿಮಾನದ ಟಿಕೆಟ್​ ಬುಕ್ಕಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಧ್ಯಮವೊಂದಕ್ಕೆ ತಿಳಿಸಿದೆ. ಹುಬ್ಬಳ್ಳಿ ವಲಯದ ಅಧಿಕಾರಿಗಳು ಈ ಬಗ್ಗೆ ತಿಳಿಸಿದ್ದು,  ಮೇಕ್‌ ಮೈ ಟ್ರಿಪ್ ಹಾಗೂ ಇಂಡಿಗೊ ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.goindigo.in ಮೂಲಕ ಟಿಕೆಟ್ ಬುಕ್ಕಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ಧಾರೆ. 

ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ ಮತ್ತು ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್

ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದ್ದು, ಇದಕ್ಕೆ ಮುಂಚಿತವಾಗಿ ಜುಲೈ 20ರೊಳಗೆ ಬೇಕಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ ಗುರುವಾರ ಹೇಳಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಂಬುಲೆನ್ಸ್ ಮತ್ತು ಇತರೆ ಅಗತ್ಯ ವಾಹನಗಳನ್ನು ನಿಯೋಜಿಸುವ ಕೆಲಸ ಆಗಬೇಕಾಗಿದೆ. ಕಾಫಿ ಕೆಫೆ ಆರಂಭಿಸುವ ಸಂಬಂಧದ ಕೆಲಸವೂ ಆಗಬೇಕಿದೆ. ಜೊತೆಗೆ, ಕೆಲವು ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿ ನೇಮಕ ನಡೆಯಬೇಕಿದೆ. ಇವೆಲ್ಲವನ್ನೂ ಜುಲೈ 20ರ ಹೊತ್ತಿಗೆ ಪೂರೈಸಿ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗುವುದು ಎಂದು ವಿವರಿಸಿದರು.

ರಾಜ್ಯದಿಂದಲೇ ಮೊದಲ ವಿಮಾನ ನಿಲ್ದಾಣ ನಿರ್ವಹಣೆ

ಕೇಂದ್ರ ನಾಗರಿಕ ವಿಮಾನ ನಿರ್ದೇಶನಾಲಯವು ಇಲ್ಲಿನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಎಸ್ಐಐಡಿಸಿ) ವಹಿಸಿದೆ. ಇದರೊಂದಿಗೆ ಶಿವಮೊಗ್ಗ ನಿಲ್ದಾಣವು ರಾಜ್ಯ ಸರ್ಕಾರದ ಸಂಸ್ಥೆಯ ವತಿಯಿಂದ ನಡೆಯಲಿರುವ ಕರ್ನಾಟಕದ ಮೊದಲನೇ ವಿಮಾನ ನಿಲ್ದಾಣವಾಗಲಿದೆ ಎಂದು ಪಾಟೀಲ ಹೇಳಿದರು.

12 ಲಕ್ಷ ರೂಪಾಯಿ ಆದಾಯ

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ 20 ವಿಮಾನಗಳು ಬಂದಿಳಿದಿವೆ. ಇದರಿಂದಾಗಿ 12 ಲಕ್ಷ ರೂ. ಆದಾಯ ಬಂದಿದೆ ಎಂದರು.

ಆ.11ರಂದು ನಿಲ್ದಾಣ ಕಾರ್ಯಾರಂಭಗೊಳಲಿದ್ದು, ಅಂದು ಮೊದಲ ವಿಮಾನ‌ ಹಾರಾಟ ನಡೆಸಲಿದೆ. ಈ ಐತಿಹಾಸಿಕ ಸನ್ನಿವೇಶಕ್ಕೆ ಸಾಕ್ಷಿಯಾಗಲು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಜನಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಯೋಜನೆಯಂತೆ ನಡೆದರೆ ಆ.11ರಂದು ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗ ನಿಲ್ದಾಣದಲ್ಲಿ ಇಳಿಯಲಿದೆ ಎಂದರು.

ಅಂಗೈನಲ್ಲಿ ಕೂದಲು ಯಾಕೆ ಇರೋದಿಲ್ಲ! ಡಿಸಿಎಂ ಹೇಳಿದ ಎಸ್​ಎಂಕೃಷ್ಣ ನುಡಿದ ಕಥೆ!

ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಅಧಿವೇಶನ 2023  ದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೇಲಾಗಿ ಈ ಚರ್ಚೆಗಳ ನಡುವೆ ನಾಯಕರು ಆಡುತ್ತಿರುವ ಮಾತುಗಳು , ಹೇಳುತ್ತಿರುವ ಹಳೆಯ ಕಥೆಗಳು ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ದಿನದ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​, ಪ್ರತಿಪಕ್ಷಗಳನ್ನು ಟೀಕಿಸುತ್ತಲೇ ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಈ ವೇಳೆ ಅವರು ಎಸ್ಎಂ ಕೃಷ್ಣರವರು ಹೇಳಿದ್ದ, ಅಕ್ಬರ್​ ಹಾಗೂ ಬೀರ್​ಬಲ್​ಗೆ ಸಂಬಂಧಿಸಿದ ಕಥೆಯನ್ನು  ಸದನದಲ್ಲಿ ವಿವರಿಸಿದರು. ಅಂಗೈನಲ್ಲಿ ಕೂದಲು ಯಾಕಿಲ್ಲ ಎಂಬ ಪ್ರಶ್ನೆಯನ್ನು ರಾಜಕೀಯವಾಗಿ ವ್ಯಾಖ್ಯಾನ ಮಾಡಿದ ಡಿಕೆಶಿಯವರ ಮಾತು ಇಲ್ಲಿದೆ ಕೇಳಿ   

ಇವತ್ತು ನಾಳೆ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್! ಗುಡುಗು, ಮಿಂಚು, ಬಿರುಗಾಳಿ ಜೊತೆ ಭಾರೀ ಮಳೆಯ ಎಚ್ಚರಿಕೆ!